Viral Video : ಈ ಘಟನೆ ನಡೆದಿದ್ದು ಆಫ್ರಿಕಾದ ಕೀನ್ಯಾದಲ್ಲಿ. ದಾಹ ಇಂಗಿಸಿಕೊಳ್ಳಲು ಬಂದ ಎರಡು ಹೆಣ್ಣಾನೆಗಳಿಗೆ ಈ ನೀರು ಸಾವಿನ ದರ್ಶನ ಮಾಡಿಸಿದೆ. ಈ ಪ್ರದೇಶದಲ್ಲಿ ಬರಗಾಲ ಉಂಟಾದಾಗ ಇಂಥ ಘಟನೆಗಳು ಸಾಮಾನ್ಯ. ನೀರು ಹುಡುಕಿಕೊಂಡು ಬರುವ ಆನೇಕ ಪ್ರಾಣಿಗಳು ಹೀಗೆ ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುತ್ತವೆ. ಯಾರಾದರೂ ಇದ್ದರೆ, ಕಾಪಾಡಲು ಸಾಧ್ಯವಾದರೆ ಕಾಪಾಡುತ್ತಾರೆ ಇಲ್ಲವಾದಲ್ಲಿ ಇಲ್ಲ. ಸದ್ಯ ಈ ಆನೆಗಳೆರಡೂ ಬದುಕಿಬಂದಿವೆ. ನೀರು ಹುಡುಕಿಕೊಂಡು ಹೊರಟ ಈ ಆನೆಗಳು ನೀರನ್ನಷ್ಟೇ ನೋಡಿವೆ, ಸುತ್ತಲೂ ದಟ್ಟವಾದ ಕೆಸರು ತುಂಬಿಕೊಂಡಿದೆ ಎನ್ನುವುದರ ಕಡೆಗೆ ಇವುಗಳ ಗಮನ ಹೊರಳಿಲ್ಲ. ಚಲಿಸುತ್ತಿದ್ದಂತೆ ಜಿಗುಟಾದ ಮಣ್ಣಿನೊಳಗೆ ಇವುಗಳ ಕಾಲುಗಳು ಸಿಲುಕಿಕೊಂಡುಬಿಟ್ಟಿವೆ. ಈ ದೈತ್ಯಪ್ರಾಣಿಗಳನ್ನು ಈ ಸಂದರ್ಭದಿಂದ ಪಾರು ಮಾಡುವುದು ಹೇಗೆ? ಎಲ್ಲರೂ ನಿಂತು ನೋಡಿ ಹೋಗುವವರೇ. ಇದೇ ಸ್ಥಿತಿಯಲ್ಲಿ ಎರಡು ದಿನಗಳನ್ನು ಕಳೆದಿವೆ ಈ ಆನೆಗಳು. ಕೊನೆಗೆ ಈ ಪರಿಸ್ಥಿತಿಯಿಂದ ಹೊರಬಂದಿದ್ದು ಹೇಗೆ? ವಿಡಿಯೋ ನೋಡಿ.
ಹೆಲಿಕಾಪ್ಟರ್ನಲ್ಲಿ ಬಂದಿಳಿಯುವವರು ಶೆಲ್ಡ್ರಿಕ್ ವೈಲ್ಡ್ಲೈಫ್ ಟ್ರಸ್ಟ್ನ ಸದಸ್ಯರು. ಕಠಿಣ ಪರಿಶ್ರಮದ ನಂತರ ಆನೆಗಳನ್ನು ಆ ಪರಿಸ್ಥಿತಿಯಿಂದ ಕಾಪಾಡುವುದು ಕಂಡುಬರುತ್ತದೆ. ದಿಬ್ಬದ ಮೇಲೆ ಊರಿನವರೆಲ್ಲ ಬೆರಗಿನಿಂದ ನಿಂತುಕೊಂಡು ಈ ದೃಶ್ಯವನ್ನು ವೀಕ್ಷಿಸುವುದು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ 71,000 ಕ್ಕೂ ಹೆಚ್ಚು ಮೆಚ್ಚುಗೆ ಪಡೆದಿದೆ. ಅನೇಕರು ಈ ಕಾರ್ಯಾಚರಣೆಯ ತಂಡವನ್ನು ಶ್ಲಾಘಿಸಿದ್ದಾರೆ. ಹಲವಾರು ಜನರು ಆನೆಗಳ ಆರೋಗ್ಯ ಹೇಗಿದೆ ಈಗ ಎಂದು ವಿಚಾರಿಸಿಕೊಂಡಿದ್ದಾರೆ.
ಬರ ಎನ್ನುವುದು ಇಡೀ ಜೀವಸಂಕುಲವನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಆದ್ದರಿಂದ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:45 pm, Thu, 15 September 22