
ಖಾಸಗಿ ಬಾಹ್ಯಾಕಾಶ ನೌಕೆ ‘ಸ್ಪೇಸ್-ಎಕ್ಸ್’ (SpaceX)ನ ಸಂಸ್ಥಾಪಕ,ಟೆಸ್ಲಾ ಸಿಇಒ ಎಲೋನ್ ಮಸ್ಕ್(Elon Musk) ಅವರು ಕೋತಿಮರಿಯ ವಿಡಿಯೋವೊಂದಕ್ಕೆ ತಮ್ಮ ಒಂದು ವರ್ಷದ ಮಗನನ್ನು ಹೋಲಿಕೆ ಮಾಡಿ ಕಾಮೆಂಟ್ ಮಾಡಿದ್ದಾರೆ. ಸದ್ಯ ವಿಡಿಯೋ ಮತ್ತು ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೆಕ್ ಬಿಲಿಯನೆರ್ (Tech Billionaire) ಎಲೋನ್ ಮಸ್ಕ್ ಅವರು ತಮ್ಮ ಮಗನನ್ನುಕೋತಿಯ ಮರಿಗೆ ಹೋಲಿಕೆ ಮಾಡಿದ ವಿಡಿಯೋ ಸಖತ್ ವೈರಲ್ ಅಗಿದೆ. ಟ್ವಿಟರ್ನಲ್ಲಿ @Rainmaker1973 ಹೆಸರಿನ ಬಳಕೆದಾರರೊಬ್ಬರು ಕೋತಿಮರಿಯೊಂದು ಓಡಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಎಲನ್ ಮಸ್ಕ್ ಗಮನ ಸೆಳೆದಿದೆ. ವಿಡಿಯೋ ನೋಡಿ ಎಲೋನ್ ಅವರು ತಮ್ಮ ಮಗ X Æ A-XII ಕೂಡ ಇದೇ ರೀತಿ ಎಂದಿದ್ದಾರೆ. ಎಲನ್ ಅವರ ಈ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕೋತಿಮರಿ ಓಡಾಡುತ್ತಿರುವ ವಿಡಿಯೋವನ್ನು 2020ರಲ್ಲಿ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಎನ್ನುವವರು ಹಂಚಿಕೊಂಡಿದ್ದರು. ಇದೀಗ ಅದೇ ವಿಡಿಯೋವನ್ನು @Rainmaker1973 ಎನ್ನುವ ಬಳಕೆದಾರರು ಹಂಚಿಕೊಂಡಿದ್ದು, ಎಲನ್ ಮಸ್ಕ್ ಗಮನ ಸೆಳೆದಿದೆ. ಎಲನ್ ಮಸ್ಕ್ ಮಗ ಬೇಬಿ x 2021ರ ಮೇ 5 ರಂದು ಜನಿಸಿದ್ದರು. ಕಳೆದ ವರ್ಷ ಎಲನ್ ಮಸ್ಕ್ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲನ್ ಇತ್ತೀಚೆಗೆ ಪತ್ನಿ ಗ್ರಿಮ್ಸ್ರಿಂದ ಬೇರೆಯಾಗುವುದಾಗಿ ಘೋಷಿಸಿದ್ದರು. ಬೇರೆ ಬೇರೆಯಾದ ಮೇಲೇ ಕೂಡ ಸ್ನೇಹಿತರಾಗಿ ಉಳಿಯುತ್ತೇವೆ ಮತ್ತು ಒಂದು ವರ್ಷದ ಮಗನನ್ನು ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ:
Published On - 9:53 am, Sat, 22 January 22