ಲಂಡನ್, ನವೆಂಬರ್ 3: ವಿಶ್ವದ ನಂಬರ್ ಒನ್ ಶ್ರೀಮಂತ ಇಲಾನ್ ಮಸ್ಕ್ ತಮ್ಮ ಮಗನೊಬ್ಬನಿಗೆ ಭಾರತೀಯ ಹೆಸರಿಟ್ಟಿರುವುದು ಬೆಳಕಿಗೆ ಬಂದಿದೆ. ಅವರ ಗಮನ ಮಧ್ಯದ ಹೆಸರು ಚಂದ್ರಶೇಖರ್ ಎಂದಿದೆಯಂತೆ. ಈ ಸಂಗತಿಯನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ. ಬ್ರಿಟನ್ ರಾಜಧಾನಿ ನಗರಿಯಲ್ಲಿ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇಫ್ಟಿ ಸಮಿಟ್ ಕಾರ್ಯಕ್ರಮದಲ್ಲಿ ಇಲಾನ್ ಮಸ್ಕ್ ಅವರನ್ನು ಭೇಟಿಯಾದಾಗ ಅವರ ಮಗನ ಹೆಸರಿಗೂ ಭಾರತಕ್ಕೂ ಸಂಬಂಧ ಇರುವುದು ರಾಜೀವ್ ಚಂದ್ರಶೇಖರ್ಗೆ ಗೊತ್ತಾಯಿತಂತೆ. ಈ ವಿಚಾರವನ್ನು ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಶಿವೋನ್ ಝಿಲಿಸ್ ಮತ್ತು ಇಲಾನ್ ಮಸ್ಕ್ ಜೋಡಿಗೆ ಅವಳಿಜವಳಿ ಮಕ್ಕಳಿದ್ದಾರೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗು. ಗಂಡು ಮಗುವಿಗೆ ಮಧ್ಯದ ಹೆಸರನ್ನು ಚಂದ್ರಶೇಖರ್ ಎಂದು ಇಡಲಾಗಿದೆ. ಅದರ ಹೆಸರು ಸ್ಟ್ರೈಡರ್ ಚಂದ್ರಶೇಖರ್ ಮಸ್ಕ್ ಎಂದಿದೆ. ಕುತೂಹಲವೆಂದರೆ ಮನೆಯಲ್ಲಿ ಆ ಹುಡುಗನನ್ನು ಶೇಖರ್ ಎಂದು ಕರೆಯುತ್ತಾರಂತೆ. ಈ ಸಂಗತಿಯನ್ನು ಶಿವನ್ ಝಿಲಿಸ್ಳೇ ರಾಜೀವ್ ಚಂದ್ರಶೇಖರ್ ಪೋಸ್ಟ್ಗೆ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾಳೆ.
‘ಯುಕೆಯ ಬ್ಲೆಚ್ಲೀ ಪಾರ್ಕ್ನಲ್ಲಿ ನಡೆದ ಎಐ ಸೇಫ್ಟಿ ಸಮಿಟ್ನಲ್ಲಿ ನಾನ್ಯಾರನ್ನು ಭೇಟಿ ಮಾಡಿದೆ ನೋಡಿ… ಶಿವೋನ್ಗೆ ಹುಟ್ಟಿದ ತನ್ನ ಮಗನಿಗೆ ಚಂದ್ರಶೇಖರ್ ಎಂಬ ಮಧ್ಯದ ಹೆಸರಿರುವ ಸಂಗತಿಯನ್ನು ಇಲಾನ್ ಮಸ್ಕ್ ಹಂಚಿಕೊಂಡರು…’ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
Look who i bumped into at #AISafetySummit at Bletchley Park, UK.@elonmusk shared that his son with @shivon has a middle name “Chandrasekhar” – named after 1983 Nobel physicist Prof S Chandrasekhar pic.twitter.com/S8v0rUcl8P
— Rajeev Chandrasekhar 🇮🇳 (@Rajeev_GoI) November 2, 2023
ಅದಕ್ಕೆ ಶಿವನ್ ಝಿಲಿಸ್ ಪ್ರತಿಕ್ರಿಯಿಸಿ, ತನ್ನ ಮಗನಿಗೆ ಚಂದ್ರಶೇಖರ್ ಹೆಸರಿಟ್ಟಿರುವುದನ್ನು ಖಚಿತಪಡಿಸಿದ್ದಾರೆ. ‘ಹೌದು, ಅದು ನಿಜ. ನಾವು ಚಿಕ್ಕದಾಗಿ ಅವನನ್ನು ಶೇಖರ್ ಎಂದು ಕರೆಯುತ್ತೇವೆ. ನಮ್ಮ ಮಕ್ಕಳ ಪಾರಂಪರಿಕತೆಯನ್ನು ಮತ್ತು ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರನ್ನು ಗೌರವಿಸಲು ಆ ಹೆಸರು ಆಯ್ಕೆ ಮಾಡಿದೆವು’ ಎಂದು ಶಿವೋನ್ ಹೇಳಿದ್ದಾಳೆ.
Haha, yes, that’s true. We call him Sekhar for short, but the name was chosen in honor of our children’s heritage and the amazing Subrahmanyan Chandrasekhar
— Shivon Zilis (@shivon) November 2, 2023
ಈ ಹೆಸರು ಭಾರತದ ಶ್ರೇಷ್ಠ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರದ್ದು. 1910ರಲ್ಲಿ ಅವಿಭಿಜಿತ ಭಾರತದ ಲಾಹೋರ್ ನಗರದಲ್ಲಿ ಹುಟ್ಟಿದ್ದ ಚಂದ್ರಶೇಖರ್ ನಕ್ಷತ್ರಗಳ ಬೆಳವಣಿಗೆ ಇತ್ಯಾದಿ ಬಹಳಷ್ಟು ವಿಚಾರಗಳಲ್ಲಿ ಸಂಶೋಧನೆ, ಅಧ್ಯಯನ ನಡೆಸಿದ್ದರು. ಒಂದು ಸ್ಥಿರ ಶ್ವೇತ ಕುಬ್ಜ ನಕ್ಷತ್ರದ ಗರಿಷ್ಠ ತೂಕ ಎಷ್ಟಿರಬಬಹುದು ಎಂಬುದನ್ನು ಇವರು ಕಂಡುಹಿಡಿದರು. ಈಗಲೂ ಇದಕ್ಕೆ ಚಂದ್ರಶೇಖರ್ ಲಿಮಿಟ್ ಎಂದು ಕರೆಯಲಾಗುತ್ತದೆ. ಎಸ್ ಚಂದ್ರಶೇಖರ್ ಅವರಿಗೆ 1983ರಲ್ಲಿ ನೊಬೆಲ್ ಬಹುಮಾನ ಕೂಡ ಸಿಕ್ಕಿತ್ತು.
ಇದನ್ನೂ ಓದಿ: Viral: ಹೆಂಡತಿಯಲ್ಲಿ ತಾಯಿಯನ್ನು ಕಾಣಬೇಕೆಂದುಕೊಂಡಿರುವ ಹುಡುಗರೇ ಇದನ್ನು ಓದಿ
ಸ್ಟ್ರೈಡರ್ ಚಂದ್ರಶೇಖರ್ ಮಸ್ಕ್ ಅವರ ತಾಯಿ ಶಿವೋನ್ ಝಿಲಿಸ್ ಅರ್ಧ ಭಾರತೀಯೆ. ಇವರ ತಾಯಿ ಹೆಸರು ಶಾರದಾ. ಆಕೆ ಪಂಜಾಬಿ. ಈಕೆಯ ತಂದೆ ರಿಚರ್ಡ್ ಕೆನಡಾದವರು. ಇಲಾನ್ ಮಸ್ಕ್ ಅವರ ನ್ಯೂರಾಲಿಂಕ್ನಲ್ಲಿ ಉನ್ನತ ಹುದ್ದೆಯಲ್ಲಿರುವ ಶಿವೋನ್ ಝಿಲಿಸ್ ಇಲಾನ್ ಮಸ್ಕ್ ಅವರನ್ನು ಅಧಿಕೃತವಾಗಿ ಮದುವೆಯಾಗಿಲ್ಲ. 2021ರ ನವೆಂಬರ್ನಲ್ಲಿ ಐವಿಎಫ್ ಮೂಲಕ ಇಬ್ಬರೂ ಅವಳಿಮಕ್ಕಳನ್ನು ಪಡೆದಿದ್ದಾರೆ. 37 ವರ್ಷದ ಶಿವೋನ್ ಝಿಲಿಸ್ ಮತ್ತು ಮಸ್ಕ್ ಜೊತೆ ಸೆಕ್ಸ್ ಸಂಬಂಧ ಇಲ್ಲ ಎಂತಲೂ ಹೇಳಲಾಗುತ್ತಿದೆ. ಅದೇನೇ ಆದರೂ ಇಬ್ಬರೂ ಕೂಡ ಎರಡು ಮಕ್ಕಳಿಗೆ ಅಪ್ಪ ಅಮ್ಮಂದಿರೆಂಬುದು ನಿಜ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ