
ಕೊರೊನಾ ಬಳಿಕ ‘ವರ್ಕ್ ಫ್ರಂ ಹೋಮ್’ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಆಫೀಸಿಗೆ ಹೋಗಿ ಕೆಲಸ ಮಾಡೋದಕ್ಕಿಂತ ವರ್ಕ್ ಫ್ರಮ್ ಹೋಮ್ (work from home) ಬೆಸ್ಟ್ ಎನ್ನುವವರೇ ಹೆಚ್ಚು. ಇದೀಗ ಟೆಕ್ಕಿಯೊಬ್ಬರಿಗೆ ವರ್ಕ್ ಫ್ರಮ್ ಹೋಮ್ ಕುಟುಂಬದ ಜತೆಗೆ ಸಮಯ ಕಳೆಯಲು ನೆರವಾಗಿದೆ. ತಂದೆಗೆ ಹೃದಯಾಘಾತವಾದ ಬಳಿಕ ಎರಡು ತಿಂಗಳು ಕಾಲ ಊರಲ್ಲೇ ಇದ್ದು ಆಫೀಸ್ ವರ್ಕ್ ಜತೆಗೆ, ಅವರ ಆರೈಕೆ ಮಾಡಿದ್ದಾರೆ. ವರ್ಕ್ ಫ್ರಮ್ ಹೋಮ್ನಿಂದಲೇ ಎಲ್ಲವೂ ಸಾಧ್ಯವಾಯ್ತು ಎಂದು ಹೇಳಿದ್ದಾರೆ. ಈ ಪೋಸ್ಟ್ ವೈರಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಪಿ ಸ್ಪೀಕ್ (kp speaks) ಹೆಸರಿನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ವರ್ಕ್ ಫ್ರಮ್ ಹೋಮ್ ನೀತಿ ಅನ್ನೋದು ಕಾರ್ಪೊರೇಟ್ ಉದ್ಯೋಗಿಗಳಿಗೆ ಪ್ರಯೋಜನದಾಯಕ. ಕೆಲವು ತಿಂಗಳ ಹಿಂದೆ ನನ್ನ ತಂದೆಗೆ ಹೃದಯಾಘಾತವಾಯ್ತು. ರಜೆ ಹಾಗೂ ಕೆಲಸದ ಬಗ್ಗೆ ಯೋಚನೆ ಮಾಡದೇನೆ ಊರಿಗೆ ತೆರಳಿದೆ. ಎರಡು ತಿಂಗಳ ಕಾಲ ತಂದೆ ತಾಯಿಯ ಜತೆಗೆ ಇದ್ದು ಅವರ ಚಿಕಿತ್ಸೆಯ ಬಳಿಕವು ಔಷಧಿ ನಿರ್ವಹಣೆ ಮಾಡಿದೆ ಎಂದಿದ್ದಾರೆ.
ಆರೋಗ್ಯದಲ್ಲಿ ಚೇತರಿಕೆಯ ಕಾಣಲು ವೈದ್ಯರ ಚಿಕಿತ್ಸೆಯಿದ್ದರೆ ಸಾಲದು, ಕುಟುಂಬದ ಬೆಂಬಲವೂ ಅತ್ಯಗತ್ಯವಾಗಿ ಬೇಕು. ಪೋಷಕರಿಗೆ ಅಗತ್ಯವಿದ್ದ ಸಮಯದಲ್ಲಿ ಅವರ ಜೊತೆ ಇರಲು ಸಾಧ್ಯವಾಗಿದ್ದಕ್ಕೆ ನನ್ನ ಮ್ಯಾನೇಜರ್ ಹಾಗೂ ಕಂಪನಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಅವಶ್ಯಕತೆ ಇದ್ದಾಗ ನನ್ನ ತಂದೆ ತಾಯಿಗೆ ನಾನು ಇದ್ದೆ. ಬೇರೆ ಉದ್ಯೋಗಗಳಲ್ಲಿ ಈ ರೀತಿ ಅವಕಾಶ ಇರಲ್ಲ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿಕೊಂಡೇ ಆನ್ಲೈನ್ ಮೀಟಿಂಗ್ ಹಾಜರಾದ ಜೆನ್ ಝೆಡ್ ಉದ್ಯೋಗಿ
ಈ ಪೋಸ್ಟ್ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವರ್ಕ್ ಫ್ರಮ್ ಹೋಮ್ ಕಲ್ಚರ್ ಎಲ್ಲರಿಗೂ ಸ್ವಾತಂತ್ರ್ಯ ನೀಡಿದೆ ಎಂದಿದ್ದಾರೆ. ಇನ್ನೊಬ್ಬರು, ಜಾಗ್ರತೆಯಿಂದ ಇರಿ. ಎಲ್ಲವೂ ಚೆನ್ನಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ವರ್ಕ್ ಫ್ರಮ್ ಹೋಮ್ ಸಿಕ್ಕಿದ್ದು ನಿಮ್ಮ ಅದೃಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ