Viral: ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಬಾಸ್‌ನ್ನು ವಜಾಗೊಳಿಸಿದ ಕಂಪನಿ ನಿರ್ಧಾರದಿಂದ ಉದ್ಯೋಗಿ ಶಾಕ್

ಈಗಿನ ಕಾಲದಲ್ಲಿ ಕೆಲಸಗಿಟ್ಟಿಸಿಕೊಳ್ಳುವುದು ಒಂದು ರೀತಿಯ ಕಷ್ಟ ಅದನ್ನು ಉಳಿಸಿಕೊಳ್ಳುವುದು ಮತ್ತೊಂದು ರೀತಿಯ ಸವಾಲು. ಹೀಗಾಗಿ ಯಾವುದೇ ಉದ್ಯೋಗಕ್ಕೂ ಗ್ಯಾರಂಟಿ ಇಲ್ಲ. ಏಕಾಏಕಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರಕ್ಕೆ ಬರುತ್ತೆ. ಇಲ್ಲೊಬ್ಬರು ಉದ್ಯೋಗಿ ತನ್ನ ಬಾಸ್‌ನ್ನು ಅಂತಹ ಪರಿಸ್ಥಿತಿಯಲ್ಲಿ ನೋಡಿದ್ದಾರೆ. ಎಂಟು ವರ್ಷಗಳ ಕಾಲ ಒಂದೇ ಕಂಪನಿಯಲ್ಲಿ ಕೆಲಸ ಮಾಡಿದ್ದ ಬಾಸ್‌ನ್ನು ಯಾವುದೇ ಸೂಚನೆ ನೀಡದೇ ವಜಾಗೊಳಿಸಿದ್ದಾರೆ. ತನ್ನ ಕಣ್ಣಾರೆ ನಡೆದ ಘಟನೆಯನ್ನು ಉದ್ಯೋಗಿ ಹಂಚಿಕೊಂಡಿದ್ದು, ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.

Viral: ಎಂಟು ವರ್ಷಗಳ ಕಾಲ ಕೆಲಸ ಮಾಡಿದ ಬಾಸ್‌ನ್ನು ವಜಾಗೊಳಿಸಿದ ಕಂಪನಿ ನಿರ್ಧಾರದಿಂದ ಉದ್ಯೋಗಿ ಶಾಕ್
ಸಾಂದರ್ಭಿಕ ಚಿತ್ರ
Image Credit source: Pinterest

Updated on: Apr 01, 2026 | 5:44 PM

ಇತ್ತೀಚೆಗಿನ ದಿನಗಳಲ್ಲಿ ಕೆಲಸ ಉಳಿಸಿಕೊಳ್ಳೋದು ಕಷ್ಟದ ಕೆಲಸ. ಕಂಪನಿಗಳಲ್ಲಿ (company) ವಿವಿಧ ಕಾರಣಗಳಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಾಗಿ ಖಾಸಗಿ ಕಂಪನಿಗಳಿಗೆ ಕೆಲಸಕ್ಕೆ ಸೇರಿಕೊಂಡರೆ ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ಯಾವಾಗ ಹೇಗೆ ಕೆಲಸ ಹೋಗುತ್ತದೆ ಎಂದು ಹೇಳಲು ಅಸಾಧ್ಯ. ಇದೀಗ ಉದ್ಯೋಗಿಯೊಬ್ಬರು ತಮ್ಮ ಕಚೇರಿಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಎಂಟು ವರ್ಷಗಳಿಂದ ಒಂದೇ ಕಂಪನಿಯಿಂದ ಕೆಲಸ ಮಾಡುತ್ತಿದ್ದ ತನ್ನ ಬಾಸ್‌ನ್ನು (Boss) ಹೆಚ್ ಆರ್ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.  ಇದು ಉದ್ಯೋಗ ಭದ್ರತೆ ಮತ್ತು ಕಾರ್ಪೊರೇಟ್ ನಿಷ್ಠೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬಂಜಿ ಅಲೋ (Banji Alo) ಹೆಸರಿನ ಉದ್ಯೋಗಿಯೊಬ್ಬರು ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ  ಎಂಟು ವರ್ಷಗಳ ಕಾಲ ಕಂಪನಿಯಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ರೂ ಬಾಸ್‌ನ್ನು ಯಾವುದೇ ಸೂಚನೆ ನೀಡದೇ ವಜಾಗೊಳಿಸಿದ್ದಾರೆ ಎಂದು ವಿವರಿಸಿದ್ದಾರೆ. ನನ್ನ ಮಾಜಿ ಬಾಸ್ ಕಂಪನಿಯಲ್ಲಿ 8 ವರ್ಷಗಳ ಕಾಲ ದುಡಿದರೂ ಕೆಲಸದಿಂದ ತೆಗೆದುಹಾಕಲಾಯಿತು. ಅವರು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಬಂದರು.

ವೈರಲ್ ಪೋಸ್ಟ್ ಇಲ್ಲಿದೆ

ಆದರೆ ಕೆಲವು ಗಂಟೆಗಳ ನಂತರ, ಹೆಚ್ ಆರ್ ಅವರನ್ನು ಮೀಟಿಂಗ್ ಕರೆದು ಇದು ಅವರ ಕೊನೆಯ ದಿನ ಎಂದು ಹೇಳಿದರು. ಆದರೆ ನನ್ನ ಬಾಸ್ ರಾತ್ರಿ ಮತ್ತು ವಾರಾಂತ್ಯದಲ್ಲಿ ಕೆಲಸ ಮಾಡುತ್ತಿದ್ದ, ಯಾವಾಗಲೂ ಕಂಪನಿಗೆ ಮೊದಲ ಆದ್ಯತೆ ನೀಡುವ ಸಹೋದ್ಯೋಗಿ. ಹೆಚ್ ಆರ್ ಅವರು ಹೇಳಿದ ಮಾತು ಕೇಳಿ ಅವರು ತಮ್ಮ ಲ್ಯಾಪ್‌ಟಾಪ್ ಮತ್ತು ಎಂಟ್ರಿ ಕಾರ್ಡ್‌ನ್ನು ಹಸ್ತಾಂತರಿಸಿದರು. ಈ ಸುದ್ದಿ ಆಘಾತಕಾರಿಯಾಗಿತ್ತು, ಆದ್ದರಿಂದ ಅವರು ವ್ಯವಹಾರ ಮುಗಿಯುವ ಮೊದಲೇ ಹೊರಡಲು ನಿರ್ಧರಿಸಿದರು. ಕಂಪನಿಗಳು ತಮ್ಮನ್ನು ತಾವು ನೋಡಿಕೊಳ್ಳುತ್ತವೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಹೋಗಲು ಇಷ್ಟವಿಲ್ಲ; 34 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ಯುವಕ

ಮಾರ್ಚ್ 31 ರಂದು ಮಾಡಲಾದ ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ತುಂಬಾ ದುಃಖಕರ ಮತ್ತು ಹೃದಯವಿದ್ರಾವಕ. ಇಂತಹ ನಿರ್ಧಾರದಿಂದ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ನೀವು ಕೆಲಸದಲ್ಲಿ ಎಷ್ಟೇ ಒಳ್ಳೆಯವರಾಗಿದ್ದರೂ ಪರವಾಗಿಲ್ಲ, ಸರದಿ ಬಂದಾಗ ನೀವು ಹೊರಡಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತುಂಬಾ ಕರುಣಾಜನಕ ಘಟನೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:42 pm, Wed, 1 April 26

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us