AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಎದ್ದು ನಿಂತು ನಡೆಯಲು ಪ್ರಯತ್ನಿಸುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ

ಮರಿ ಆನೆಗಳ ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ತರಹದ ಖುಷಿ. ಈ ದೃಶ್ಯ ನೋಡಿದ್ರೆ ನಿಮ್ಮ ಕಣ್ಣು ನಿಜವಾಗಿ ಕಣ್ಣು ತುಂಬಿ ಬರುತ್ತದೆ. ಮರಿಯಾನೆ ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದಂತೆ ತಾಯಾನೆ ತನ್ನ ಕಂದನನ್ನು ಬೀಳದಂತೆ ಬಹಳ ಕಾಳಜಿ ವಹಿಸಿದೆ. ಈ ದೃಶ್ಯ ನೆಟ್ಟಿಗರ ಹೃದಯ ಮುಟ್ಟಿದ್ದು, ಕಾಮೆಂಟ್‌ ಮಾಡಿ ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯಾವಿಲ್ಲ ಎಂದಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಎದ್ದು ನಿಂತು ನಡೆಯಲು ಪ್ರಯತ್ನಿಸುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Jul 10, 2026 | 11:29 AM

Share

ತಾಯಿಯ (mother) ಪ್ರೀತಿಯೇ ಹಾಗೆ, ಸದಾ ಮಕ್ಕಳ ಕಾಳಜಿ ವಹಿಸುವ, ತೊಂದರೆಯಾಗದಂತೆ ನೋಡಿಕೊಳ್ಳುತ್ತಾಳೆ. ಈ ವಿಚಾರದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಮೂಕ ಪ್ರಾಣಿಗಳು ಕೂಡ ತನ್ನ ಕಂದಮ್ಮನ ಮೇಲೆ ವಿಶೇಷವಾದ ಪ್ರೀತಿ ಹಾಗೂ ಕಾಳಜಿ ತೋರುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಎದ್ದು ನಿಲ್ಲಲು ಪ್ರಯತ್ನಿಸುತ್ತಿದ್ದ ಮರಿಯಾನೆಯನ್ನು (baby elephant) ಬೀಳದಂತೆ ತಾಯಾನೆ ತಡೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಫ್ಯೂಚರ್ ಫಾರ್ ಎಲಿಫೆಂಟ್ (futureforelephants)ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಆಗ ತಾನೇ ಹುಟ್ಟಿದ ಮರಿಯಾನೆಯೊಂದು ಎದ್ದು ನಿಲ್ಲಲು ಪ್ರಯತ್ನಿಸುತ್ತಿದೆ. ಇತ್ತ ತಾಯಾನೆ ತನ್ನ ಕಂದಮ್ಮ ತನ್ನ ಸೊಂಡಿಲಿನಿಂದ ಮರಿಯಾನೆ ಬೀಳದಂತೆ ತಡೆದು ನಿಲ್ಲಿಸುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗಾಯಗೊಂಡು ಕುಂಟುತ್ತಾ ನಡೆಯುತ್ತಿದ್ದ ಮಾಲಕಿಯನ್ನೇ ಅನುಕರಣೆ ಮಾಡಿದ ಗಜರಾಜ

ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟ್ಟ ಕಂದಮ್ಮ ನಡೆಯುತ್ತದೆ, ದೇವರು ಆ ಆತ್ಮವಿಶ್ವಾಸ ಕೊಟ್ಟಿದ್ದಾನೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಮ್ಮನಿಗಿಂತ ಮಿಗಿಲಾದದ್ದು ಯಾವುದು ಇಲ್ಲ ಎಂದಿದ್ದಾರೆ. ಮತ್ತೊಬ್ಬರು, ತಾಯಿ ಮಕ್ಕಳ ಬಾಂಧವ್ಯ ಹಾಗೆ, ನೋಡಲು ಎರಡು ಕಣ್ಣು ಸಾಲದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Fri, 10 July 26

Follow Us