London: ಸಲಾಡ್ನಲ್ಲಿ ಜಿರಳೆ ಮತ್ತದರ ಮೊಟ್ಟೆಗಳು ಇದ್ದ ಪೋಸ್ಟ್ ವೈರಲ್ ಆಗಿದ್ದನ್ನು ಇತ್ತೀಚೆಗಷ್ಟೇ ಓದಿದ್ದಿರಿ. ಇದೀಗ ಲಂಡನ್ನಲ್ಲಿ ಮೆಕ್ಡೊನಾಲ್ಡ್ಸ್ನಿಂದ ಮಕ್ಕಳಿಗಾಗಿ ತರಿಸಿದ ಹ್ಯಾಪ್ಪಿ ಮೀಲ್ (Happy Meal)ನಲ್ಲಿ ಸಿಗರೇಟ್ ತುಂಡು ಮತ್ತು ಬೂದಿ ಪತ್ತೆಯಾಗಿದೆ. ಹತಾಶೆಗೆ ಒಳಗಾದ ಮಹಿಳೆ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಫ್ರೆಂಚ್ ಫ್ರೈನೊಂದಿಗೆ ಬಂದಿರುವ ಸಿಗರೇಟು ತುಂಡನ್ನು ಈ ಫೋಟೊದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ನೆಟ್ಟಿಗರು ಈ ಪೋಸ್ಟ್ ಓದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಮಹಾರಾಷ್ಟ್ರದ ಈ ಬಾಲಕನ ಕೌಶಲಕ್ಕೆ ನೆಟ್ಟಿಗರೇನೋ ಮನಸೋತರು, ಆದರೆ…
ಅಕ್ಟೋಬರ್ 18 ರಂದು, 35 ವರ್ಷದ ಮಹಿಳೆ ಜೆಮ್ಮಾ ಕಿರ್ಕ್-ಬೋನರ್ ಇಂಗ್ಲೆಂಡ್‌ನ ಬ್ಯಾರೋ-ಇನ್-ಫರ್ನೆಸ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್ನಿಂದ ಒಂದು ಮತ್ತು ಮೂರು ವರ್ಷದ ತನ್ನ ಮಕ್ಕಳಿಗಾಗಿ ಹ್ಯಾಪಿ ಮೀಲ್ ಖರೀದಿಸಿದ್ದಳು. ಮನೆಗೆ ಬಂದು ಮಕ್ಕಳೆದುರು ಆ ಪೊಟ್ಟಣವನ್ನು ಬಿಚ್ಚಿದಳು. ಆದರೆ ಫ್ರೆಂಚ್ ಫ್ರೈಸ್ನಲ್ಲಿ ಸಿಗರೇಟಿನ ತುಂಡು ನೋಡಿ ದಿಗ್ಭ್ರಮೆಗೆ ಒಳಗಾದಳು. ‘ಆಟಿಕೆಯನ್ನು ಮರೆತುಬಿಡಿ, ಆದರೆ ಊಟದ ರುಚಿಯನ್ನು ಹೆಚ್ಚಿಸಲು ಸಿಗರೇಟು ಮತ್ತು ಬೂದಿ ಇದರೊಂದಿಗೆ ಬಂದಿದೆ. ಕಂಪ್ಲೇಂಟ್ ನೀಡಲು ಫೋನ್ಮಾಡಿದರೆ ಅತ್ತಕಡೆಯಿಂದ ಆಕೆ ಒರಟಾಗಿ ಮಾತನಾಡಿ ಫೋನ್ ಇಟ್ಟಳು’ ಎಂದಿದ್ದಾರೆ ಜೆಮ್ಮಾ.
ಈ ಪೋಸ್ಟ್ನಡಿ ಅನೇಕರು ಪ್ರತಿಕ್ರಿಯಿಸಿದ್ದು, ನನ್ನ ಮಕ್ಕಳಿಗಾಗಿ ಹ್ಯಾಪ್ಪಿ ಮೀಲ್ ಆರ್ಡರ್ ಮಾಡಿದ್ದೆ, ಆಟಿಕೆಯೇ ಅದರೊಳಗೆ ಇರಲಿಲ್ಲ ಎಂದಿದ್ದಾರೆ. ಅಯ್ಯೋ ಇದು ಅತ್ಯಂತ ಖೇದನೀಯ. ನಾವು ಆರ್ಡರ್ ಮಾಡಿದ ಊಟದಲ್ಲಿ ಯಾವ ಆಟಿಕೆಯೂ ಇರಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಲೋಕಲ್ ಕೌನ್ಸಿಲ್ಗೆ ದೂರು ನೀಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : Viral: ಮುಂಬೈ; ಮಹಿಳೆಯ ಆ್ಯಪಲ್ ಪೆನ್ಸಿಲ್ ಮರಳಿ ಸಿಕ್ಕ ಕಥೆ; ನೆಟ್ಟಿಗರು ಹೇಳಿದ್ದೇನು?
ಡಾಲ್ಟನ್ ರೋಡ್ ರೆಸ್ಟೊರೆಂಟ್‌ನ ಫ್ರಾಂಚೈಸಿಯಾದ ಮಾರ್ಕ್ ಬ್ಲಂಡೆಲ್ ಈ ಪ್ರಕರಣಕ್ಕೆ ಸಂಬಂಧಿಸಿ, ‘ಆಹಾರ ಸುರಕ್ಷತೆ ನಮಗೆ ಅತ್ಯಂತ ಮಹತ್ವದ್ದು. ನಾವು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಈ ವಿಷಯವಾಗಿ ನಾವು ಸೂಕ್ತ ತನಿಖೆ ಮಾಡಿ ಪರಿಹಾರ ಒದಗಿಸಲು ಸಹಾಯ ಮಾಡುತ್ತೇವೆ’ ಎಂದಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:53 pm, Wed, 25 October 23