ನಕಲಿ ವಸ್ತುಗಳನ್ನು ತಯಾರಿಸುವುದರಲ್ಲಿ ಚೀನಾ ಎತ್ತಿದ ಕೈ. ಇವರ ನಕಲಿ ಪದಾರ್ಥಗಳ ಹಾವಳಿ ಹೆಚ್ಚಿದ್ದು, ಚೀನಾದ ಅದೆಷ್ಟೋ ನಕಲಿ ವಸ್ತುಗಳು ಅರಿವಿಲ್ಲದಂತೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಸುಲಭವಾಗಿ ಜನರ ಕೈಗೆಟುಕುತ್ತಿವೆ. ಚೀನಾದಲ್ಲಿ ತಯಾರಾಗುವಂತಹ ಉತ್ಪನ್ನಗಳು ಮಾತ್ರವಲ್ಲ ಇಲ್ಲಿನ ಪ್ರಸಿದ್ಧ ಜಲಪಾತ ಕೂಡಾ ನಕಲಿಯಂತೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಯುಂಟೈ ಜಲಪಾತ ಏಷ್ಯಾದ ಅತೀ ಎತ್ತರದ ನೈಸರ್ಗಿಕ ಜಲಪಾತ ಎಂಬ ಖ್ಯಾತಿಯನ್ನು ಪಡೆದಿದೆ. ಇಲ್ಲಿನ ಪ್ರಕೃತಿಯ ರಮಣೀಯ ದೃಶ್ಯವನ್ನು ಸವಿಯಲು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇತ್ತೀಚಿಗೆ ಈ ಜಲಪಾತಕ್ಕೆ ಸಂಬಂಧಪಟ್ಟ ವಿಡಿಯೋವೊಂದು ವೈರಲ್ ಆಗಿದ್ದು, ಇದು ನೈಸರ್ಗಿಕ ಜಲಪಾತವಲ್ಲ ಬದಲಿಗೆ ಇಲ್ಲಿ ಪೈಪ್ನಲ್ಲಿ ನೀರು ಬಿಡುವ ಮೂಲಕ ಪ್ರವಾಸಿಗರನ್ನು ಮರುಳು ಮಾಡಲಾಗುತ್ತಿದೆ ಎಂಬ ಆಪಾದನೆ ಕೇಳಿಬಂದಿದೆ.
The source of Asia’s highest #waterfall is a water pipe?😅 In Xiuwu County, Henan Province, the Yuntai Mountain Scenic Area boasts the “highest waterfall in Asia,” the Yuntai Mountain Waterfall, with a staggering drop of 314 meters.
A man discovered with a #drone on Tuesday that… pic.twitter.com/m4EJ7rjQz7— Shanghai Daily (@shanghaidaily) June 4, 2024
ಪ್ರವಾಸಿಗರೊಬ್ಬರು ಯುಂಟೈ ಪರ್ವತದ ಮೇಲ್ಭಾಗಕ್ಕೆ ಟ್ರೆಕ್ಕಿಂಗ್ ಹೋದ ಸಂದರ್ಭದಲ್ಲಿ ಇಲ್ಲಿನ ಜಲಪಾತಕ್ಕೆ ಪೈಪ್ ಮೂಲಕ ನೀರು ಹರಿಬಿಡುತ್ತಿದ ವಿಚಾರವನ್ನು ಅವರು ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಇದರ ಬಗ್ಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲೂ ಹರಿಬಿಟ್ಟಿದ್ದಾರೆ. ಈ ವಿಡಿಯೋ ದೃಶ್ಯಾವಳಿ ವೈರಲ್ ಆಗುತ್ತಿದ್ದಂತೆ ಇಲ್ಲಿನ ಆಡಳಿತ ಮಂಡಳಿ “ಪ್ರವಾಸಿಗರೂ ಇಲ್ಲಿ ಹೆಚ್ಚು ಬರುತ್ತಿದ್ದು, ಮಳೆಯಿಲ್ಲದ ಕಾರಣ ಜಲಪಾತ ಬರಿದಾಗಬಾರದೆಂದು ಪೈಪ್ ಮೂಲಕ ನೀರು ಬಿಡಲಾಗುತ್ತಿದೆ” ಎಂದು ಒಪ್ಪಿಕೊಂಡಿದೆ.
ಇದನ್ನೂ ಓದಿ: ಮಾತು ಬಾರದ ಮಗನ ಮೊದಲ ತೊದಲು ನುಡಿಗಳನ್ನು ಕೇಳಿ ಭಾವುಕಳಾದ ತಾಯಿ
ಈ ಕುರಿತ ವಿಡಿಯೋವನ್ನು Shanghai Daily ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಜಲಪಾತದ ಮೇಲ್ಭಾಗದಲ್ಲಿ ಪೈಪ್ ಮೂಲಕ ನೀರು ಹರಿಬಿಡುತ್ತಿರುವ ದೃಶ್ಯವನ್ನು ಕಾಣಬಹುದು.
ಮೇ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 31 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದ್ದು, ಇದೆಲ್ಲಾ ಮೇಡ್ ಚೀನಾದ ಪ್ರಭಾವ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: