Viral Video: ಮಾತು ಬಾರದ ಮಗನ ಮೊದಲ ತೊದಲು ನುಡಿಗಳನ್ನು ಕೇಳಿ ಭಾವುಕಳಾದ ತಾಯಿ

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ಭಾವನಾತ್ಮಕ ವಿಡಿಯೋ ದೃಶ್ಯಾವಳಿಗಳು ನಮ್ಮ ಕಣ್ಣಂಚಲಿ ನೀರು ತರಿಸುತ್ತವೆ. ಸದ್ಯ ಅಂತಹದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಮಾತು ಬಾರದ ಮಗನ ಜೊತೆ ಮಾತನಾಡುವ ಸಂದರ್ಭದಲ್ಲಿ ಆ ಮಗು  ಮೊದಲ ಬಾರಿಗೆ ತೊದಲು ಮಾತುಗಳನ್ನಾಡಿದ್ದನ್ನು ಕಂಡು  ಮಗುವಿನ ತಾಯಿ ಭಾವುಕರಾಗಿದ್ದಾರೆ. 

Viral Video: ಮಾತು ಬಾರದ ಮಗನ ಮೊದಲ ತೊದಲು ನುಡಿಗಳನ್ನು ಕೇಳಿ ಭಾವುಕಳಾದ ತಾಯಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2024 | 5:16 PM

ಕಿವಿ ಕೇಳಿಸದ ಹಾಗೂ ಮಾತು ಬಾರದ ಮೂಕ ಮಕ್ಕಳ ವೇದನೆಯನ್ನು ಹೆತ್ತಮ್ಮ ಮಾತ್ರ ಸುಲಭವಾಗಿ ಅರ್ಥೈಸಬಲ್ಲಳು. ತನ್ನ ಮಗುವಿನ ಜೊತೆಗೆ ಪ್ರತಿನಿತ್ಯ ಸಂವಹನ ನಡೆಸುತ್ತಾ ಮೂಕ ಮಗುವನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾಳೆ. ಅಂತಹದೇ ತಾಯಿ ಮತ್ತು ಮೂಕ ಮಗುವಿನ ಸುಂದರ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಮಾತು ಬಾರದ ಮಗನ ಜೊತೆ ತಾಯಿಯೊಬ್ಬರು  “ಗುಡ್ ಮಾರ್ನಿಂಗ್ ಮಗನೇ” ಎಂದು ಹೇಳುವಾಗ ಮಾತು ಬಾರದ ಆ ಮಗು ಮೊದಲ ಬಾರಿಗೆ ಮೊದಲ ಬಾರಿಗೆ ಮಾತುಗಳನ್ನಾಡುತ್ತದೆ.  ಮೊದಲ ಸಲ ಮಗನ ಮಾತುಗಳನ್ನು ಕೇಳಿ ಆ ತಾಯಿ ಭಾವುಕರಾಗಿದ್ದಾರೆ. ಈ ಕುರಿತ ಭಾವನಾತ್ಮಕ ವಿಡಿಯೋವೊಂದು ಇದೀಗ ವೈರಲ್ ಆಗಿದೆ.

ಈ ವಿಡಿಯೋವೊಂದನ್ನು buitengebieden ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಾತು ಬಾರದ ಮಗು ತನ್ನ ತಾಯಿಯೊಂದಿಗೆ ಮೊದಲ ಬಾರಿಗೆ ಮಾತನಾಡಿದ ಕ್ಷಣ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಮೂಕ ಮಗನೊಂದಿಗೆ ಆತನ ತಾಯಿ ಸಂವಹನ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು. ಬೆಳಗ್ಗೆ ಎದ್ದು ಮಾತು ಬಾರದ ಮಗನ ಬಳಿ ಬಂದಂತಹ ತಾಯಿ ಗುಡ್ ಮಾರ್ನಿಂಗ್ ಮಗನೇ ಎಂದು ಹೇಳುತ್ತಾರೆ. ಜೊತೆಗೆ ನೀನು ಕೂಡಾ ಗುಡ್ ಮಾರ್ನಿಂಗ್ ಎಂದು ಹೇಳು ಕಂದ ಅಂತ ಹೇಳ್ತಾರೆ. ಆ ಸಂದರ್ಭದಲ್ಲಿ ಅಮ್ಮನ ಹತ್ತಿರ ಬಂದು ಪುಟ್ಟ ಮಗ ಮುದ್ದಾಗಿ ಗುಡ್ ಮಾರ್ನಿಂಗ್ ಎನ್ನುತ್ತಾ ಅಲ್ಲಿಂದ ಎದ್ದು ಹೋಗ್ತಾನೆ. ಹೀಗೆ ಮಾತು ಬಾರದ ಮಗ ಮೊದಲ ಬಾರಿಗೆ ಮಾತನಾಡಿದ್ದನ್ನು ಕಂಡು ಆ ತಾಯಿ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಬಿಯರ್ ಖರೀದಿಸುವಾಗ ತಂದೆ ಕೈಗೆ ತಗ್ಲಾಕೊಂಡ ಯುವಕ, ಬಾರ್​​​ನಲ್ಲಿ ಎಲ್ಲರ ಮುಂದೆ ಮಗನಿಗೆ ಚಪ್ಪಲಿ ಏಟು

ಜೂನ್  08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 11.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದ್ದು, ಈ ಮುದ್ದಾದ ವಿಡಿಯೋವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಬಿಗ್​ಬಾಸ್ ಮನೆಯಲ್ಲಿ ‘ಯಜಮಾನ’, ಝಾನ್ಸಿ ಆವಾಜ್​ಗೆ ತಲೆತಗ್ಗಿಸಿದ ರಜತ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್