ಆನೆಗಳು ಭಾವನಾತ್ಮ ಜೀವಿಗಳು. ಮನುಷ್ಯನೊಂದಿಗೆ ಆನೆಗಳು ಬಹುಬೇಗ ಆಪ್ತವಾಗುತ್ತದೆ. ಒಂದು ಅಧ್ಯಯನದ ಪ್ರಕಾರ ಮನುಷ್ಯರಾದ ನಮಗೆ ನಾಯಿ, ಬೆಕ್ಕುಗಳು ಎಷ್ಟು ಮುದ್ದಾಗಿ ಕಾಣುತ್ತದೆಯೋ, ಹಾಗೇನೆ ಆನೆಗಳಿಗೆ ಮನುಷ್ಯರು ತುಂಬಾ ಮುದ್ದಾಗಿ ಕಾಣುತ್ತಾರೆಯಂತೆ. ಬಹುಶಃ ಇದೇ ಕಾರಣಕ್ಕಾಗಿಯೋ ಆನೆಗಳು ಮನುಷ್ಯರೊಂದಿಗೆ ಬಹುಬೇಹ ಆಪ್ತವಾಗುವುದು. ಅದರಲ್ಲೂ ಅವುಗಳು ಮನುಷ್ಯರ ಜೊತೆಗೆ ಥೇಟ್ ಮಕ್ಕಳಂತೆ ಆಟವಾಡಲು ಬಲು ಇಷ್ಟಪಡುತ್ತವೆ. ಹೀಗೆ ಆನೆಗಳು ಮನುಷ್ಯರೊಂದಿಗೆ ಆಟವಾಡುವಂತಹ, ಮನುಷ್ಯ ಮತ್ತು ಆನೆಗಳ ನಡುವಿನ ಸುಂದರ ಬಾಂಧವ್ಯದ, ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಮುದ್ದಾದ ವಿಡಿಯೋ ಹರಿದಾಡುತ್ತಿದ್ದು, ಆನೆಗಳು ಮನುಷ್ಯರಿಗಿಂತ ನಾವೇನು ಕಮ್ಮಿಯಿಲ್ಲ ಎಂಬಂತೆ ಫುಟ್ಬಾಲ್ ಪಂದ್ಯಾಟವನ್ನು ಆಡಿವೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಗಜರಾಜರ ಫುಟ್ಬಾಲ್ ಆಟದ ಪರಿಗೆ ನೆಟ್ಟಿಗರು ವ್ಹಾವ್ ಎಂದಿದ್ದಾರೆ.
ವೈರಲ್ ವಿಡಿಯೋವನ್ನು ಆನ ಪ್ರೇಮಿ (@_aanapremi_) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನಾವ್ಯಾರಿಗೂ ಕಮ್ಮಿಯಿಲ್ಲ ಸ್ವಾಮಿ ಎನ್ನುತ್ತಾ ಎರಡು ಆನೆಗಳು ಫುಟ್ಬಾಲ್ ಆಟವಾಡುವುದನ್ನು ಕಾಣಬಹುದು.
ಇದನ್ನೂ ಓದಿ: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠೆ ಕುರಿತು ಟೀಕಿಸುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ಇಲ್ಲಿದೆ ವಿಡಿಯೋ
ವೈರಲ್ ವಿಡಿಯೋದಲ್ಲಿ ಎರಡು ಆನೆಗಳು ಆಟಕ್ಕೆ ಸಜ್ಜಾಗಿ ಎದುರುಬದುರಾಗಿ ನಿಂತಿರುವುದನ್ನು ಹಾಗೂ ಆ ಆನೆಗಳ ಮೇಲೆ ಮಾವುತರು ಕುಳಿತಿರುವುದನ್ನು ಕಾಣಬಹುದು. ಅದರಲ್ಲಿ ಒಂದು ಆನೆ ಆಟಕ್ಕೆ ಮಸ್ತ್ ಆಗಿ ರೆಡಿಯಾಗಿ, ವಿಸಿಲ್ ಹೊಡೆಯುತ್ತಿದ್ದಂತೆಯೇ ನನ್ಗೆ ಗೆಲವು ಪಕ್ಕಾ ಎನ್ನುತ್ತಾ, ಕಾಲಿನಿಂದ ಫುಟ್ಬಾಲ್ ಅನ್ನು ಒದೆಯುತ್ತದೆ. ಅಷ್ಟರಲ್ಲಿ ಎದುರುಬದಿ ಗೋಲ್ ಕೀಪರ್ ಆಗಿ ನಿಂತಿದ್ದ ಆನೆಯು, ಚೆಂಡು ಗೋಲ್ ಕೋರ್ಟ್ ಕಡೆ ಹೋಗದಂತೆ ತಡೆದು, ಆ ಚೆಂಡನ್ನು ಪಕ್ಕಕ್ಕೆ ತಳ್ಳುತ್ತದೆ. ಮುದ್ದು ಆನೆಗಳ ಫುಟ್ಬಾಲ್ ಪಂದ್ಯಾಟವನ್ನು ಕಂಡು ಅಲ್ಲಿ ನೆರೆದಿದ್ದರೆಲ್ಲಾ ಶಿಳ್ಳೆ ಕೇಕೆ ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು.
ಡಿಸೆಂಬರ್ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼರೊನಾಲ್ಡೊ, ಲಿಯೋನಲ್ ಮೆಸ್ಸಿಗಿಂತ ನಮ್ಮ ಗಜರಾಜರು ಏನು ಕಮ್ಮಿಯಿಲ್ಲಪ್ಪಾʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಎಷ್ಟು ಮುದ್ದಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಉತ್ತಮ ಹೊಡೆತ ಮತ್ತು ಉತ್ತಮ ಕ್ಯಾಚ್ʼ ಅಂತ ತಮಾಷೆಯ ಕಾಮೆಂಟರಿ ಲೈನ್ ಅನ್ನು ಬರೆದುಕೊಂಡಿದ್ದಾರೆ. ಇನ್ನು ಹಲವರು ಗಜರಾಜರ ಫುಟ್ಬಾಲ್ ಪಂದ್ಯಾಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ