ಅಮೆರಿಕದ ವ್ಯಕ್ತಿಯೊಬ್ಬರು ಇತ್ತೀಚಿಗಷ್ಟೇ ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ಮೊಲೆತೊಟ್ಟುಗಳನ್ನು ಸೇರಿಸಿಕೊಂಡಿದ್ದಾರೆ. ಹ್ಯಾರಿ ಹೂಫ್‌ಕ್ಲೋಪೆನ್ ಎಂಬ ವ್ಯಕ್ತಿ ಇದೀಗಾ ಒಟ್ಟು 6 ಮೊಲೆ ತೊಟ್ಟುಗಳನ್ನು ಹೊಂದಿದ್ದಾರೆ. ಪ್ರಾರಂಭದಲ್ಲಿ ದೇಹ ಮಾರ್ಪಾಡು(Body Modification) ತಜ್ಞ ಸ್ಟೀವ್ ಹಾವರ್ತ್ ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ಮೊಲೆತೊಟ್ಟು ಹಾಕುವ ಸರ್ಜರಿಗೆ ಒಳಗಾಗಿದ್ದ, ಆದರೆ ಅದು ವಿಫಲವಾಗಿತ್ತು. ಬಳಿಕ ಕೊಲೊರಾಡೋ ಮೂಲದ ಟ್ಯಾಟೂ ಕಲಾವಿದ ಏಂಜೆಲ್ ಸಿಲಿಕೋನ್ ಇಂಪ್ಲಾಂಟ್‌ಗಳನ್ನು ನೈಸರ್ಗಿಕವಾಗಿ ಕಾಣುವ ರೀತಿಯಲ್ಲಿ ಹಚ್ಚೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
@crybaby.angell ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಏಪ್ರಿಲ್ 30ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ 5ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದ ಯುವತಿಯ ಶವ ಪತ್ತೆ
“ಇದೇನಿದು ಪ್ರಾಣಿಗಳಂತೆ ದೇಹದ ಮೇಲೆ ಇಷ್ಟೊಂದು ನಿಪ್ಪಲ್ಸ್ಗಳು” ಎಂದು ನೆಟ್ಟಿಗರೊಬ್ಬರು ಕಮೆಂಟ್ ಬರೆದರೆ, ಮತ್ತೊಬ್ಬರು “ಹಿಂಗೂ ಜನ ಇರ್ತಾರಾ?” ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ