ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವ್ಯಾಪಕವಾಗಿ ಶೇರ್ ಆಗುತ್ತಿದೆ. ಎರಡು ವಿಮಾನಗಳು ಒಂದಕ್ಕೊಂದು ಡಿಕ್ಕಿಯಾಗುವುದರಿಂದ ಸ್ವಲ್ಪದರಲ್ಲೇ ಪಾರಾಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದು, ಎರಡೂ ವಿಮಾನಗಳ ಪೈಲಟ್‌ಗಳ ಬುದ್ಧಿವಂತಿಕೆ ಮತ್ತು ಧೈರ್ಯದಿಂದಾಗಿ ದೊಡ್ಡ ಅಪಘಾತವನ್ನು ತಪ್ಪಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ದಿನೇಶ್ ಪುರೋಹಿತ್ ಎಂಬ ಬಳಕೆದಾರರು ಹೀಗೆ ಬರೆದಿದ್ದಾರೆ, ‘‘ಕೊಂಚದರಲ್ಲೇ ಅಪಘಾತವನ್ನು ತಪ್ಪಿಸಲಾಗಿದೆ.. ಇದು ಎಂತಹ ಭಯಾನಕ ದೃಶ್ಯ. ಎರಡೂ ವಿಮಾನಗಳ ಪೈಲಟ್‌ಗಳು ಧೈರ್ಯಶಾಲಿಗಳಾಗಿದ್ದರು.’’ ಎಂದಿದ್ದಾರೆ.
हादसा होते बाल बाल बचा है.. कितना भयंकर नज़ारा लग रहा है।
दोनों विमानों के पायलट बहादुर थे। pic.twitter.com/BoCpKljjEb
— Dinesh Purohit (@Imdineshpurohit) November 7, 2024
ಅನೇಕ ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
हादसा होते बाल बाल बचा है.. कितना भयंकर नज़ारा लग रहा है।
दोनों विमानों के पायलट बहादुर थे। pic.twitter.com/L5glAIVjwj
— Raja Yadav (@RajaYadavfitnse) November 9, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಿಜಾಂಶ ತಿಳಿಯಲು ನಾವು ಗೂಗಲ್‌ನಲ್ಲಿ ವೈರಲ್ ವಿಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಆಗ AeroDRAMAhub ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ನಾವು ಈ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಇದರಲ್ಲಿರುವ ಮಾಹಿತಿಯ ಪ್ರಕಾರ ಈ ವಿಡಿಯೋ ಯಾವುದೇ ನೈಜ ಘಟನೆಯದ್ದಲ್ಲ, ಇದು ಗೇಮಿಂಗ್ ವಿಡಿಯೋ ಆಗಿದೆ. ಇದೇ ಯೂಟ್ಯೂಬ್ ಖಾತೆಯಲ್ಲಿ ವಿಮಾನ ಅಪಘಾತಗಳ ಅನೇಕ ಗೇಮಿಂಗ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವುದನ್ನು ನೋಡಬಹುದು.
ಈ ಚಾನಲ್‌ನ ವಿವರಣೆಯಲ್ಲಿ, ಗ್ರಾಫಿಕ್ಸ್‌ನೊಂದಿಗೆ ಮಾಡಿದ ಗೇಮಿಂಗ್ ವಿಡಿಯೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ. ಚಾನೆಲ್ ವಿವರಣೆಯು ಹೀಗೆ ಹೇಳುತ್ತದೆ, ‘‘ಏರೋಡ್ರಾಮಹಬ್‌ಗೆ ಸ್ವಾಗತ, ರೋಮಾಂಚಕ ಸಿನಿಮೀಯ ವಿಮಾನ ಅಪಘಾತದ ಆಟದ ವಿಡಿಯೋಗಳಿಗಾಗಿ ಇದು ಉತ್ತಮ ತಾಣವಾಗಿದೆ’’ ಎಂದು ಬರೆಯಲಾಗಿದೆ.
ಇನ್ನು ವೈರಲ್ ವಿಡಿಯೋವನ್ನು ನಾವು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಆಗ ಒಂದು ವಿಮಾನದಲ್ಲಿ ಕ್ವಾಂಟಾಸ್ ಮತ್ತು ಇನ್ನೊಂದು ವಿಮಾನದಲ್ಲಿ ಬ್ರಿಟಿಷ್ ಏರ್ವೇಸ್ ಎಂದು ಬರೆದಿರುವುದು ನಾವು ಕಂಡುಕೊಂಡಿದ್ದೇವೆ.ಈ ಮಾಹಿತಿಯ ಆಧಾರದ ಮೇಲೆ ನಾವು ಕ್ವಾಂಟಾಸ್ ಮತ್ತು ಬ್ರಿಟಿಷ್ ಏರ್‌ವೇಸ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆಯ ಗೂಗಲ್‌ನಲ್ಲಿ ಹುಡುಕಿದ್ದೇವೆ. ಆದರೆ ಇತ್ತೀಚೆಗೆ ಅಂತಹ ಯಾವುದೇ ಸುದ್ದಿ ಎಲ್ಲೂ ವರದಿ ಆಗಿಲ್ಲ.
ಇದನ್ನೂ ಓದಿ: ಸಾವಿನ ಬಳಿಕ ಮಾನವನ ದೇಹದಲ್ಲಾಗುವ ಬದಲಾವಣೆಗಳೇನು? ಇಲ್ಲಿದೆ ಮಾಹಿತಿ
ಹೀಗಾಗಿ ಎರಡು ವಿಮಾನಗಳು ಒಂದಕ್ಕೊಂದು ಡಿಕ್ಕಿಯಾಗುವುದರಿಂದ ಸ್ವಲ್ಪದರಲ್ಲೇ ಪಾರಾದ ಈ ವಿಡಿಯೋ ನಿಜವಾಗಿ ನಡೆದ ಘಟನೆ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಎಡಿಟಿಂಗ್ ಸಹಾಯದಿಂದ ರಚಿಸಲಾದ ಗೇಮಿಂಗ್ ವಿಡಿಯೋ ಆಗಿದೆ. ಕೆಲ ಸಾಮಾನಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋವನ್ನು ನಿಜವೆಂದು ಪರಿಗಣಿಸಿ ಹಂಚಿಕೊಳ್ಳುತ್ತಿದ್ದಾರಷ್ಟೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ