ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ಒಬ್ಬ ಹಿರಿಯ ಪುರುಷ ಮತ್ತು ಬಾಲಕಿ ಎರಡು ವಿಭಿನ್ನ ಕುರ್ಚಿಗಳ ಮೇಲೆ ಕುಳಿತಿದ್ದಾರೆ. ಬಾಂಗ್ಲಾದೇಶದಲ್ಲಿ 76 ವರ್ಷದ ಮೊಹಮ್ಮದ್ ರೊಜೊಬ್ ಅಲಿ ನಾಲ್ಕನೇ ಬಾರಿಗೆ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಒಬ್ಬ ಬಳಕೆದಾರರು ವಿಡಿಯೋನ್ನು ಹಂಚಿಕೊಂಡು ಹೀಗೆ ಬರೆದಿದ್ದಾರೆ, ‘‘ಬಾಂಗ್ಲಾದೇಶ: 76 ವರ್ಷದ ಮೊಹಮ್ಮದ್ ರೋಜೋಬ್ ಅಲಿ 12 ವರ್ಷದ ಹಿಂದೂ ಹುಡುಗಿಯನ್ನು ನಾಲ್ಕನೇ ಬಾರಿಗೆ ವಿವಾಹವಾದರು. ಅವಳಿಗೆ ಯಾರೂ ಇಲ್ಲ; ಅವಳು ಅನಾಥೆ, ಹಾಗಾಗಿ ಅವಳನ್ನು ನನ್ನ ಹೆಂಡತಿಯಾಗಿ ಮಾಡಿಕೊಂಡೆ ಎಂದು ಮೊಹಮ್ಮದ್ ರೋಜಾಬ್ ಹೇಳಿದ್ದಾರೆ. ಇವರೆಲ್ಲ ಮೊದಲು ಮನೆಯವರನ್ನೆಲ್ಲ ಕೊಂದು ಆಮೇಲೆ ಅದೇ ರೀತಿ ಸಣ್ಣ ಪುಟ್ಟ ಮುಗ್ಧ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
बांग्लादेश: 76वर्षीय मोहम्मद रोज़ोब अली ने 12 वर्ष की हिंदू लड़की से चौथी शादी की मोहम्मद रोजोब ने कहा, उसका कोई नहीं है; वह अनाथ है, इसलिए मैंने उसे अपनी पत्नी बना लिया..
पहले परिवार के सभी सदस्यों की हत्या कर दी उसके उपरांत इसी तरह छोटी छोटी अबोध बच्चियों से निकाह कर रहे हैं pic.twitter.com/oiaUTcqi9x
— Vijendra Agarwal (@bijendra_bjp4up) December 6, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು ನಿಜವಾಗಿ ನಡೆದ ಘಟನೆಯೇ ಅಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟೆಡ್ ವಿಡಿಯೋ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ 26 ಸೆಪ್ಟೆಂಬರ್ 2024 ರಂದು MB TV ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಸ್ಪಷ್ಟವಾಗಿ ಮನರಂಜನಾ ವಿಡಿಯೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಈ ಚಾನಲ್‌ನಲ್ಲಿ ಮಾಹಿತಿ ನೀಡಲಾಗಿದೆ.
ಇದಲ್ಲದೆ, Mkd bd Tv ಎಂಬ ಹೆಸರಿನ ಮತ್ತೊಂದು ಯೂಟ್ಯೂಬ್ ಚಾನಲ್‌ನಲ್ಲಿ ಇದೇ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಇದೇ ಚಾಲೆಲ್ನಲ್ಲಿ ಕಿರು ಚಿತ್ರಗಳು ಮತ್ತು ಮನರಂಜನಾ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಮನರಂಜನೆಗಾಗಿ ಈ ಎರಡೂ ಚಾನೆಲ್‌ಗಳಲ್ಲಿ ಮದುವೆಗೆ ಸಂಬಂಧಿಸಿದ ಅನೇಕ ಇತರ ವಿಡಿಯೋಗಳನ್ನು ಅಪ್‌ಲೋಡ್ ಮಾಡಿರುವುದು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಕಾಣಿಸುವ ಪ್ರಮುಖ ಪಾತ್ರಗಳೆಲ್ಲವರೂ ಹಿರಿಯ ವಯಸ್ಸಿನವರೇ ಆಗಿದ್ದಾರೆ. ಒಂದು ವಿಡಿಯೋದ ಶೀರ್ಷಿಕೆಯಲ್ಲಿ ’95 ವರ್ಷದ ಮುದುಕ 20 ವರ್ಷದ ಹುಡುಗಿಯನ್ನು ಮದುವೆಯಾಗುತ್ತಿದ್ದಾನೆ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಜೈಲಿನಲ್ಲಿ ಕೈದಿಯ ವಿಚಿತ್ರ ವರ್ತನೆ; ಎಕ್ಸ್ ರೇ ನೋಡಿ ಪೊಲೀಸರು ಶಾಕ್
ಹೀಗಾಗಿ ವೈರಲ್ ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ಟಿವಿ9 ಕನ್ನಡ ಸತ್ಯ ಪರಿಶೀಲನೆಯು ಸ್ಪಷ್ಟಪಡಿಸುತ್ತದೆ. ಆದ್ದರಿಂದ ಬಾಂಗ್ಲಾದೇಶದಲ್ಲಿ 76 ವರ್ಷದ ಮೊಹಮ್ಮದ್ ರೊಜೊಬ್ ಅಲಿ ನಾಲ್ಕನೇ ಬಾರಿಗೆ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.
Vitat hindi belt culture 🚨
Daughter became wife!
Father became husband!
Is it common among hINDIANs?A Gutkha Bimaru married his Gutkhi daughter and both are proudly boasting about the father daughter illegitimate relationship.
Are they Bihari?pic.twitter.com/smzNjE9JaN
— A Proud Bengali (@AProudBengali) November 15, 2024
ಇತ್ತೀಚೆಗಷ್ಟೆ ತಂದೆ-ಮಗಳ ಮದುವೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಒಂದು ವೈರಲ್ ಆಗಿತ್ತು. ಮಗಳು ಹೆಂಡತಿಯಾದಳು! ತಂದೆ ಪತಿಯಾದರು! ಹಿಂದಿ-ಭಾರತೀಯರಲ್ಲಿ ಇದು ಸಾಮಾನ್ಯ ಸಂಗತಿಯೇ? ಅವರು ಬಿಹಾರಿಗಳೇ? ಎಂಬ ಪೋಸ್ಟ್ ಈ ವಿಡಿಯೋದೊಂದಿಗೆ ವೈರಲ್ ಆಗಿತ್ತು. (). ಆದರೆ, ಇದು ಕೂಡ ಸ್ಕ್ರಿಪ್ಟ್ ಮಾಡಲಾದ ವಿಡಿಯೋ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Sun, 8 December 24