Udupi : ಉಡುಪಿಯ ಉದ್ಯಾವರದ ಕಲಾಯಿಬೈಲ್ ಎಂಬ ಗ್ರಾಮದಲ್ಲಿ ನವಿಲೊಂದು (Peacock) ಅಕಸ್ಮಾತ್ ಆಗಿ ಬಾವಿಗೆ ಬಿದ್ದಿದೆ. ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಆ ಪಕ್ಷಿಯು ಗ್ರಾಮಸ್ಥರಾದ ವಿಜಯಕುಮಾರ್ ಮತ್ತು ಅವರ ಮಗ ವಿಶಾಲ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಅದನ್ನು ರಕ್ಷಿಸುವ ಉಪಾಯಕ್ಕೆ ಅವರಿಬ್ಬರೂ ಮುಂದಾಗಿದ್ದಾರೆ. ವಿಶಾಲ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾರೆ. ನಂತರ ತಮ್ಮ ಕಾಲುಗಳೊಳಗೆ ಆ ನವಿಲನ್ನು ಹಿಡಿದು ಬಾವಿನೀರಿನಿಂದ ಮೇಲೆಕ್ಕೆತ್ತಿದ್ದಾರೆ.
Father son duo save a peacock which fell into a well in Udyavara, Udupi
ಇದನ್ನೂ ಓದಿVc : News Karnataka pic.twitter.com/qBYO0ZhHPZ
— Dr Durgaprasad Hegde (@DpHegde) July 19, 2023
ತಂದೆ ಮಗ ಸೇರಿ ನವಿಲಿನ ಜೀವ ಉಳಿಸಿದ್ದಕ್ಕಾಗಿ ಹಲವಾರು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಇನ್ನೂ ಕೆಲವರು ಈ ಸಾಹಸಕ್ಕಿಳಿದ ಮಗನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಉಳಿದವರು ತಮಾಷೆಯನ್ನೂ ಮಾಡಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 13,300 ಜನರು ನೋಡಿದ್ದಾರೆ. 75 ಜನ ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Viral: ನೀಲಿಕಂಗಳ ಹುಡುಗನ ‘ಕೆಫೆ ಚಾಯ್ವಾಲಾ ಅರ್ಷದ್ ಖಾನ್’ ಇದೀಗ ಲಂಡನ್ನಲ್ಲಿ
ನೀವಿಬ್ಬರೂ ರಾಷ್ಟ್ರಪಕ್ಷಿಯ ಜೀವ ಉಳಿಸಿದ್ದೀರಿ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ ಸಾಕಷ್ಟು ಜನರು. ಯಾಕೆ ಇಂಥ ಹುಚ್ಚು ಸಾಹಸಕ್ಕೆ ಇಳಿದಿರಿ? ನವಿಲಿನ ಜಾಗದಲ್ಲಿ ಅಕಸ್ಮಾತ್ ನಿಮ್ಮ ಮಗ ಬಿದ್ದಿದ್ದರೆ ಎಂದಿದ್ದಾರೆ ಕೆಲವರು. ಇಂಥ ಕೆಲಸವನ್ನು ಮಕ್ಕಳಿಂದ ಮಾಡಿಸುವ ಬದಲು ಅರಣ್ಯ ಇಲಾಖೆಗೆ ತಿಳಿಸಿ ಎಂದು ಸಲಹೆ ನೀಡಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಒಂದೇ ತಟ್ಟೆಯಲ್ಲಿ ಸಿಂಹದೊಂದಿಗೆ ಊಟ ಮಾಡುತ್ತಿರುವ ಯುವತಿ
ವನ್ಯಮೃಗಗಳು ಪಕ್ಷಿಗಳು ಹೀಗೆ ಅಪಾಯದಲ್ಲಿದ್ದಾಗ ಅಥವಾ ನೀವಿದ್ದ ಜಾಗದಲ್ಲಿ ಬಂದಾಗ ತಕ್ಷಣವೇ ಅರಣ್ಯ ಇಲಾಖೆ ಅಥವಾ Wildlife SOS ತಿಳಿಸುವುದು ಉತ್ತಮ. ವಿನಾಕಾರಣ ಅಪಾಯಕ್ಕೆ ಒಡ್ಡಿಕೊಳ್ಳುವುದು ಸಲ್ಲದು.
ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:09 pm, Wed, 19 July 23