Video: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಮಗಳ ಪ್ರತಿಯೊಂದು ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವ ಜೀವವೇ ತಂದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಮಗಳಿಗೆ ತಂದೆಯೊಬ್ಬರು ಸರ್ಪ್ರೈಸ್ ನೀಡಿ ಮಗಳ ಮೊಗದಲ್ಲಿ ನಗು ಮೂಡಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ
ವೈರಲ್ ವಿಡಿಯೋ
Image Credit source: Instagram

Updated on: Jun 12, 2026 | 4:48 PM

ಅಪ್ಪ ಮಗಳ (father- daughter) ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗಳ ಪಾಲಿಗೆ ಅಪ್ಪ ಎಲ್ಲವೂ ಆಗಿರುತ್ತಾನೆ. ಕಷ್ಟಪಟ್ಟು ದುಡಿದು ಮಗಳ ಇಷ್ಟಗಳನ್ನು ಈಡೇರಿಸುವ ಅಪ್ಪನಿಗೆ ಮಗಳಿಗಿಂತ ದೊಡ್ಡ ಪ್ರಪಂಚ ಮತ್ತೊಂದಿಲ್ಲ. ಮಗಳ ಖುಷಿಯಲ್ಲೇ ತನ್ನ ಖುಷಿ ಕಾಣುವ ತಂದೆಯ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ತಂದೆಯೊಬ್ಬರು ಮಗಳಿಗೆ ಸರ್ಪ್ರೈಸ್ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗಳು ಕೆಲಸ ಮಾಡುವ ಸ್ಥಳಕ್ಕೆ ಹೂಗುಚ್ಛ ಹಿಡಿದುಕೊಂಡು ಬಂದ ತಂದೆಯನ್ನು ನೋಡಿ ಮಗಳು ಆಶ್ಚರ್ಯ ಚಕಿತಳಾಗಿದ್ದಾಳೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕವಿಯಾ (kaviyaa.dr_) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೃದಯ ಸ್ಪರ್ಶಿ ಕ್ಷಣದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ತಂದೆಯೊಬ್ಬರು ಸರ್ಪ್ರೈಸ್ ನೀಡಿರುವುದನ್ನು ನೀವು ನೋಡಬಹುದು. ನಾನು ಒಂದು ವಾರದ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡೆ. ನನ್ನ ತಂದೆ ಇಂದು ನನ್ನ ಕಚೇರಿಗೆ ನನ್ನನ್ನು ಭೇಟಿ ಮಾಡಲು ಬಂದರು ಎನ್ನುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ.

ವೈರಲ್ ವಿಡಿಯೋ ಇಲ್ಲಿದೆ

ಕವಿಯಾ ತನ್ನ ಆಫೀಸಿನ ಒಳಗೆ ಇದ್ದಾಗ ತಂದೆ ಕಿಟಕಿಯಿಂದ ಹೊರಗೆ ನೋಡಲು ಹೇಳಿದ್ದಾರೆ. ಆಕೆ ಕೆಳಗೆ ನೋಡಿದಾಗ, ತನ್ನ ಅಪ್ಪನು ಕಟ್ಟಡದ ಹೊರಗೆ ಕೈಯಲ್ಲಿ ಹೂಗುಚ್ಛದೊಂದಿಗೆ ನಿಂತಿರುವುದನ್ನು ಗಮನಿಸಿದ್ದಾಳೆ. ಬಹಳ ಉತ್ಸುಕತೆ ಹಾಗೂ ಆಶ್ಚರ್ಯದಿಂದ ತಂದೆಯನ್ನು ಭೇಟಿಯಾಗಲು ಕೆಳಗೆ ಧಾವಿಸುವುದನ್ನು ನೀವು ನೀಡಬಹುದು. ಆ ಬಳಿಕ ತಂದೆ ಹೂಗುಚ್ಛ, ಚೀಟಿ ಹಾಗೂ ಚಾಕೊಲೇಟ್ ನ್ನು ನೀಡಿರುವುದನ್ನು ನೀವು ಗಮನಿಸಬಹುದು.

ಈ ಚೀಟಿಯಲ್ಲಿ ನಾನು ಆಫೀಸ್ ಪರಿಶೀಲಿಸಲು ಇಲ್ಲಿಗೆ ಬಂದಿಲ್ಲ. ನನ್ನ ಮಗಳು ತನ್ನ ವೃತ್ತಿಜೀವನವನ್ನು ಎಲ್ಲಿ ನಿರ್ಮಿಸಲು ಪ್ರಾರಂಭಿಸಿದ್ದಾಳೆಂದು ನೋಡಲು ನಾನು ಇಲ್ಲಿದ್ದೇನೆ ಎಂಬ ಸಂದೇಶವನ್ನು ಬರೆಯಲಾಗಿದೆ. ಅಪ್ಪನ ಕಾಳಜಿಯುತ ಸಂದೇಶವು ಮಗಳನ್ನು ಭಾವುಕಳಾಗಿಸಿದೆ. ಕವಿಯಾ ತನ್ನ ತಂದೆಗೆ ಬಹಳ ಹೆಮ್ಮೆಯಿಂದ ತನ್ನ ಆಫೀಸಿನ ಕಟ್ಟಡವನ್ನು ತೋರಿಸಿರುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಗೆ ಮಗಳು ತನ್ನ ತಂದೆಯ ಜತೆಗೆ ಸೆಲ್ಫಿಗೆ ಪೋಸ್ ಕೊಟ್ಟಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ: ಹೆತ್ತವರಿಗೆ ತಾನು ಕೆಲಸ ಮಾಡುವ ಬೆಂಗಳೂರಿನ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಪ್ಪನ ಪ್ರೀತಿಯೇ ಹಾಗೆ, ಮಕ್ಕಳ ಯಶಸ್ಸಿನಲ್ಲಿ ತಂದೆಯ ಖುಷಿ ಅಡಗಿದೆ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಸಂತೂರ್ ತಂದೆಯ ಹಿಂದಿನ ರಹಸ್ಯವೇನು ಎಂದು ಕೇಳಿದ್ದಾರೆ. ಮತ್ತೊಬ್ಬರು, ಇದುವರೆಗಿನ ಅತ್ಯಂತ ಸಂತೋಷಕರ ವಿಷಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us