
ಅಪ್ಪ (father) ಎಂದರೆ ಮಗಳಿಗೆ ಹೇಗೆ ಪ್ರಪಂಚವೋ, ಅದೇ ರೀತಿ ತಂದೆಯಂದಿರಿಗೆ ತಮ್ಮ ಮುದ್ದು ಮಗಳೆಂದರೆ ಅದೇನೋ ವಿಶೇಷ ಪ್ರೀತಿ ಹಾಗೂ ಕಾಳಜಿ. ಹೀಗಾಗಿ ಈ ತಂದೆ ಮಗಳ ಸುಂದರ ಬಾಂಧವ್ಯವನ್ನು ವರ್ಣಿಸಲು ಪದಗಳೇ ಸಾಲಲ್ಲ. ಇದೀಗ ಅಪ್ಪ ಮಗಳ ಬಾಂಧವ್ಯ (father daughter relationship)ದ ವಿಡಿಯೋವೊಂದು ವೈರಲ್ ಆಗಿದ್ದು ಪುಟಾಣಿ ಕಂದಮ್ಮನಿಗೆ ನರ್ಸ್ ಒಬ್ಬರು ಲಸಿಕೆ ಚುಚ್ಚುತ್ತಿದ್ದಂತೆ ನೋವಿನಿಂದ ಜೋರಾಗಿ ಅಳುತ್ತಿದ್ದು, ಇದನ್ನು ಸಹಿಸಲಾಗದೇ ಮಗುವಿನೊಂದಿಗೆ ತಂದೆಯೂ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
momos.usa ಹೆಸರಿನ ಖಾತೆಯಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟ್ಟ ಕಂದಮ್ಮವೊಂದು ತನ್ನ ತಂದೆಯ ಮಡಿಲಿನಲ್ಲಿ ಮಲಗಿರುವುದನ್ನು ಕಾಣಬಹುದು. ಈ ವೇಳೆಯಲ್ಲಿ ನರ್ಸ್ ವೊಬ್ಬರು ಮಗುವಿನ ಕಾಲಿಗೆ ಲಸಿಕೆ ನೀಡುತ್ತಿದ್ದಂತೆ ನೋವಿನಿಂದ ಜೋರಾಗಿ ಮಗು ಅಳುತ್ತಿರುವುದನ್ನು ನೋಡಬಹುದು. ಇದನ್ನು ನೋಡಿದ ತಂದೆಯೂ ಜೋರಾಗಿ ಕಣ್ಣೀರು ಸುರಿಸಿದ್ದಾನೆ.
ಇದನ್ನೂ ಓದಿ : ಹಿಂದೂ ಜೋಡಿ ಮದುವೆಗೆ ಅಡ್ಡಿ ಪಡಿಸಿದ ಮಳೆ, ವೇದಿಕೆ ಬಿಟ್ಟುಕೊಟ್ಟ ಮುಸ್ಲಿಂ ಜೋಡಿ
ಈ ವಿಡಿಯೋವೊಂದು 3.6 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಈ ವಿಡಿಯೋ ನೋಡಿ ನನ್ನ ಕಣ್ಣಲ್ಲಿಯೂ ನೀರು ಬಂತು ಎಂದಿದ್ದಾರೆ. ಇನ್ನೊಬ್ಬರು, ತಂದೆ ಎಷ್ಟೇ ಬಲಿಷ್ಠನಾಗಿದ್ದರೂ ಮಗಳ ಕಣ್ಣಲ್ಲಿ ನೀರು ಕಂಡರೆ ಮನಸ್ಸು ಕುಗ್ಗಿ ಹೋಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಮಗಳಿಗೆ ಚುಚ್ಚು ಮದ್ದು ಕೊಟ್ಟಾಗ ನಾನು ಹೀಗೆಯೇ ಅತ್ತಿದ್ದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Fri, 23 May 25