ಪ್ರಯಾಣಿಕರನ್ನು ನಿದ್ರೆಯಿಂದ ಎಬ್ಬಿಸಲು ರೈಲ್ವೆ ಇಲಾಖೆಯಿಂದ ಹೊಸ ‘ಸ್ನಾನಸೇವೆ’ ಲಭ್ಯ

| Updated By: ಶ್ರೀದೇವಿ ಕಳಸದ

Updated on: Oct 28, 2022 | 9:58 AM

Indian Railways : ರೈಲ್ವೇ ನಿಲ್ದಾಣ ಬರುತ್ತಿದ್ದಂತೆ ಈ ಸೇವೆ ಶುರುವಾಗುತ್ತದೆ. ಅದೆಷ್ಟೇ ನಿದ್ರೆಯಲ್ಲಿದ್ದರೂ ನೀವು ಎಚ್ಚರಗೊಳ್ಳಲೇಬೇಕು, ಹಾಗಿದೆ ಈ ಸೇವೆಯ ಮಹಿಮೆ. ಹೇಗೆಂದಿರಾ? ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ.

ಪ್ರಯಾಣಿಕರನ್ನು ನಿದ್ರೆಯಿಂದ ಎಬ್ಬಿಸಲು ರೈಲ್ವೆ ಇಲಾಖೆಯಿಂದ ಹೊಸ ‘ಸ್ನಾನಸೇವೆ ಲಭ್ಯ
Faulty water tap at railway station drenches passengers
Follow us on

Viral Video : ಇನ್ನುಮುಂದೆ ನೀವು ಸ್ನಾನ ಮಾಡಿಕೊಂಡೇ ಮನೆಗೆ ಹೋಗಬಹುದು. ಇಷ್ಟು ದಿನ ರೈಲಿನಿಂದ ಇಳಿಯುವಾಗ ಹಲ್ಲುಜ್ಜಿ ಮುಖ ತೊಳೆದು ಕಾಫಿ, ಚಹಾ ಕುಡಿದುಕೊಂಡು ಹೋಗುತ್ತಿದ್ದಿರಿ ಅಲ್ಲವೆ? ಇನ್ನುಮುಂದೆ ಸ್ನಾನವನ್ನೂ ಮಾಡಿ ಹೋಗಬಹುದು. ಹೀಗೊಂದು ಹೊಸ ಸ್ನಾನಸೇವೆಯನ್ನು ರೈಲ್ವೇ ಇಲಾಖೆ ಪರಿಚಯಿಸಿದೆ. ಆದರೆ ಇದಕ್ಕೆ ಬಾತ್ರೂಮುಗಳ ಮುಂದೆ ಸರದಿಯಲ್ಲಿ ನಿಲ್ಲಬೇಕಿಲ್ಲ. ಬಿಸಿನೀರಿಗಾಗಿ ನಿರೀಕ್ಷಿಸಬೇಕಿಲ್ಲ. ನೀವೆಲ್ಲಿದ್ದೀರೋ ಅಲ್ಲಿಯೇ ಥಣ್ಣೀರಿನ ಈ ಸೇವೆ ಲಭ್ಯ. ಹೇಗೆಂದು ಯೋಚಿಸುತ್ತಿದ್ದೀರಾ? ಈ ವಿಡಿಯೋ ನೋಡಿ.

ಈ 30 ಸೆಕೆಂಡಿನ ವಿಡಿಯೋ ನೋಡುತ್ತಿದ್ದಂತೆ ಈ ಹೊಸ ಸೇವೆಯ ಕಲ್ಪನೆ ನಿಮಗೀಗ ಸ್ಪಷ್ಟವಾಗಿರಬೇಕಲ್ಲ? ‘ನಿಮ್ಮ ಸೇವೆಯಲ್ಲಿ ಭಾರತೀಯ ರೈಲ್ವೆ’ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ ಅಭಿ ಎನ್ನುವ ಟ್ವಿಟರ್​ ಖಾತೆದಾರರು. ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ರೈಲು ನಿಲ್ದಾಣದಲ್ಲಿರುವ ಟ್ಯಾಪ್​ ಮುರಿದುಹೋಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಟ್ಯಾಪ್​ಗೆ ಒಂದು ಬಟ್ಟೆ ಸಿಕ್ಕಿಸಲು ಆಗಲಿಲ್ಲವಾ ಯಾರೊಬ್ಬರಿಗೂ ಅಲ್ಲಿ ಎಂದು ಕೇಳಿದ್ದಾರೆ. ಪ್ರಯಾಣಿಕರಿಗಷ್ಟೇ ಅಲ್ಲ ರೈಲುಗಳಿಗೂ ಸ್ನಾನ ಎಂದಿದ್ದಾರೆ ಇನ್ನೊಬ್ಬರು. ಹೀಗೆ ಪ್ಯಾನ್​ ಮಾಡಿ ವಿಡಿಯೋ ಮಾಡುವ ಬದಲು ಆ ಟ್ಯಾಪ್​ಗೆ ಒಂದು ಬಟ್ಟೆ ಕಟ್ಟು ವ್ಯವಸ್ಥೆ ಮಾಡಬಾರದಾ ಎಂದು ಮಗದೊಬ್ಬರು ಕೇಳಿದ್ದಾರೆ. ಒಂದು ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಪ್ರಯಾಣಿಕರನ್ನು ನಿದ್ರೆಯಿಂದ ಎಬ್ಬಿಸಲು ಎಲ್ಲ ನಿಲ್ದಾಣಗಳಲ್ಲಿಯೂ ಈ ಹೊಸ ಸೇವೆ ಆರಂಭವಾದರೆ ಹೇಗಿರುತ್ತದೆ? ಎಂದು ತಮಾಷೆ ಮಾಡುವ ಹಾಗಿಲ್ಲ. ಪೋಲಾಗುವ ನೀರು!?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:50 am, Fri, 28 October 22