Viral Video: ಹಾವು- ಮುಂಗುಸಿ ನಡುವೆ ಜಟಾಪಟಿ; ಗೆದ್ದವರಾರು? ಸೋತವರಾರು?

ದಢೂತಿ ಗಾತ್ರದ ಹಾವು ಮುಂಗುಸಿ ನಡುವೆ ಜಗಳ ಉಂಟಾಗಿದೆ. ಇಬ್ಬರ ಸೆಣೆಸಾಟದಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದೇ ನೆಟ್ಟಿಗರಿಗೆ ಕುತೂಹಲ ಕೆರಳಿಸಿದೆ.

Viral Video: ಹಾವು- ಮುಂಗುಸಿ ನಡುವೆ ಜಟಾಪಟಿ; ಗೆದ್ದವರಾರು? ಸೋತವರಾರು?
ಹಾವು- ಮುಂಗುಸಿ ನಡುವೆ ಜಟಾಪಟಿ
Updated By: shruti hegde

Updated on: Jul 18, 2021 | 2:22 PM

ಚಿಕ್ಕ ವಯಸ್ಸಿನಿಂದಲೂ ಹಾವು ಮತ್ತು ಮುಂಗುಸಿ ಹೊಡೆದಾಡಿಕೊಳ್ಳುವ ಕಥೆಯನ್ನು ಕೇಳಿರುತ್ತೀರಿ. ಇದೀಗ ವೈರಲ್​ ಆದ ಸುದ್ದಿಯೂ ಸಹ ಅಮಥಹದ್ದೇ. ಹಾವು ಮತ್ತು ಮುಂಗುಸಿಯ ಭರ್ಜರಿ ಫೈಟ್​ ನಡೆಯುತ್ತಿದೆ. ದಢೂತಿ ಗಾತ್ರದ ಹಾವು ಮುಂಗುಸಿ ನಡುವೆ ಜಗಳ ಉಂಟಾಗಿದೆ. ಇಬ್ಬರ ಸೆಣೆಸಾಟದಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದೇ ನೆಟ್ಟಿಗರಿಗೆ ಕುತೂಹಲ ಕೆರಳಿಸಿದೆ.

ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದ್ದಕ್ಕಿದ್ದಂತೆಯೇ ಮುಖಾಮುಖಿಯಾದ ಹಾವು ಮತ್ತು ಮುಂಗುಸಿ ಮಧ್ಯೆ ಫೈಟ್​. ಹಾವು ಬುಸ್​.. ಎಂದು ಶಬ್ದ ಮಾಡುತ್ತಿದ್ದಂತೆಯೇ ಮುಂಗುಸಿ ಜಗಳಕ್ಕೆ ನಿಂತಿದೆ. ಪರಸ್ಪರ ಕಿತ್ತಾಟ ನಡೆಯುತ್ತಾ ಅದೆಷ್ಟೋ ದೂರದವರೆಗೆ ಸಾಗಿದ್ದಾರೆ.

ಹಾವು ಅಂದಾಕ್ಷಣ ಭಯವಾಗುವುದು ಸಹಜ. ಅದರಲ್ಲಿಯೂ ಮೈ ಬಳುಕಿಸುತ್ತಾ ಸರ ಸರನೆ ಹರಿಯುವ ಹಾವನ್ನು ವಿಡಿಯೋದಲ್ಲಿ ನೋಡಿದರೆ ಒಮ್ಮೆಲೆ ಮೈ ಜುಂ… ಅನ್ನುತ್ತದೆ. ಇದೀಗ ವೈರಲ್​ ಆದ ಹಾವು- ಮುಂಗುಸಿಯ ಜಗಳದ ದೃಶ್ಯ ಕೂಡಾ ಭಯವಾಗುವಂತಿದೆ.

ಈ ಭಯಾನಕ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್​ಎಸ್​) ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ 13,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಸಾವಿರಾರು ಲೈಕ್ಸ್​ಗಳು ಕೂಡಾ ಲಭಿಸಿವೆ. ನೂರಕ್ಕೂ ಹೆಚ್ಚು ರೀಟ್ವೀಟ್​ ಮಾಡಲಾಗಿದೆ.

ಇದನ್ನೂ ಓದಿ:

Viral Video: ರಸ್ತೆ ಮಧ್ಯೆ ಹಾವು ಮುಂಗುಸಿ ನಡುವೆ ಭರ್ಜರಿ ಫೈಟ್​! ಈ ಸೆಣಸಾಟದಲ್ಲಿ ಗೆದ್ದಿದ್ಯಾರು?

Viral Video: ಜೂ-ಕೀಪರ್​ ಮೇಲೆ ಆಕ್ರಮಣ ಮಾಡಿದೆ ದಢೂತಿ ಹಾವು! ಭಯಾನಕ ದೃಶ್ಯ ವೈರಲ್​