ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಹೆದ್ದಾರಿಯ ಎಡಭಾಗದಲ್ಲಿದ್ದ ರಸ್ತೆಯಿಂದಾಚೆಯಿಂದ ಕಾರು ಹಾರಿ ಕೆಳಗೆ ಬಿದ್ದಿದೆ. ಕಾರಿನಿಂದ ಹೊಗೆ ಹಾರುತ್ತಿರುವುದು ಕಂಡು ಬರುತ್ತದೆ. ಕಾರು ರಸ್ತೆಗೆ ಬಂದು ಅಪ್ಪಳಿಸಿದಾಕ್ಷಣ ರಭಸಕ್ಕೆ ಎರಡು ಬಾರಿ ಪಲ್ಟಿಯಾಗಿ ಬಿದ್ದಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದ್ದು, ಮೊದಲು ನನಗೆ ತಿಳಿಯಲಿಲ್ಲ. ಆದರೆ ಮಹಿಳೆ ಕಿರುಚುವುದು ಕೇಳಿಬಂತು ಎಂದು ವಿಡಿಯೋ ಹಂಚಿಕೊಂಡ ಮತ್ತೊಂದು ಕಾರಿನ ಚಾಲಕ ಹೇಳಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದ್ದಂತೆಯೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 300 ಕ್ಕೂ ಹೆಚ್ಚು ಕಾಮೆಂಟ್ಸ್ಗಳು ಬಂದಿವೆ.
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಚಾಲಕ ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಿದ್ದಾನೆ. ಬಳಿಕ ಪಲ್ಟಿಯಾಗಿ ಬಿದ್ದ ಕಾರಿನ ಒಳಗಿದ್ದ ಜನರನ್ನು ರಕ್ಷಿಸಲು ಮುಂದಾಗಿದ್ದಾನೆ. ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತನಿಗೆ ಸಣ್ಣ- ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬುದು ವರದಿಯಾಗಿದೆ.
ಇದನ್ನೂ ಓದಿ:
ಫಾರ್ಚೂನರ್ ಕಾರು ಪಲ್ಟಿ: ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು, ಯಾವೂರಲ್ಲಿ?
ಟ್ರ್ಯಾಕ್ಟರ್ ಪಲ್ಟಿ: ಹಾಲ್ ಟಿಕೆಟ್ ತರಲು ಹೋಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು