Viral Optical Illusion: ಈ ಚಿತ್ರದಲ್ಲಿರುವ ಇನ್ನೊಂದು ನಾಯಿಯನ್ನು ಕಂಡುಹಿಡಿಯಬಹುದೆ?

|

Updated on: Aug 28, 2023 | 12:52 PM

Brain Activity : ಕಾಳಿನಷ್ಟು, ಉಪ್ಪಿನಕಣದಷ್ಟು ಚಿಕ್ಕನಾಯಿ ಈ ಫೋಟೋದಲ್ಲಿದೆಯೇ? ಅಥವಾ ಆ ಗಿಡಗಂಟಿಗಳ ಮಧ್ಯೆ ಆ ನಾಯಿ ಅಡಗಿದೆಯೇ? ಹೋಗಲಿ ಅಲ್ಲಿರುವ ಕಪ್ಪು ನಾಯಿಯ ಹೊಟ್ಟೆಯಲ್ಲಿರಬಹುದೆ? ಅಂದರೆ ಅದು ಗರ್ಭಿಣಿಯಾಗಿದೆಯೇ? ಅಂತೆಲ್ಲ ಕೇಳುತ್ತಿದ್ದಾರೆ ಕೆಲವರು. ನೀವು ಹುಡುಕಿದರೆ ಆ ಇನ್ನೊಂದು ನಾಯಿ ಸಿಗಬಹುದೇನೋ. ಪ್ರಯತ್ನಿಸಿ.

Viral Optical Illusion: ಈ ಚಿತ್ರದಲ್ಲಿರುವ ಇನ್ನೊಂದು ನಾಯಿಯನ್ನು ಕಂಡುಹಿಡಿಯಬಹುದೆ?
ಇಲ್ಲಿ ಇನ್ನೊಂದು ನಾಯಿ ಅಡಗಿದೆ, ಪತ್ತೆಹಚ್ಚಿ.
Follow us on

Optical Illusion: ಮತ್ತೊಂದು ಸೋಮವಾರ ಬಂದಿದೆ. ಮತ್ತೊಂದು ಭ್ರಮಾತ್ಮಕ ಚಿತ್ರ ನಿಮ್ಮ ಮುಂದೆ ಇದೆ. ಒಂದು ಮನೆಯ ವರಾಂಡಾದೊಳಗೆ ಕಪ್ಪುನಾಯಿಯೊಂದು (Black Dog) ಕುಳಿತಿದೆ. ಮೊದಲ ನೋಟಕ್ಕೆ ಒಂದೇ ನಾಯಿ ಎನ್ನಿಸಿದರೂ ಎರಡು ನಾಯಿಗಳು ಇಲ್ಲಿವೆ. ಹಾಗಿದ್ದರೆ ಇನ್ನೊಂದು ನಾಯಿ ಈ ಫೋಟೋದಲ್ಲಿ ಎಲ್ಲಿ ಅಡಗಿದೆ? 10 ಸೆಕೆಂಡುಗಳಲ್ಲಿ ನೀವು ಆ ನಾಯಿಯನ್ನು ಪತ್ತೆ ಹಚ್ಚಲು ಸಾಧ್ಯವೆ? ತುಂಬಾ ಹೊತ್ತು ನೋಡಿದರೂ ನನಗೆ ಒಂದೇ ನಾಯಿ ಕಾಣುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರಲ್ಲಿ ಕೆಲವರು. ಮೂರು ದಿನಗಳ ಹಿಂದೆ ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಲಾದ ಈ ಫೋಟೋ ಅನ್ನು ಈತನಕ ಸುಮಾರು 100 ಮಂದಿ ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಜಪಾನ್; ಝೀಬ್ರಾ ಕ್ರಾಸಿಂಗ್​ ಮಾಡಿ ರಸ್ತೆ ದಾಟಿದ ಜಿಂಕೆಯ ವಿಡಿಯೋ

ವಿದ್ಯುತ್​ ಕಂಬದ ಕೆಳಗೆ ನಾಯಿಮರಿಯೊಂದು ಇದ್ದಹಾಗಿದೆ. ಅದೇ ತಾನೆ? ಎಂದು ಒಬ್ಬರು ಕೇಳಿದ್ದಾರೆ. ಬಾಸ್ಕೆಟ್ ಬಾಲ್​​ ಕಂಬದ ಬಳಿ? ಎಂದು ಕೇಳಿದ್ದಾರೆ ಇನ್ನೊಬ್ಬರು. ವರಾಂಡಾದಲ್ಲಿ ಕುಳಿತಿರುವ ನಾಯಿಯು ನಗುತ್ತಿರುವಂತೆ ನನಗೆ ಕಾಣುತ್ತಿದೆ ಎಂದು ಮಗದೊಬ್ಬರು ಹೇಳಿದ್ದಾರೆ. ಅಲ್ಲಿರುವ ಗಿಡಗಳ ಮಧ್ಯೆ ಅಡಗಿರಬಹುದು ಎಂದಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

10 ಸೆಕೆಂಡುಗಳಲ್ಲಿ ಇನ್ನೊಂದು ನಾಯಿಯನ್ನು ಗುರುತಿಸಿ

Posts from the accidentalcamouflage
community on Reddit

ಅದೆಷ್ಟು ಝೂಮ್ ಮಾಡಿ ನೋಡಿದರೂ ಇನ್ನೊಂದು ನಾಯಿ ಸಿಗುತ್ತಲೇ ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಬಹುಶಃ ನಾಯಿ ಕಾಳುಕಡಿ ಅಥವಾ ಉಪ್ಪಿನ ಕಣದಷ್ಟು ಸಣ್ಣ ಇರಬಹುದು, ನನ್ನ ಕಣ್ಣಂತೂ ಕಾಣುತ್ತಿಲ್ಲ ಎಂದಿದ್ದಾರೆ ಒಬ್ಬರು. ಇಲ್ಲ ಇಲ್ಲಿ ಇರುವುದೊಂದೇ ನಾಯಿ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ : Viral Video: ಕಾವಾಲಾ ಕಾವು; ಕಿಲಿ, ನೀಮಾ ಪೌಲ್ ಡ್ಯಾನ್ಸ್​ಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು

ಬಹುಶಃ ಈ ನಾಯಿಯ ಹೊಟ್ಟೆಯಲ್ಲಿದೆಯೆ? ಈ ನಾಯಿ ಗರ್ಭಿಣಿಯಾಗಿರಬಹುದು. ಇನ್ನೊಂದು ಮರಿಯನ್ನು ನೋಡಲು ಅಲ್ಟ್ರಾ ಸೌಂಡ್​ ಮಶೀನ್​ ತೆಗೆದುಕೊಂಡು ಬರಬೇಕಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು. ಏನೂ ಪ್ರಯೋಜನವೇ ಇಲ್ಲ ಈ ಚಿತ್ರದಿಂದಾಗಿ ಎಂದು ಬೇಸರಿಸಿಕೊಂಡಿದ್ದಾರೆ ಅನೇಕರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:50 pm, Mon, 28 August 23