ಸದ್ಯ ಆಪ್ಟಿಕಲ್ ಇಲ್ಯೂಶನ್ (Optical Illusion) ಚಿತ್ರಗಳನ್ನು ಜನರು ಹೆಚ್ಚು ಆಸಕ್ತಿಯಿಂದ ಗಮನಿಸುತ್ತಾರೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಈ ಚಿತ್ರಗಳು ಕಣ್ಣುಗಳಿಗೆ ಒಂದು ರೀತಿಯ ಭ್ರಮೆ ಉಂಟುಮಾಡುತ್ತವೆ. ಹೀಗಾಗಿ ಜನರಿಗೆ ನಿಖರವಾಗಿ ಅವುಗಳಲ್ಲಿನ ಅಂಶಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಇದರಲ್ಲಿ ಹಲವಾರು ಮಾದರಿಗಳಿವೆ. ಉದಾಹರಣೆಗೆ ಕೆಲವು ಚಿತ್ರಗಳು ಬುದ್ಧಿಶಕ್ತಿಗೆ ಕೆಲಸ ಕೊಟ್ಟರೆ, ಮತ್ತೆ ಕೆಲವು ಚಿತ್ರಗಳು ವ್ಯಕ್ತಿತ್ವದ ಬಗ್ಗೆ ಹೇಳುತ್ತವೆ. ಈ ಬಗ್ಗೆ ಕುತೂಹಲವಿದ್ದರೆ ನೀವು ಈ ಬರಹ ಓದಬಹುದು. ಪ್ರಸ್ತುತ ಸಖತ್ ಸುದ್ದಿಯಾಗಿರುವ ಈ ಚಿತ್ರವನ್ನು ಗಮನಿಸಿದರೆ, ಇದೊಂದು ರೆಟ್ರೋ ಪೇಂಟಿಂಗ್. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಕರಡಿಯೊಂದು ಅಡಗಿ ಕುಳಿತಿದೆ. ನೀವು ಗುರುತಿಸಬಲ್ಲಿರಾ?
ನೀವು ಕರಡಿಯನ್ನು ಗುರುತಿಸುವುದಕ್ಕೂ ನಿಬಂಧನೆಯಿದೆ. ಹೌದು, ನೀವು ಒಂದು ನಿಮಿಷಗಳೊಳಗೆ ಈ ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಗುರುತಿಸಬೇಕು. ಮೇಲಿನ ಪೇಂಟಿಂಗ್ ಅನ್ನು ಸಾಮಾನ್ಯವಾಗಿ ವೀಕ್ಷಿಸಿದಾಗ ನಿಮಗೆ ಒಬ್ಬ ಬೇಟೆಗಾರ ಹಿಮದ ಮೇಲೆ, ತನ್ನ ಮೊಣಕಾಲಿನಲ್ಲಿ ಕುಳಿತಿರುವುದು ಕಾಣುತ್ತದೆ. ಆದರೆ ಈ ಚಿತ್ರದಲ್ಲಿ ಕರಡಿಯೂ ಇದೆ. ಅದು ಹಾಗೆಯೇ ಗಮನಿಸಿದರೆ ಕಣ್ಣಿಗೆ ಬೀಳುವುದಿಲ್ಲ. ನೀವು ಚಾಣಾಕ್ಷತೆಯಿಂದ ವಿವಿಧ ಆಯಾಮಗಳಲ್ಲಿ ಚಿತ್ರವನ್ನು ವೀಕ್ಷಿಸಲೇಬೇಕು.
ಉತ್ತರ ತಿಳಿಯುತ್ತಿಲ್ಲವೇ? ಒಂದು ಸುಳಿವನ್ನು ಕೇಳುತ್ತಿದ್ದೀರಾ? ಕರಡಿ ಚಿತ್ರದ ಬಲಭಾಗದಲ್ಲಿದೆ. ನೇರವಾಗಿ ನೋಡಿದರೆ ಗುರುತು ಸಿಕ್ಕುವುದಿಲ್ಲ. ಅದಕ್ಕಾಗಿ ನೀವು ಸ್ವಲ್ಪ ಹುಡುಕಾಡಲೇಬೇಕಾಗುತ್ತದೆ. ಉತ್ತರ ತಿಳಿಯಿತೇ?
ಇಲ್ಲಿದೆ ಉತ್ತರ:
ಈ ಖ್ಯಾತ ಹಳೆಯ ಕಲಾಕೃತಿಯಲ್ಲಿ ಕರಡಿ ಅಡಗಿದ್ದು, ಅದು ಚಿತ್ರದ ಬಲಭಾಗದಲ್ಲಿದೆ. ಆದರೆ ಅದನ್ನು ನೇರವಾಗಿ ನೋಡಿದರೆ ಗುರುತಿಸುವುದು ಕಷ್ಟ. ಅದರ ಬದಲಾಗಿ ನೀವು ಚಿತ್ರವನ್ನು ತಿರುವುಮುರುವಾಗಿ ನೋಡಿದರೆ, ಕರಡಿಯೊಂದು ಮಲಗಿರುವುದು ಕಾಣುತ್ತದೆ. ನೇರವಾಗಿ ನೋಡಿದರೆ ಕರಡಿ ತಲೆಕೆಳಗೆ, ಕಾಲು ಮೇಲಾಗಿದೆ. ಆದರೆ ಚಿತ್ರವನ್ನೇ ತಿರುಗಿಸಿದರೆ, ಸಾಮಾನ್ಯವಾಗಿ ನಿಂತಂತೆ ಕಾಣುವ ಕರಡಿಯ ದೇಹ ಕಾಣಸಿಗುತ್ತದೆ.
ಇನ್ನೂ ಗೊಂದಲಗಳಿದ್ದಲ್ಲಿ ಈ ಚಿತ್ರದಲ್ಲಿ ಉತ್ತರವಿದೆ:
ಇದನ್ನೂ ಓದಿ: Optical Illusion: ಈ ಚಿತ್ರದಲ್ಲಿ ಒಟ್ಟು 9 ಮುಖಗಳಿವೆ; ನೀವು ಗುರುತಿಸಬಲ್ಲಿರಾ?