AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anand Mahindra: ‘ನಾನು ಆ ವ್ಯಕ್ತಿಯನ್ನು ಭೇಟಿಯಾಗಬೇಕು’; ಅಷ್ಟಕ್ಕೂ ಆನಂದ್ ಮಹೀಂದ್ರಾ ಫಿದಾ ಆದ ವಿಡಿಯೋದಲ್ಲೇನಿದೆ?

Viral Video: ಇತ್ತೀಚೆಗೆ ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದರಲ್ಲಿ ಹಾಲಿನ ಕ್ಯಾನ್ ಸಾಗಿಸುವ ವ್ಯಕ್ತಿಯೊಬ್ಬ ಹೊಸ ಮಾದರಿಯಲ್ಲಿ ಗಾಡಿಯನ್ನು ವಿನ್ಯಾಸಗೊಳಿಸಿ, ಕ್ಯಾನ್​ಗಳನ್ನು ಸಾಗಿಸುತ್ತಿದ್ದಾನೆ. ಇದನ್ನು ವೀಕ್ಷಿಸಿದ ಆನಂದ್ ಮಹೀಂದ್ರಾ, ಆ ವ್ಯಕ್ತಿಯನ್ನು ಭೇಟಿಯಾಗಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Anand Mahindra: ‘ನಾನು ಆ ವ್ಯಕ್ತಿಯನ್ನು ಭೇಟಿಯಾಗಬೇಕು’; ಅಷ್ಟಕ್ಕೂ ಆನಂದ್ ಮಹೀಂದ್ರಾ ಫಿದಾ ಆದ ವಿಡಿಯೋದಲ್ಲೇನಿದೆ?
ಆನಂದ್ ಮಹೀಂದ್ರಾ (ಎಡ ಚಿತ್ರ), ವೈರಲ್ ಆಗಿರುವ ಹೊಸ ಮಾದರಿಯ ವಾಹನ (ಬಲ ಚಿತ್ರ)
TV9 Web
| Updated By: shivaprasad.hs|

Updated on: Apr 30, 2022 | 2:03 PM

Share

ಸಾಮಾಜಿಕ‌ ಜಾಲತಾಣಗಳಲ್ಲಿ ಆನಂದ್‌ ಮಹೀಂದ್ರಾ (Anand Mahindra) ಸಖತ್ ಆಕ್ಟಿವ್. ಅದರಲ್ಲೂ ಟ್ಚಿಟರ್​ನಲ್ಲಿ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ.‌‌ ಇದಕ್ಕೆ ಕಾರಣವೂ ಇಲ್ಲದಿಲ್ಲ. ಭಾರತದ ಯಾವುದೋ ಮೂಲೆಯಲ್ಲಿರುವ ಸಾಮಾನ್ಯ ವ್ಯಕ್ತಿಯೊಬ್ಬ ದೇಶದ ಜನರನ್ನು ಬೆರಗುಗೊಳಿಸುವ ಸಾಮರ್ಥ್ಯ ಹೊಂದಿದ್ದರೆ ಅದನ್ನು ಆನಂದ್ ಮಹೀಂದ್ರಾ ಹಂಚಿಕೊಳ್ಳುತ್ತಾರೆ. ಹಾಗಂತ ಅದೇನೋ ಪುಸ್ತಕದಲ್ಲಿ ದಾಖಲಾಗುವ ಸಾಧನೆಯಲ್ಲ, ಬದಲಾಗಿ ಬುದ್ಧಿವಂತಿಕೆ ಉಪಯೋಗಿಸಿ ಕೆಲಸವನ್ನು ಸುಲಭಗೊಳಿಸುವ ಅಥವಾ ಹೊಸ ಆವಿಷ್ಕಾರದಿಂದ ಜನರ ಮನಗೆಲ್ಲುವ ವಿಡಿಯೋಗಳು ಅವಾಗಿರುತ್ತವೆ. ಕೆಲವು ವೈರಲ್ ವಿಡಿಯೋಗಳ ಮೂಲಕ ಬದುಕಿನ ಪಾಠವನ್ನೂ ಹೇಳುತ್ತಾರೆ ಉದ್ಯಮ ಕ್ಷೇತ್ರದ ಈ ಗಣ್ಯ. ಈ ಕಾರಣದಿಂದಲೇ ಅವರ ಫಾಲೋವರ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇತ್ತೀಚೆಗೆ ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋವೊಂದು ಸಖತ್ ವೈರಲ್ (Viral Video) ಆಗಿದೆ. ಅದರಲ್ಲಿ ಹಾಲಿನ ಕ್ಯಾನ್ ಸಾಗಿಸುವ ವ್ಯಕ್ತಿಯೊಬ್ಬ ಹೊಸ ಮಾದರಿಯಲ್ಲಿ ಗಾಡಿಯನ್ನು ವಿನ್ಯಾಸಗೊಳಿಸಿ, ಕ್ಯಾನ್​ಗಳನ್ನು ಸಾಗಿಸುತ್ತಿದ್ದಾನೆ. ಇದನ್ನು ವೀಕ್ಷಿಸಿದ ಆನಂದ್ ಮಹೀಂದ್ರಾ, ಆ ವ್ಯಕ್ತಿಯನ್ನು ಭೇಟಿಯಾಗಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋವನ್ನು ಮೊದಲು ‘ರೋಡ್ಸ್ ಆಫ್ ಮುಂಬೈ’ ಎಂಬ ಪೇಜ್ ಮೂಲಕ ಹಂಚಿಕೊಳ್ಳಲಾಗಿತ್ತು. ಅದು ವಿಡಿಯೋಕ್ಕೆ “ನಿಮಗೆ ಎಫ್ 1 ರೇಸರ್ ಆಗಬೇಕೆಂಬ ಕನಸಿರುತ್ತದೆ. ಆದರೆ ಕುಟುಂಬವು ಡೈರಿ ಬ್ಯುಸಿನೆಸ್ ನಲ್ಲಿ ಸಹಾಯ ಮಾಡು ಎಂದು ಕೋರಿಕಂಡಾಗ ಹೀಗಾಗುತ್ತದೆ” ಎಂದು ಶೀರ್ಷಿಕೆ ಬರೆದಿತ್ತು. ಬಹಳಷ್ಟು ಜನರು ಈ ವಿಡಿಯೋವನ್ನು ಮಜವಾಗಿ ಸ್ವೀಕರಿಸಿದ್ದಾರೆ. ಒಂದಷ್ಟು ಜನರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಸುಮಾರು 12 ಲಕ್ಷ ಜನರು ಈ ವಿಡಿಯೋ ವೀಕ್ಷಿಸಿದ್ದು, ಕೆಲವರು ಕಾಮೆಂಟ್ ಗಳಲ್ಲಿ ಆನಂದ್ ಮಹೀಂದ್ರಾರನ್ನು ಟ್ಯಾಗ್ ಮಾಡಿ, ವಿಡಿಯೋ ವೀಕ್ಷಿಸುವಂತೆ ಕೋರಿಕೊಂಡಿದ್ದರು. ಕೊನೆಗೆ ಅದು ಆನಂದ್ ಮಹೀಂದ್ರಾ ಅವರ ಗಮನಕ್ಕೆ ಬಂದಿದ್ದು, ವಿಡಿಯೋ‌ ನೋಡಿದ ಅವರು ಫಿದಾ ಆಗಿ, ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ವಿಡಿಯೋ ನೋಡಿದ ಆನಂದ್ ಮಹೀಂದ್ರಾ ರಿಟ್ವೀಟ್ ಮಾಡಿ, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಈ ಮಾದರಿಯ ವಾಹನ ರಸ್ತೆಯ ನಿಯಮಗಳಿಗೆ ಬದ್ಧವಾಗಿದೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ ವಾಹನದ ಮೇಲಿನ ಆ ವ್ಯಕ್ತಿಯ ಆಸಕ್ತಿ ಮಾತ್ರ ಅದ್ಭುತವಾಗಿದೆ. ಬಹಳ ಕಾಲದ ನಂತರ ಒಂದು ಸುಂದರವಾದ ವಿಡಿಯೋ ನೋಡಿದೆ. ಈ ರಸ್ತೆ ಹೋರಾಟಗಾರನನ್ನು ಭೇಟಿಯಾಗಬೇಕು” ಎಂದಿದ್ದಾರೆ ಆನಂದ್ ಮಹೀಂದ್ರಾ. ಅವರು ರಿಟ್ವೀಟ್ ಮಾಡಿದ ನಂತರ ವಿಡಿಯೋ ಮತ್ತಷ್ಟು ವೈರಲ್ ಆಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿದೆ.

ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಭಾರತದ ಗ್ರಾಮೀಣ ಭಾಗಗಳಲ್ಲಿ ಇಂತಹ ಕೌಶಲ್ಯವಿರುವವರು ಅನೇಕರಿದ್ದಾರೆ. ಆದರೆ ಅವರಿಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ ಎಂದು ಓರ್ವರು ಪ್ರತಿಕ್ರಿಯೆ ನೀಡಿದರೆ, ಇಂಥದ್ದನ್ನು ಗುರುತಿಸುವ ಆನಂದ್ ಮಹೀಂದ್ರಾರ ಗುಣವನ್ನು ಮತ್ತೋರ್ವರು ಶ್ಲಾಘಿಸಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿದ ವ್ಯಕ್ತಿ; ವಿಡಿಯೋ ಮಜವಾಗಿದೆ

Shocking Video: ನಡುರಸ್ತೆಯಲ್ಲೇ ಹೆಂಡತಿ, ಮಗಳನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್