ಇದು ಮಹಿಳೆಯರಿಗಾಗಿಯೇ ಇರುವ ದ್ವೀಪ, ಪುರುಷರಿಗೆ ಇಲ್ಲ ಎಂಟ್ರಿ

ಯಾವುದೇ ಪ್ರವಾಸಿ ತಾಣಗಳಲ್ಲಿ ಒಂದೇ ಒಂದು ಪುರುಷರು ಕಾಣದೇ ಇದ್ರೆ ಹೀಗಿರುತ್ತೆ ಎಂದು ಒಮ್ಮೆ ಊಹಿಸಿ. ಈ ರೀತಿ ಊಹಿಸಿಕೊಳ್ಳೋದಕ್ಕೂ ಅಸಾಧ್ಯ. ಆದರೆ ಫಿನ್‌ಲ್ಯಾಂಡ್‌ನಲ್ಲಿರುವ ಸೂಪರ್‌ಶಿ ದ್ವೀಪವು ಮಹಿಳೆಯರಿಗೆ ಮಾತ್ರ ಎಂಟ್ರಿಯಿರುವ ವಿಶೇಷ ದ್ವೀಪವಾಗಿದೆ. ಮಾಜಿ ಅಮೆರಿಕನ್‌ ಉದ್ಯಮಿ ಕ್ರಿಸ್ಟಿನಾ ರೋತ್ ಸ್ಥಾಪಿಸಿದ ಈ ದ್ವೀಪವು ಏಕಕಾಲದಲ್ಲಿ ಎಂಟು ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ. ಹಾಗಾದ್ರೆ ಈ ಕುರಿತಾದ ಇನ್ನಷ್ಟು ಕುತೂಹಲಕಾರಿ ಸಂಗತಿ ಇಲ್ಲಿದೆ.

ಇದು ಮಹಿಳೆಯರಿಗಾಗಿಯೇ ಇರುವ ದ್ವೀಪ, ಪುರುಷರಿಗೆ ಇಲ್ಲ ಎಂಟ್ರಿ
ಸೂಪರ್‌ಶಿ ದ್ವೀಪ
Image Credit source: Pinterest

Updated on: Jan 09, 2026 | 3:47 PM

ಬದುಕಿನ ಜಂಜಾಟ ಮರೆತು ಪ್ರಶಾಂತ ಸ್ಥಳಕ್ಕೆ ಹೋಗಿ ಕುಳಿತು ಬಿಡುವ ಎಂದೆನಿಸುವುದು ಸಹಜ. ಹೀಗಾಗಿ ಕೆಲವರು ವೀಕೆಂಡ್‌ಗೆ ಟ್ರಿಪ್ (Trip) ಪ್ಲ್ಯಾನ್ ಮಾಡಿ ಸುತ್ತಾಡಲು ಹೋಗುತ್ತಾರೆ. ಎಲ್ಲಾ ಟೆನ್ಶನ್‌ಗಳಿಗೂ ಬ್ರೇಕ್ ಹಾಕಿ ಏಕಾಂಗಿ ಕಳೆಯಬೇಕೆನ್ನುವವರಿಗೆ ಒಂದು ವಿಶೇಷ ದ್ವೀಪವಿದೆ. ಅದುವೇ ಫಿನ್‌ಲ್ಯಾಂಡ್‌ನ ಸೂಪರ್‌ಶೀ ದ್ವೀಪ (SuperShe in Finland’s). ಆದರೆ ಈ ದ್ವೀಪಕ್ಕೆ ಫ್ಯಾಮಿಲಿ ಸಮೇತ ಹೋಗಬೇಕೆನ್ನುವವರಿಗೆ ಈ ಆಸೆ ಖಂಡಿತ ಈಡೇರಲ್ಲ. ಪುರುಷರಂತೂ ಈ ದ್ವೀಪದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳೋ ಆಗಿಲ್ಲ. ಹೌದು, ಈ ದ್ವೀಪಕ್ಕೆ ಪುರುಷರಿಗೆ ಎಂಟ್ರಿ ಇಲ್ಲ. ಮಹಿಳೆಯರು ಮಾತ್ರ ಇಲ್ಲಿಗೆ ಹೋಗಬಹುದಾಗಿದೆ.

ಪಿನ್ ಲ್ಯಾಂಡ್‌ನಲ್ಲಿ ಹೆಲ್ಸಿಂಕಿ ನಗರದಿಂದ ಸರಿಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಬಾಲ್ಟಿಕ್ ಸಮುದ್ರದ ಕರಾವಳಿಯಲ್ಲಿರುವ ಈ ದ್ವೀಪವು 8.4 ಎಕರೆ ಪ್ರದೇಶದವರೆಗೆ ವ್ಯಾಪಿಸಿದೆ. ಮಹಿಳೆಯರು ಈ ದ್ವೀಪಕ್ಕೆ ಭೇಟಿ ಕೊಟ್ಟು ಯಾವುದೇ ಭಯವಿಲ್ಲದೇ ತಿರುಗಾಡಬಹುದು. ಆದರೆ ಈ ದ್ವೀಪಕ್ಕೆ ಏಕಕಾಲದಲ್ಲಿ ಎಂಟು ಮಹಿಳೆಯರಿಗೆ ಮಾತ್ರ ಹೋಗಲು ಅವಕಾಶವಿದೆ.

ಸಮುದ್ರದ ಅಲೆಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಬೆಳಿಗ್ಗೆ ಯೋಗ ಮತ್ತು ಧ್ಯಾನ ಮಾಡುವ ಮೂಲಕ ದಿನವನ್ನು ಆರಂಭಿಸಬಹುದಾಗಿದೆ. ದಟ್ಟವಾದ ಕಾಡಿನಲ್ಲಿ ನಡೆಯುವುದು, ಸಾಹಸಮಯ ಚಟುವಟಿಕೆಗಳು, ಸಾಂಪ್ರದಾಯಿಕ ಉಗಿಸ್ನಾನ ಹೀಗೆ ಇಲ್ಲಿಗೆ ಬಂದ್ರೆ ಮಹಿಳೆಯರು ಅನುಭವಿಸಬಹುದು. ಇನ್ನು ವಿಶೇಷ ಎಂಬಂತೆ ಇಲ್ಲಿ ಸಪ್ಲೈಯರ್‌ಯಿಂದ ಹಿಡಿದು ಕುಕ್, ಕ್ಲೀನರ್, ಟ್ರೇನರ್‌ವರೆಗೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ.

ಇದನ್ನೂ ಓದಿ:ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ

ಟೆಕ್ ಕಂಪನಿಯ ಮಾಜಿ ಸಿಇಒ ಕ್ರಿಸ್ಟಿನಾ ರಾತ್ ಕಾರ್ಪೊರೇಟ್ ಜಗತ್ತಿನಲ್ಲಿನ ಒತ್ತಡದಿಂದ ಮುಕ್ತರಾಗಲು ಮಹಿಳೆಯರಿಗಾಗಿ ಸ್ಥಾಪಿಸಿದ್ದರಂತೆ. ಹಾಗಂತ ಈ ದ್ವೀಪದಲ್ಲಿ ಪುರುಷರಿಗೆ ಎಂಟ್ರಿ ಇಲ್ಲ ಎಂಬ ಜಾರಿಗೆ ತಂದದ್ದು ಪುರುಷರ ಮೇಲಿನ ದ್ವೇಷದಿಂದಲ್ಲ, ಬದಲಾಗಿ ಮಹಿಳೆಯರು ಮುಕ್ತವಾಗಿ ಓಡಾಡಲು ಹಾಗೂ ಒಂಟಿಯಾಗಿ ಸಮಯ ಕಳೆಯಬೇಕೆನ್ನುವ ಉದ್ದೇಶದಿಂದ ಮಾತ್ರ ಎನ್ನುವುದು ವಿಶೇಷ. ಆದರೆ ದುರಸ್ತಿ ಕೆಲಸಗಳಿಗಾಗಿ ಮಾತ್ರ ಪುರುಷರಿಗೆ ಸೀಮಿತ ಸಮಯದಲ್ಲಿ ಪ್ರವೇಶ ನೀಡಲಾಗುತ್ತದೆ. ಈ ಎಲ್ಲಾ ಕಾರಣದಿಂದ ಈ ದ್ವೀಪವನ್ನು ಮಹಿಳೆಯರ ಸ್ವರ್ಗ ಎಂದು ಕರೆಯಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ