Viral: ದರೋಡೆಕೋರ ಮೀನು; ಸಮುದ್ರದಾಳದಲ್ಲಿಯೂ ಕಳ್ಳರಿದ್ದಾರೆ ಎಚ್ಚರಿಕೆ!

|

Updated on: Jul 15, 2023 | 11:14 AM

Flying Fish : ಈಗಾಗಲೇ ಭೂಮಿಯ ಮೇಲಿರುವ ಕಳ್ಳಕಾಕರು ದೊಡ್ಡ ತಲೆನೋವಾಗಿದ್ದಾರೆ. ಆದರೆ ಸಮುದ್ರದೊಳಗೂ ನಿಮ್ಮನ್ನು ಅವರು ಬೆನ್ನಟ್ಟುತ್ತಾರೆಂದರೆ ಏನರ್ಥ? ಈ ಇಬ್ಬರು ಮಹಿಳೆಯರ ಕಥೆ ಕೇಳಿ ಮತ್ತು ನೋಡಿ.

Viral: ದರೋಡೆಕೋರ ಮೀನು; ಸಮುದ್ರದಾಳದಲ್ಲಿಯೂ ಕಳ್ಳರಿದ್ದಾರೆ ಎಚ್ಚರಿಕೆ!
ಹೀಗೆ ಇವರು ವಿಡಿಯೋಗೆ ಪೋಸ್​ ಕೊಡುವಾಗಲೇ ಮೀನು ಮೊಬೈಲ್​ ಕದ್ದಿದ್ದು.
Follow us on

Sea : ಮೀನುಗಳಿಗೂ ಈಗ ಸ್ಕ್ರೀನ್ ಟೈಮ್ ಬೇಕಿದೆಯೇ? ಎಂದು ಯೋಚಿಸಬೇಕಾದಂಥ ಪರಿಸ್ಥಿತಿ ಇದೀಗ ಬಂದಿದೆ. ಫಿಲಿಪೈನ್ಸ್​ನ (Philippines​) ಸಮುದ್ರದಲ್ಲಿ ಈ ಮಹಿಳೆಯರಿಬ್ಬರು ದೋಣಿಯೊಳಗೆ ಪ್ರಯಾಣಿಸಿದ್ಧಾರೆ. ಇಬ್ಬರೂ ಹೀಗೆ ಕುಳಿತು ವಿಡಿಯೋಕ್ಕೆ ಪೋಸ್ ನೀಡುವಾಗ ಒಬ್ಬಾಕೆಯ ಕೈಯಲ್ಲಿದ್ದ ಮೊಬೈಲ್ (Mobile)​ ಅನ್ನು ಹಾರುವ ಮೀನೊಂದು ಕ್ಷಣಮಾತ್ರದಲ್ಲಿ ಎಗರಿಸಿಕೊಂಡು ಹೋಗಿದೆ. ವೈರಲ್ ಆಗಿರುವ ಈ ವಿಡಿಯೋ ಅನ್ನು ನೆಟ್ಟಿಗರು ಅವಾಕ್ಕಾಗಿ ನೋಡುತ್ತಿದ್ದಾರೆ. ಈ ಕೆಳಗಿನ ವಿಡಿಯೋ ಗಮನಿಸಿ.

ಜೂ.19 ರಂದು ಫಿಲಿಪೈನ್ಸ್‌ನ ಲೇಟೆ ಪ್ರಾಂತ್ಯದ ಸಮುದ್ರತೀರದಲ್ಲಿ ಈ ಘಟನೆ ನಡೆದಿದೆ. ಫೋನ್​ ಕಳೆದುಕೊಂಡ  ಮಹಿಳೆಯ ಸಂಬಂಧಿ ಚಾ ಉರ್ಸಲ್​, ‘ತೀರಿಹೋದ ನಮ್ಮ ಚಿಕ್ಕಮ್ಮನಿಗೆ ಗೌರವ ಸಲ್ಲಿಸಲು ದೋಣಿಯಲ್ಲಿ ಹೊರಟಿದ್ದೆವು. ಈ ಸಂದರ್ಭದಲ್ಲಿ ಸ್ನೇಹಿತರೊಬ್ಬರು ನಮ್ಮ ವಿಡಿಯೋ ಮಾಡುತ್ತಿದ್ದರು. ಪೋಸ್​ ಕೊಡುತ್ತಿರುವಾಗ ಮಕ್ವಿಲನ್​ ಕೈಯಲ್ಲಿದ್ದ ಮೊಬೈಲ್​ ಕ್ಷಣಮಾತ್ರದಲ್ಲಿ ಕಾಣೆಯಾಯಿತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಹುಷಾರ್​! ನಾನು ಟೊಮ್ಯಾಟೋ ಕಾವಲುಗಾರ ನಾಗರಾಜ

ಅಂಥಾ ಜೋರು ಗಾಳಿಯೂ ಇಲ್ಲ ಮತ್ತು ಯಾವ ಮನುಷ್ಯರೂ ಅಲ್ಲಿರಲಿಲ್ಲ. ಮೊಬೈಲ್​ ಮಾಯವಾಗಿದ್ದು ಹೇಗೆ ಎಂಬ ಕಳವಳಕ್ಕೆ ಅವರು ಬಿದ್ದಿದ್ದಾರೆ. ತಕ್ಷಣವೇ ದೋಣಿಯೊಳಗೆ ತಮ್ಮ ಸುತ್ತಮುತ್ತಲೂ ಮೊಬೈಲ್​ ಹುಡುಕಿದ್ದಾರೆ, ಎಲ್ಲಿಯೂ ಅದು ಪತ್ತೆಯಾಗಿಲ್ಲ. ಕೊನೆಗೆ ಸಮುದ್ರದ ಪಾಲಾಯಿತೆನ್ನುವುದು ಅರಿವಿಗೆ ಬಂದಿದೆ. ಆದರೆ ಕೈಯಲ್ಲಿದ್ದುದನ್ನು ಕಸಿಕೊಂಡು ಹೋಗಿರುವವರಾದರೂ ಯಾರು ಎಂಬ ಗುಂಗು ಅವರನ್ನು ಬಿಟ್ಟೇ ಇಲ್ಲ.

ಇದನ್ನೂ ಓದಿ : Viral Video: ನಿಮಗೆ ಇಂಥವರ ಕಥೆ ಗೊತ್ತಿಲ್ಲ, ದೂರವಿಡುವ ಮುನ್ನ ದಯವಿಟ್ಟು ಯೋಚಿಸಿ

ಕೊನೆಗೆ ಸ್ನೇಹಿತರ ಮೊಬೈಲ್​ನಲ್ಲಿದ್ದ ವಿಡಿಯೋ ನೋಡಿದಾಗ ಕಳ್ಳ ಯಾರೆಂದು ತಿಳಿದುಬಂದಿದೆ. ನಂತರ ಬಂದ ಕೆಲಸವನ್ನು ಮುಗಿಸಿ ವಾಪಾಸು ಹೊರಟಾಗ ಸಂಜೆಹೊತ್ತಿಗೆ ಅದೇ ತೀರದಲ್ಲಿ ಯಾರೋ ಒಬ್ಬರು ಇವರ ಮೊಬೈಲ್​ ಅನ್ನು ಹಿಂದಿರುಗಿಸಿದ್ದಾರೆ. ಅಂದರೆ ಮೊಬೈಲ್​ ದಡದಲ್ಲಿ ಬಂದು ಬಿದ್ದಿತ್ತು. ಆದರೆ ಅದು ರಿಪೇರಿಗೊಳ್ಳದ ಅವಸ್ಥೆಯಲ್ಲಿತ್ತು. ಕೊನೆಗೆ ಹೊಸ ಮೊಬೈಲ್ ಖರೀದಿಯೊಂದಿಗೆ ಈ ಪ್ರಸಂಗ ಅಂತ್ಯಗೊಂಡಿತು.

ಪಾಸ್ವರ್ಡ್​ ಗೊತ್ತಾಗದೆಯೇ ಕಳ್ಳಮೀನು ಇದನ್ನು ಕೈಬಿಟ್ಟಿತೇ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ