Cardamom : ಪಾಯಸದಲ್ಲಿ, ಉಂಡೆಯಲ್ಲಿ, ಚಹಾದಲ್ಲಿ, ಸಿಹಿತಿಂಡಿಗಳಲ್ಲಿ (Sweets) ಬಗೆಬಗೆಯ ಖಾದ್ಯಗಳಲ್ಲಿ ಬಂದು ಬೀಳುವ ಈ ಪುಟ್ಟ ಏಲಕ್ಕಿಯ ಘಮಕ್ಕೆ ಮಾರುಹೋಗದವರು ಯಾರಿಲ್ಲ? ಭೂಮಿಯಿಂದ ಅಡುಗೆಮನೆಯತನಕದ ಇದರ ಪ್ರಯಾಣ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತಿದೆಯೇ? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಘಮಘಮಿಸುವ ಏಲಕ್ಕಿಯ ಮಹಾತ್ಮೆ ನಿಜಕ್ಕೂ ದೊಡ್ಡದೇ! ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಏಲಕ್ಕಿ ಫ್ಯಾಕ್ಟರಿಗೆ ದಾಂಗುಡಿ ಇಟ್ಟಿದ್ದಾರೆ ಈ ಇನ್ಸ್ಟಾಗ್ರಾಮಿ ಹೆಣ್ಣುಮಗಳು.
ಈ ವಿಡಿಯೋ ಅನ್ನು ಈತನಕ ಸುಮಾರು 17,000 ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಅನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಆಹಾರದ ಮೂಲವೇನು, ಅದು ಎಲ್ಲಿಂದ ಬರುತ್ತದೆ ಮತ್ತು ಯಾರು ಅದನ್ನು ಉತ್ಪಾದಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ನನಗೆ ಸದಾ ಕುತೂಹಲ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral: ಕ್ಯಾಬ್ ಡ್ರೈವರ್ ಆದ ಮೇಲೆ ಹೆಚ್ಚು ಗಳಿಸುತ್ತಿದ್ದೇನೆ ಎಂದ ಎಂಜಿನಿಯರ್
ಈತನಕ ಏಲಕ್ಕಿಯನ್ನು ಹೇಗೆ ಬೆಳೆಯುತ್ತಾರೆ ಎನ್ನುವುದೇ ಗೊತ್ತಿರಲಿಲ್ಲ, ಈಗ ಗಿಡದಿಂದ ಕಾರ್ಖಾನೆಯವರೆಗೆ ಇದರ ಪ್ರಯಾಣವನ್ನು ತೋರಿಸಿದ್ದೀರಿ, ಧನ್ಯವಾದ ನಿಮಗೆ! ಎಂದಿದ್ದಾರೆ ಮತ್ತೊಬ್ಬರು. ಈ ಕೆಲಸವನ್ನು ಅವರು ಎಷ್ಟು ಖುಷಿಯಿಂದ ಶ್ರದ್ಧೆಯಿಂದ ಮಾಡುತ್ತಿದ್ದಾರೆ ನೋಡಿ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral: ‘ಭಯ ಒಳ್ಳೆಯದು’ ಸುನೀಲ್ ಶೆಟ್ಟಿ ಲಿಂಕ್ಡ್ಇನ್ ಪೋಸ್ಟ್ ವೈರಲ್
ಇದು ನನ್ನಿಷ್ಟದ ಮಸಾಲೆ ಪದಾರ್ಥ, ಆದರೆ ಇದು ಹೇಗೆ ತಯಾರಾಗುತ್ತದೆ ಎಂದೇ ಗೊತ್ತಿರಲಿಲ್ಲ ಎಂದಿದ್ದಾರೆ ಅನೇಕರು. ಹೀಗೆಯೇ ಲವಂಗ, ದಾಲ್ಚಿನ್ನಿ, ಮರಾಠಿ ಮೊಗ್ಗು ಮುಂತಾದ ಮಸಾಲೆ ಪದಾರ್ಥಗಳ ವಿಡಿಯೋ ಕೂಡ ಅಪ್ಲೋಡ್ ಮಾಡಿ ಎನ್ನುತ್ತಿದ್ದಾರೆ ಕೆಲವರು. ಏಲಕ್ಕಿ ಇಲ್ಲದೆ ನನ್ನ ಊಟವೂ ಇಲ್ಲ ಚಹಾ ಕೂಡ ಇಲ್ಲ, ನನ್ನ ಬ್ಯಾಗಿನ ಪುಟ್ಟ ಡಬ್ಬಿಯಲ್ಲಿ ಏಲಕ್ಕಿ ಇಟ್ಟುಕೊಂಡೇ ಓಡಾಡುತ್ತೇನೆ. ಆದರೆ ಇದರ ಹಿಂದೆ ಇಷ್ಟೊಂದು ಶ್ರಮ ಇದೆ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:39 pm, Wed, 9 August 23