Viral Video : ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲೊಂದಾದ Quora ನಲ್ಲಿ ಇತ್ತೀಚೆಗೆ ಹೊಸ ಚರ್ಚೆಯೊಂದು ಹುಟ್ಟಿಕೊಂಡಿದೆ. ಕಾರ್ಪೋರೇಟ್ ಕಂಪೆನಿಗಳಲ್ಲಿ ಒಳ್ಳೆಯ ಸಂಬಳವಿದ್ದರೂ ಯಾಕೆ ಜನ ಸ್ವಂತ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂಬುದು ಅಲ್ಲಿ ನಡೆಯುತ್ತಿರುವ ಸದ್ಯದ ಚರ್ಚೆ. ಅನೇಕರು ಕಂಪೆನಿಗಳಿಗಿಂತ ಸ್ವಂತ ಉದ್ಯೋಗದಲ್ಲಿಯೇ ಹೆಚ್ಚು ಗಳಿಸಬಹುದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅದನ್ನು ಒಪ್ಪಿಲ್ಲ. ಅಂತೂ ಕುದುರೆಯಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓಡುತ್ತಿದ್ದ ಜನರಿಗೆ ಕೊರೊನಾದಿಂದ ಉಂಟಾದ ಈ ಸ್ಥಿತ್ಯಂತರದಿಂದಾಗಿ ತಮ್ಮ ಜೀವನಗತಿಯನ್ನು ತಾವು ಅವಲೋಕನ ಮಾಡಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.
ಅನೇಕರು ಕಾರ್ಪೋರೇಟ್ ಉದ್ಯೋಗವನ್ನು ಬಿಟ್ಟು ಸಣ್ಣ ಸಣ್ಣ ಉದ್ಯಮಗಳಲ್ಲಿ ಅದರಲ್ಲಿಯೂ ಫುಡ್ ಸ್ಟಾಲ್, ಫುಡ್ ಕಾರ್ಟ್ಗಳನ್ನು ಶುರು ಮಾಡಿದ್ಧಾರೆ ಎನ್ನುವುದು ಗಮನಾರ್ಹ ಸಂಗತಿ. ಒಬ್ಬ ಕಾರ್ಪೋರೇಟ್ ಉದ್ಯೋಗಿ ತನ್ನ ಉದ್ಯೋಗವನ್ನು ಬಿಟ್ಟು, ಒಳ್ಳೆಯ ಸಂಪಾದನೆಗಾಗಿ ಚೋಲೆ ಬಟೂರೆ ಅಂಗಡಿಯನ್ನು ಶುರುಮಾಡಬೇಕಾದ ಸಂದಿಗ್ಥತೆಯ ಬಗ್ಗೆ ಅನಾಮಧೇಯರೊಬ್ಬರು ಹಂಚಿಕೊಂಡಿದ್ದಾರೆ.
‘ಎಂಬಿಎ ಪದವೀಧರರರು ತಮ್ಮ ಕಾರ್ಪೋರೇಟ್ ಉದ್ಯೋಗವನ್ನು ಬಿಟ್ಟು ಚಾಯ್ವಾಲಾ ಅಂಗಡಿಯನ್ನು ಶುರು ಮಾಡಿದರು. ಸಾಕಷ್ಟು ಎಂಜಿನಿಯರಿಂಗ್ ಪದವೀಧರರು ತಮಗೆ ಇಷ್ಟವಾದ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. ಈ ಎಲ್ಲವನ್ನು ಗಮನಿಸಿದ ನಾನು ನನ್ನ ಕಾರ್ಪೋರೇಟ್ ಉದ್ಯೋಗವನ್ನು ಬಿಟ್ಟು ಚೋಲೆ ಬಟೂರೆ ಅಂಗಡಿ ಶುರು ಮಾಡಿದೆ. ಕಾರ್ಪೋರೇಟ್ ಕಂಪೆನಿಯಲ್ಲಿ ನನ್ನ ಸಂಬಳ ವರ್ಷಕ್ಕೆ ರೂ. 8 ಲಕ್ಷ ಇತ್ತು. ಆದರೆ ಆ ಸಂಬಳಕ್ಕೆ ಹೋಲಿಸಿದರೆ ಈಗ ಆರಂಭಿಸಿರುವ ಈ ಸ್ವಂತ ಉದ್ಯಮದಲ್ಲಿಯೇ ಹೆಚ್ಚು ಹಣವಿದೆ’ ಎಂದಿದ್ದಾರೆ.
ಪಂಕಿತ್ ನಾರಂಬ ಕಂಟೆಂಟ್ ಕ್ರಿಯೇಟರ್, ಕಾರ್ಪೊರೇಟ್ ಉದ್ಯೋಗಿಯೊಬ್ಬರು ಶುರು ಮಾಡಿರುವ ಚಾಯ್ವಾಲಾ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು 24.7 ಮಿಲಿಯನ್ ಜನರು ನೋಡಿದ್ದಾರೆ. 2 ಮಿಲಿಯನ್ಗಿಂತಲೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ.
ಇದೆಲ್ಲ ನಿರಾಧಾರವಾದ ಚರ್ಚೆ ಎಂಧು ಅನೇಕರು ತಮಾಷೆ ಮಾಡಿದ್ದಾರೆ ಈ ಚರ್ಚೆಯಲ್ಲಿ. ಆದರೆ ಇದೆಲ್ಲವನ್ನೂ ಹೊರತುಪಡಿಸಿದರೆ ವಾಸ್ತವದಲ್ಲಿ ಸತ್ಯವಡಗಿದೆ ಎಂದು ಅನೇಕರು ಹೇಳಿದ್ಧಾರೆ. ನಿಜಕ್ಕೂ ಸಣ್ಣ ವ್ಯಾಪಾರಿಗಳು ಕಾರ್ಪೋರೇಟ್ ಉದ್ಯೋಗದಲ್ಲಿ ಇರುವವರಿಗಿಂತ ಹೆಚ್ಚು ಗಳಿಸುತ್ತಾರೆ ಎಂದಿದ್ದಾರೆ ಉಳಿದವರು. ಇದು ಸರಿಯಾದ ಹೋಲಿಕೆಯಲ್ಲ ಎಂದು ಇನ್ನೂ ಕೆಲವರು ಹೇಳಿದ್ದಾರೆ.
ಈ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ