Viral Video: ಮರಿ ಆನೆಗಳ ಫೈಟ್​​​ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ? ಇಲ್ಲಿದೆ ವೀಡಿಯೊ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 26, 2023 | 6:43 PM

ಪ್ರಾಣಿಗಳ ತುಂಟಾಟ ನೋಡುವುದೇ ಚೆಂದ. ಅದರಲ್ಲಿಯೂ ಅವುಗಳು ಮುದ್ದು ಮುದ್ದಾಗಿ ಆಟ ಆಡುವುದನ್ನು ನೋಡುವುದು ಮತ್ತು ಚೆಂದ. ಅಂತಹ ಒಂದು ಸುಂದರ ವಿಡಿಯೋ ವೈರೆಲ್ ಆಗಿದ್ದು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಖುಷಿ ಕೊಟ್ಟಿದೆ.

Viral Video: ಮರಿ ಆನೆಗಳ ಫೈಟ್​​​ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ? ಇಲ್ಲಿದೆ ವೀಡಿಯೊ
ವೈರಲ್ ವೀಡಿಯೊ
Follow us on

ಪ್ರಾಣಿಗಳು ಮುದ್ದು ಮುದ್ದಾಗಿ ಆಟ ಆಡುತ್ತಿರುವುದನ್ನು ನೋಡುವುದೇ ಚೆಂದ. ಇಂತಹ ವನ್ಯಜೀವಿಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ನಿಯಮಿತವಾಗಿ ಹಂಚಿಕೊಳ್ಳುವ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಪರ್ವೀನ್ ಕಸ್ವಾನ್, ಎರಡು ಮರಿ ಆನೆಗಳು ಪರಸ್ಪರ ಜಗಳವಾಡುತ್ತಿರುವ ಹೃದಯಸ್ಪರ್ಶಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಒಂದು ಕಿರಿಯ ಆನೆ ಮತ್ತೊಂದು ಆನೆಯ ಜೊತೆ ಒಬ್ಬರನೊಬ್ಬರು ಮೀರಿಸುವಂತೆ ಪ್ರೀತಿಯಿಂದ ಕಾದಾಡುತ್ತಿದ್ದು ಬಳಿಕ ಈ ಕಾದಾಟ ಜೋರಾಗುತ್ತಿದ್ದಂತೆ, ಹಿಂಡಿನಿಂದ ಬೇರೆ ಆನೆಗಳು ಮಧ್ಯಪ್ರವೇಶಿಸಿ ಮರಿ ಆನೆಯನ್ನು ರಕ್ಷಿಸುತ್ತವೆ.

ಈ ಮುದ್ದಾದ ವೀಡಿಯೊವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಶೀರ್ಷಿಕೆ ಕೂಡ ನೀಡಿದ್ದಾರೆ. “ಸೋದರ ಸಂಬಂಧಿಗಳು ಜಗಳವಾಡುವಾಗ ಹಿರಿಯರು ಮಧ್ಯಪ್ರವೇಶಿಸಬೇಕು” ಎಂದು ಬರೆದಿಕೊಂಡಿದ್ದಾರೆ. ಇಲ್ಲಿಯವರೆಗೆ, ಈ ವೀಡಿಯೊ ಟ್ವಿಟರ್​​ನಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು. ಸೋಷಿಯಲ್ ಮೀಡಿಯಾ ಬಳಕೆದಾರರು ಈ ಮುದ್ದಾದ ವೀಡಿಯೋ ನೋಡಿ ಖುಷಿ ಪಡುತ್ತಿದ್ದಾರೆ.

Published On - 6:39 pm, Wed, 26 April 23