Trending : ಅಂತೂ ಈ ಆನೆಮರಿ ಬಚಾವ್!

Baby Elephant Rescue : ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಉಂಟಾದ ಪ್ರವಾಹದೊಳಗೆ ಕೊಚ್ಚಿಹೋಗುತ್ತಿದ್ದ ಆನೆಮರಿಯನ್ನು ಅರಣ್ಯ ರಕ್ಷಣಾ ಸಿಬ್ಬಂದಿ ರಕ್ಷಿಸಿದೆ.

Trending : ಅಂತೂ ಈ ಆನೆಮರಿ ಬಚಾವ್!
ಆನೆಮರಿಯನ್ನು ರಕ್ಷಿಸಿದಾಗ
Edited By:

Updated on: Aug 30, 2022 | 10:46 AM

Trending : ಎಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಪಾರ ಕಷ್ಟನಷ್ಟಗಳು ಸಂಭವಿಸುತ್ತಿವೆ. ಅದರಲ್ಲೂ ಪ್ರಾಣಿ ಪಕ್ಷಿಗಳಂತೂ ತೇಲಿ ಹೋಗುತ್ತಿವೆ. ನಾಪತ್ತೆಯಾಗುತ್ತಿವೆ. ಸಾವನ್ನೂ ಅಪ್ಪುತ್ತಿವೆ. ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ಆನೆಮರಿಯೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ಕರೆಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ರಕ್ಷಣಾ ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿ ಆನೆಮರಿಯನ್ನು ರಕ್ಷಿಸಿದ್ದಾರೆ.

ಅದಕ್ಕೆ ನೋವಾಗದಂತೆ ಹಗ್ಗದಿಂದ ಕಟ್ಟಿ ನಂತರ ನಿಧಾನವಾಗಿ ದಡಕ್ಕೆ ಕರೆತಂದಿದ್ದಾರೆ. ಒಣಪ್ರದೇಶದಲ್ಲಿ ಅದನ್ನು ಸ್ವಲ್ಪ ಹೊತ್ತು ಇರಲು ಬಿಟ್ಟು, ಗಾಬರಿಗೆ ಒಳಗಾಗದಂತೆ ಸುರಕ್ಷಿತ ಜಾಗಕ್ಕೆ ಕರೆತಂದಿದ್ದಾರೆ. ಈಗ ಈ ಆನೆಮರಿಯನ್ನು ತಾಯಿಯ ಬಳಿ ಸೇರಿಸುವುದು ರಕ್ಷಣಾ ಸಿಬ್ಬಂದಿಯ ಆದ್ಯತೆಯಾಗಿದೆ. ಹೀಗಾಗಿ ಮರಿಯ ತಾಯಿಯ ಹುಡುಕಾಟ ಆರಂಭವಾಗಿದೆ.

ಇದನ್ನೂ ಓದಿ
Viral Video: ನೀ ನನಗಾದರೆ ನಾ ನಿನಗೆ ಎನ್ನುತ್ತಿವೆ ಈ ಆಮೆಗಳು
Viral Video : ಇವನ ಹೇರ್​ಸ್ಟೈಲ್​ಗೆ ಹೌಹಾರಿರುವ ಈ ಕೋತಿ
Viral Video: ಮೊಸಳೆಗಳು ತುಂಬಿರುವ ನದಿಯಲ್ಲಿ ಮುಳುಗುತ್ತಿದ್ದ ಬಾಲಕ, ಮುಂದೇನಾಯಿತು ನೋಡಿ ವಿಡಿಯೋ
Trending : ಕ್ಷಮೆ ಕೇಳುವತನಕ ಈ ‘ರೋಬೋಟ್​ ರಫಿ’ ಮಾತನಾಡಲಾರ!

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:46 am, Tue, 30 August 22