Viral Video: ನವಜೋಡಿಗೆ ಸ್ನೇಹಿತರು ನೀಡಿದ ಉಡುಗೊರೆ ಹೇಗಿತ್ತು ಗೊತ್ತಾ? ವೈರಲ್ ಆದ ವಿಡಿಯೋ ನೋಡಿ

ನವವಿವಾಹಿತ ದಂಪತಿಗೆ ಅವರ ಮದುವೆಯ ಆರತಕ್ಷತೆಯಲ್ಲಿ ಸ್ಮರಣೀಯ ಉಡುಗೊರೆ ಕೊಡಲು ವರನ ಸ್ನೇಹಿತರು ನಿರ್ಧರಿಸಿದ್ದು, ಸ್ನೇಹಿತರು ನೀಡಿದ ಉಡುಗೊರೆ ಕಂಡು ನವಜೋಡಿ ಅಚ್ಚರಿಗೊಂಡಿದ್ದಾರೆ.

Viral Video: ನವಜೋಡಿಗೆ ಸ್ನೇಹಿತರು ನೀಡಿದ ಉಡುಗೊರೆ ಹೇಗಿತ್ತು ಗೊತ್ತಾ? ವೈರಲ್ ಆದ ವಿಡಿಯೋ ನೋಡಿ
ಸ್ನೇಹಿತರು ನೀಡಿದ ಉಡುಗೊರೆ
Updated By: preethi shettigar

Updated on: Dec 08, 2021 | 10:21 AM

ಈಗ ಮದುವೆ ಅತಿ ಹೆಚ್ಚಾಗಿ ನಡೆಯುವ ಸಂದರ್ಭ. ಹೀಗಾಗಿಯೇ ಮದುವೆಯ ಸೀಜನ್ ಎಂದು ಕರೆಯಲಾಗುತ್ತದೆ. ಮದುವೆ ಸಂಭ್ರಮ ಎಂದರೆ ಸುಮ್ಮನೆನಾ ಪ್ರತಿಯೊಂದು ತಯಾರಿ ಕೂಡ ಮುಖ್ಯ. ಅದರಲ್ಲೂ ಸ್ನೇಹಿತರು ತಮ್ಮದೇ ರೀತಿಯಲ್ಲಿ ವಿವಾಹಮಹೋತ್ಸವಕ್ಕೆ ಸಿದ್ಧವಾಗುತ್ತಾರೆ. ವಧು- ವರರನ್ನು ಮೆಚ್ಚಿಸಲು ಅಥವಾ ಅವರ ಕಾಲೆಳೆಯಲು ಸ್ನೇಹಿತರ ಗುಂಪು ಸದಾ ಮುಂದೆ ಇರುತ್ತದೆ. ಇಂತಹದ್ದೇ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ನವವಿವಾಹಿತ ದಂಪತಿಗೆ ಅವರ ಮದುವೆಯ ಆರತಕ್ಷತೆಯಲ್ಲಿ ಸ್ಮರಣೀಯ ಉಡುಗೊರೆ ಕೊಡಲು ವರನ ಸ್ನೇಹಿತರು ನಿರ್ಧರಿಸಿದ್ದು, ಸ್ನೇಹಿತರು ನೀಡಿದ ಉಡುಗೊರೆ ಕಂಡು ನವಜೋಡಿ ಅಚ್ಚರಿಗೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ವರನ ಸ್ನೇಹಿತರು ಹೂವಿನಿಂದ ಅಲಂಕರಿಸಲ್ಪಟ್ಟ ಬೃಹತ್ ಗಾತ್ರದ ಬಾಕ್ಸ್ ವೇದಿಕೆಗೆ ಒಯ್ಯುತ್ತಿರುವುದನ್ನು ಕಾಣಬಹುದು. ಸ್ನೇಹಿತರು ವೇದಿಕೆಯ ಮೇಲೆ ಎಲ್​ಜಿ ವಾಷಿಂಗ್ ಮೆಷಿನ್ ಬಾಕ್ಸ್ ತಂದಿಡಲು ಬಹಳ ಕಷ್ಟಪಡುತ್ತಿರುವಂತೆ ಕಾಣುತ್ತದೆ. ನಂತರ ಅವರು ನವದಂಪತಿಗೆ ಈ ಉಡುಗೊರೆ ನೀಡಿದ್ದಾರೆ. ಆದರೆ ಈ ಬಾಕ್ಸ್ ಖಾಲಿ ಎಂಬುವುದು ಆಗ ನವಜೋಡಿಗೆ ಗೊತ್ತಾಗುತ್ತದೆ. ಉಡುಗೊರೆಯ ನಿರೀಕ್ಷೆಯಲ್ಲಿದ್ದ ನವಜೋಡಿಯ ಪ್ರತಿಕ್ರಿಯೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂತಿಮ ದೃಶ್ಯವನ್ನು ಕಳೆದುಕೊಳ್ಳಬೇಡಿ ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಾಗಿದೆ. ಈ ಪೋಸ್ಟ್ 81,000 ವ್ಯೂವ್ಸ್ ಪಡೆದಿದ್ದು, 5,380 ಲೈಕ್‌ಗಳನ್ನು ಪಡೆದಿದೆ. ಈ ವಿಡಿಯೋದಲ್ಲಿ ರಾಜೀವ್ ರಾಜಾ ಅವರ ಯಾರೋ ನೆ ಮೇರೆ ವಾಸ್ತೆ ಹಾಡು ಕೂಡ ಕೇಳಿ ಬಂದಿದೆ.

ವೇದಿಕೆಯ ಮೇಲೆ ನವದಂಪತಿ ಬಾಕ್ಸ್ ಪಡೆಯುತ್ತಿದ್ದಂತೆಯೇ ಇದೊಂದು ಕುಚೇಷ್ಟೆ ಎಂಬುವುದು ಗೊತ್ತಾಗಿದೆ. ಬಾಕ್ಸ್ ತುಂಬಾ ಹಗುರವಾಗಿರುವುದರಿಂದ ಇದು ಖಾಲಿಯಾಗಿದೆ ಎಂದು ವರನಿಗೆ ಅರಿವಾಗುತ್ತದೆ. ಸ್ನೇಹಿತರ ಈ ವರ್ತನೆಗೆ ವಧು- ವರರು ನಕ್ಕು ಸುಮ್ಮನಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನಗುವ ಎಮೋಜಿಯ ಮೂಲಕ ಕಮೆಂಟ್ ಮಾಡಿ ನೆಟ್ಟಿಗರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
Viral Video: ಮದುವೆಗೆ ತಂದ ಕೇಕ್​ ಕಣ್ಣ ಮುಂದೆಯೇ ನೆಲದ ಪಾಲಾಯ್ತು; ವಧು-ವರರ ರಿಯಾಕ್ಷನ್​ ಹೇಗಿತ್ತು ಗೊತ್ತಾ?

Virat Kohli: ಮೈದಾನದಲ್ಲೇ ಅಂಪೈರ್​ನ ಮೈಚಳಿ ಬಿಡಿಸಿದ ಕೊಹ್ಲಿ: ನೀವು ಫೀಲ್ಡ್ ಮಾಡಿ, ನಾನು ಅಂಪೈರ್ ಮಾಡ್ತೇನೆ ಎಂದ ವಿರಾಟ್

 

Published On - 10:19 am, Wed, 8 December 21