ಇಡ್ಲಿ, ದೋಸೆಯೊಂದಿಗೆ ಸವಿಯಲು ತೆಂಗಿನಕಾಯಿ ಚಟ್ನಿ ಬೆಸ್ಟ್ ಆದ್ರೆ ಕರಾವಳಿಯ ಶೈಲಿಯ ಒಣ ಮೀನು ಚಟ್ನಿ ಗಂಜಿಯೊಟ್ಟಿಗೆ ಸವಿಯಲು ಸಖತ್ ರುಚಿಯಾಗಿರುತ್ತದೆ. ಸಾಮಾನ್ಯವಾಗಿ ನೀವು ಕೂಡಾ ಈ ಎರಡೂ ರೆಸಿಪಿಗಳನ್ನು ಟ್ರೈ ಮಾಡಿರ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಸ್ವಲ್ಪ ಡಿಫರೆಂಟ್ ಆಗಿರುವ ಚಟ್ನಿ ರೆಸಿಪಿಯೊಂದನ್ನು ತಯಾರಿಸಿದ್ದು, ಈ ಒಣ ಕಪ್ಪೆಯ ರೆಸಿಪಿಯನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಈ ಒಣ ಕಪ್ಪೆ ಚಟ್ನಿ ಮಣಿಪುರದ ಸಾಂಪ್ರದಾಯಿಕ ಖಾದ್ಯವಂತೆ. ಒಣ ಕಪ್ಪೆ, ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಪುದೀನಾವನ್ನು ಸೇರಿಸಿ ಕುಟ್ಟಿ ಪುಡಿ ಮಾಡಿ ಈ ಸಾಂಪ್ರದಾಯಿಕ ಚಟ್ನಿಯನ್ನು ತಯಾರಿಸಲಾಗುತ್ತದೆ. ಒಣ ಮೀನಿನ ಚಟ್ನಿಯಂತೆ, ಈ ಕಪ್ಪೆ ಚಟ್ನಿಯನ್ನೂ ಕೂಡಾ ಅನ್ನದೊಂದಿಗೆ ಸವಿಯುತ್ತಾರೆ ಇಲ್ಲಿನ ಜನ. ಈ ರೆಸಿಪಿ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು telien_thefoodie ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಣ ಕಪ್ಪೆ ಚಟ್ನಿಯನ್ನು ಹೇಗೆ ತಯಾರಿಸುತ್ತಿದ್ದಾರೆ ಎಂಬ ದೃಶ್ಯವನ್ನು ಕಾಣಬಹುದು. ಮೊದಲಿಗೆ ಒಣ ಕಪ್ಪೆಯನ್ನು ಸ್ಪಲ್ಪ ಬಿಸಿ ಮಾಡಿ ನಂತರ ಅದನ್ನು ಕುಟ್ಟಣಿಗೆಯಲ್ಲಿ ಹಾಕಿ ಬಳಿಕ ಅದರ ಜೊತೆ ಕೆಂಪು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಹಾಕಿ ಎಲ್ಲವನ್ನೂ ಎಲ್ಲವನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಈ ಚಟ್ನಿಯನ್ನು ತಯಾರಿಸಿದ್ದಾರೆ.
ಇದನ್ನೂ ಓದಿ: ಈ ಯುವತಿಗೆ ಕಿಸ್ ಕೊಡಬೇಕಾದ್ರೆ ಈ ಮೂರು ರೂಲ್ಸ್ ಬ್ರೇಕ್ ಮಾಡೋ ಆಗಿಲ್ಲ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯಾರು ಕೂಡಾ ಇತರರು ತಿನ್ನುವ ಆಹಾರವನ್ನು ದ್ವೇಷಿಸಬೇಕಾಗಿಲ್ಲ, ನೀವು ನಿಮ್ಮ ಇಷ್ಟದ ಆಹಾರವನ್ನು ತಿನ್ನುವಂತೆ ಅವರಿಗೂ ಅವರಿಷ್ಟದ ಆಹಾರವನ್ನು ತಿನ್ನುವ ಹಕ್ಕಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕಪ್ಪೆಯನ್ನು ತಿನ್ನುವುದು ಸುರಕ್ಷಿತವೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ