ಮಸಾಲೆ ದೋಸೆ ಸೀರೆ, ಇಡ್ಲಿ ಶರ್ಟ್‌, ಫ್ಯಾಷನ್ ಪ್ರಿಯರಿಗೆ ಹೊಸ ಲುಕ್​​ ಪರಿಚಯಿಸಿದ ಎಐ

ದೇಸಿ ಆಹಾರಗಳನ್ನು ಸವಿಯುವುದೆಂದರೆ ಎಲ್ಲರಿಗೂ ಇಷ್ಟ. ಬಾಯಿ ಚಪ್ಪರಿಸಿಕೊಂಡು ತಿನ್ನುವ ಆಹಾರಗಳಿಗೆ ಕೃತಕ ಬುದ್ಧಿ ಮತ್ತೆ ಸ್ಪರ್ಶ ನೀಡಿ ಫ್ಯಾಷನ್ ಆಗಿ ಬದಲಾಯಿಸಿದರೆ ಹೇಗಿರುತ್ತೆ ಎಂದು ಯೋಚಿಸಿದ್ದೀರಾ. ಐಸ್ ಕ್ರೀಮ್ ನಿಂದ ಹ್ಯಾಂಡ್ ಬ್ಯಾಗ್, ಮಸಾಲೆ ದೋಸೆಯಿಂದ ಸೀರೆ ಸೇರಿದಂತೆ ಇನ್ನಿತ್ತರ ತಿಂಡಿ ತಿನಿಸುಗಳಿಗೆ ಹೊಸ ರೂಪ ನೀಡಲಾಗಿದ್ದು ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಇದನ್ನು ಮೆಚ್ಚಿಕೊಂಡಿದ್ದಾರೆ.

ಮಸಾಲೆ ದೋಸೆ ಸೀರೆ, ಇಡ್ಲಿ ಶರ್ಟ್‌, ಫ್ಯಾಷನ್ ಪ್ರಿಯರಿಗೆ  ಹೊಸ ಲುಕ್​​ ಪರಿಚಯಿಸಿದ ಎಐ
ವೈರಲ್ ವಿಡಿಯೋ
Image Credit source: Instagram

Updated on: May 06, 2025 | 2:49 PM

ನಾವಿಂದು ತಂತ್ರಜ್ಞಾನ (technology) ದೊಂದಿಗೆ ಬೆಸೆದುಕೊಂಡಿದ್ದೇವೆ. ಹೀಗಾಗಿ ದಿನ ಕಳೆಯುತ್ತಿದ್ದಂತೆ ತಂತ್ರಜ್ಞಾನದಲ್ಲಿ ಹೊಸ ಹೊಸ ಮಾರ್ಪಡುಗಳಾಗಿದೆ. ಅದರಲ್ಲಿಯೂ ಕೃತಕ ಬುದ್ಧಿಮತ್ತೆ (artificial intelligence) ಉಪಯೋಗಿಸಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಇಂದು ಕೃತಕ ಬುದ್ಧಿ ಮತ್ತೆಯೂ ಶರವೇಗದಲ್ಲಿ ಚಲಿಸುತ್ತಿದ್ದು ಇದೀಗ ವೈರಲ್ ಆಗಿರುವ ವಿಡಿಯೋವು ಇದಕ್ಕೆ ಸಾಕ್ಷಿ ಎನ್ನುವಂತಿದೆ. ದೇಸಿ ಆಹಾರ (desi food) ಗಳಾದ ಮಸಾಲೆ ದೋಸೆ, ಇಡ್ಲಿ, ಜಿಲೇಬಿ ಸೇರಿದಂತೆ ತಿಂಡಿಗಳಿಗೆ ಎಐ ಟಚ್ ನೀಡಲಾಗಿದ್ದು ಫ್ಯಾಷನ್ ಆಗಿ ಬದಲಾಯಿಸಲಾಗಿದೆ.

hoohoocreation80 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವೀಡಿಯೋಗೆ “ನಾವು ಇಷ್ಟಪಡುವ ಆಹಾರವು ಕೇವಲ ತಿನ್ನಲು ಮಾತ್ರವಲ್ಲ, ಬದಲಾಗಿ ಧರಿಸಲು, ಹೊತ್ತುಕೊಂಡು ಹೋಗಲು ಹಾಗೂ ಅದರೊಂದಿಗೆ ಬದುಕಲು ಇದ್ದರೆ ಏನಾಗುತ್ತಿತ್ತು?” ಎಂಬ ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ
ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು
ಐಸ್ ಕ್ರೀಂ ಮೇಲೆ ಗರಿಗರಿಯಾದ ಆಲೂಗಡ್ಡೆ ಫ್ರೈಸ್
ಡ್ರೀಮ್ 11 ನಲ್ಲಿ 39 ರೂ ಹೂಡಿಕೆ,ಯುವಕನಿಗೆ ಬಂತು ನೋಡಿ ನಾಲ್ಕು ಕೋಟಿ
ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ

ಏಪ್ರಿಲ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಸಾಲೆ ದೋಸೆಯನ್ನು ಸೀರೆಯಾಗಿ ಬದಲಾಯಿಸಲಾಗಿದೆ. ಇಲ್ಲಿ ಈ ವಿಭಿನ್ನ ಸೀರೆ ಉಟ್ಟ ಮಹಿಳೆಯಲ್ಲಿ ನೋಡಬಹುದು. ಆ ಬಳಿಕ ಪಿಂಕ್‌, ಬಿಳಿ ಹಾಗೂ ಪಿಸ್ತಾ ಬಣ್ಣದ ಐಸ್ ಕ್ರೀಮ್ ಬ್ಯಾಗ್‌, ವ್ಯಕ್ತಿಯೊಬ್ಬ ಇಡ್ಲಿಯಿಂದ ತಯಾರಾದ ಶರ್ಟ್‌ ಧರಿಸಿದ್ದಾನೆ. ಅಷ್ಟೇ ಅಲ್ಲದೇ, ಟ್ರಾಲಿ ಬ್ಯಾಗ್, ಪಾನಿ ಪುರಿ ಮತ್ತು ಗುಲಾಬ್ ಜಾಮೂನ್ ವಿನ್ಯಾಸದ ಕೈಗಡಿಯಾರಗಳು, ಪಾಪ್‌ಕಾರ್ನ್ ದುಪ್ಪಟ್ಟಾ, ಆಲೂಗಡ್ಡೆ ಚಿಪ್ಸ್ ಕಿವಿಯೋಲೆಗಳು ಮತ್ತು ಜಲೇಬಿ ಹೇರ್ ಸ್ಟಿಕ್ ಸೇರಿದಂತೆ ದೇಸಿ ತಿನಿಸಿಗೆ ಎಐ ಸ್ಪರ್ಶ ನೀಡಲಾಗಿರುವುದನ್ನು ನೋಡಬಹುದು.

ಇದನ್ನೂ ಓದಿ : ಬೆಂಗಳೂರು ಸೂಪರ್​, ತಡರಾತ್ರಿಯವರೆಗೆ ಫುಡ್ ಡೆಲಿವರಿ ಆಗುತ್ತೆ, ಈ ಸೇವೆಯನ್ನು ಮೆಚ್ಚಿದ ಅಮೇರಿಕಾದ ಮಹಿಳೆ

ವೈರಲ್ ವಿಡಿಯೋ ಇಲ್ಲಿದೆ :

ಈ ವಿಡಿಯೋವೊಂದು 1.6 ಮಿಲಿಯನ್ ವೀವ್ಸ್ ಕಂಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ದೇಸಿ ತಿನಿಸುಗಳಿಗೆ ಎಐ ಟಚ್ ನೀಡಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಪಾನಿಪುರಿ ವಾಚ್ ನಿಜಕ್ಕೂ ಅತ್ಯದ್ಭುತವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಅದ್ಭುತ ತಂತ್ರಜ್ಞಾನಕ್ಕೆ ನನ್ನದೊಂದು ಮೆಚ್ಚುಗೆ ಎಂದು ಕಾಮೆಂಟ್ ಮಾಡಿದ್ದಾರೆ. ದೇಸಿ ತಿನಿಸುಗಳಿಗೆ ಫ್ಯಾಷನ್ ಟಚ್ ನೀಡಿದ ಎಐಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಕೆಲವರು ಹೃದಯದ ಸಿಂಬಲ್ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ