Viral Video: ನಾನು ಮತ್ತು ನನ್ ಫ್ರೆಂಡ್ಸ್ ಇಂದು ರಾತ್ರಿ ಬೆಂಳ್ಳೂರ್ ಟ್ರಿಪ್ ಹೋಗ್ತೀವಿ, ಇದಕ್ಕೆ ಅಮ್ಮನ ರಿಪ್ಲೈ ಮಾತ್ರ ಬೆಂಕಿ  

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2024 | 4:53 PM

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫನ್ನಿ ವಿಡಿಯೋವೊಂದು ವೈರಲ್ ಆಗಿದ್ದು, ಮೊನ್ನೆ ಯುಗಾದಿ ಹಬ್ಬದ ದಿನದಂದು ಯುವಕನೊಬ್ಬ ತನ್ನ ತಾಯಿಗೆ ಕರೆ ಮಾಡಿ, ಯುಗಾದಿ ಹಬ್ಬದ ಪ್ರಯುಕ್ತ ನಾನು ನನ್ ಫ್ರೆಂಡ್ಸ್ ಜೊತೆ ಬೈಕ್ ಅಲ್ಲಿ ಬೆಂಗ್ಳೂರಿಗೆ ಟ್ರಪ್ ಹೋಗ್ತಿದ್ದೀನಿ ಎಂದು ಹೇಳಿದ್ದಾನೆ.  ಮಗನ ಮಾತಿಗೆ  ತಾಯಿ ಸರಿಯಾಗಿ  ಕೌಂಟರ್ ಕೊಟ್ಟಿದ್ದು, ಅಮ್ಮ ಮಗನ ಮಾತುಕತೆಯನ್ನು ಕೇಳಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. 

Viral Video: ನಾನು ಮತ್ತು ನನ್ ಫ್ರೆಂಡ್ಸ್ ಇಂದು ರಾತ್ರಿ ಬೆಂಳ್ಳೂರ್ ಟ್ರಿಪ್ ಹೋಗ್ತೀವಿ, ಇದಕ್ಕೆ ಅಮ್ಮನ ರಿಪ್ಲೈ ಮಾತ್ರ ಬೆಂಕಿ  
Follow us on

ಗಂಡು ಮಕ್ಕಳಿಗೆ ಅಮ್ಮ ಅಂದ್ರೆ ಪ್ರೀತಿ ತುಸು  ಹೆಚ್ಚು. ಹೌದು ಪುತ್ರರು ಯಾವಾಗಲೂ ತಮ್ಮ ತಾಯಿಯಂದಿರಿಗೆ ಹತ್ತಿರವಾಗಿರುತ್ತಾರೆ. ತಮ್ಮ ಎಲ್ಲಾ ವಿಷಯಗಳನ್ನು ಶೇರ್ ಮಾಡುವುದರಿಂದ ಹಿಡಿದು, ಫ್ರೆಂಡ್ಸ್ ಜೊತೆ ಟ್ರಿಪ್ ಹೋಗಬೇಕೆಂದಿದ್ದರೂ ತಾಯಿಯ ಬಳಿಯೇ ಪರ್ಮಿಷನ್ ಕೇಳುತ್ತಾರೆ. ಹೀಗೆ ಟ್ರಪ್ ವಿಷಯದಲ್ಲಿ ಗಂಡು ಮಕ್ಕಳು ಅಮ್ಮಂದಿರ ಕೈಯಿಂದ ಯಾವಾಗಲೂ ಬೈಗುಳ ತಿನ್ನುತ್ತಿರುತ್ತಾರೆ.  ಇದಕ್ಕೆ ಸೂಕ್ತ ನಿದರ್ಶನದಂದಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಮೊನ್ನೆ ಯುಗಾದಿ ಹಬ್ಬದ ದಿನದಂದು ಯುವಕನೊಬ್ಬ ತನ್ನ ತಾಯಿಗೆ ಕರೆ ಮಾಡಿ, ಯುಗಾದಿ ಹಬ್ಬ ಅಲ್ವಾ ಆದ್ದರಿಂದ ನಾನು ಮತ್ತು ಫ್ರೆಂಡ್ಸ್ ಬೆಂಗ್ಳೂರಿಗೆ ಟ್ರಪ್ ಹೋಗ್ತೀವಿ ಎಂದು ಹೇಳಿದ್ದಾನೆ.  ಮಗನ ಈ ಮಾತಿಗೆ ತಾಯಿ ಸರಿಯಾಗಿ ತಿರುಗೇಟು ನೀಡಿದ್ದು,  ಈ ಕುರಿತ ಹಾಸ್ಯಮಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವೈರಲ್ ವಿಡಿಯೋವನ್ನು @talesby_pru ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಫ್ರೆಂಡ್ಸ್ ಜೊತೆ ಹೊರಗಿದ್ದ  ಯುವಕನೊಬ್ಬ ತನ್ನ ತಾಯಿಗೆ ಕರೆ ಮಾಡಿ “ಹಲೋ ಯುಗಾದಿ ಹಬ್ಬದ ಪ್ರಯುಕ್ತ ಇಂದು ರಾತ್ರಿ 08 ಗಂಟೆಗೆ ನಾನು, ನನ್ ಫ್ರೆಂಡ್ಸ್  ಬೆಂಗ್ಳೂರಿಗೆ ಟ್ರಿಪ್ ಹೋಗಲಿದ್ದೇವೆ ಎಂದು ಹೇಳುತ್ತಾನೆ, ಮಗನ ಮಾತಿಗೆ ಕೋಪಗೊಂಡ ತಾಯಿ ನಾನು ಆಮೇಲೆ ಬಂದು ಕೆರ ಹರಿಯಲಿದ್ದೇನೆ ಎಂದು ಬೈಯುವ ಆಡಿಯೋವೊಂದು ಕೇಳಬಹುದು.

ಇದನ್ನೂ ಓದಿ: ವಂದೇ ಭಾರತ್ ಲೋಕೋ-ಪೈಲಟ್​​​​​ಗೆ ಬೆಂಗಳೂರಿನಲ್ಲಿ ಅದ್ಧೂರಿ ಬೀಳ್ಕೊಡುಗೆ, ಕಣ್ಣೀರಿಟ್ಟ ಕಿಶನ್ ಲಾಲ್

ವೈರಲ್​​ ವಿಡಿಯೋ ಇಲ್ಲಿದೆ:

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡುದ್ದು,  ತಾಯಿ ಮಗನ ಈ ಫನ್ನಿ ಮಾತುಕತೆ ನೆಟ್ಟಿಗರ ಮನಗೆದ್ದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ