Video: ವಂದೇ ಭಾರತ್ ಲೋಕೋ-ಪೈಲಟ್​​​​​ಗೆ ಬೆಂಗಳೂರಿನಲ್ಲಿ ಅದ್ಧೂರಿ ಬೀಳ್ಕೊಡುಗೆ, ಕಣ್ಣೀರಿಟ್ಟ ಕಿಶನ್ ಲಾಲ್

34 ವರ್ಷಗಳ ಕಾಲ ಲೋಕೋ ಪೈಲಟ್ ಆಗಿ ಸೇವೆ ಸಲ್ಲಿಸಿದ ಕಿಶನ್ ಲಾಲ್ ಮಾರ್ಚ್​​ನಲ್ಲಿ ನಿವೃತ್ತರಾಗಿದ್ದರು. ಕಿಶನ್ ಲಾಲ್ ಅವರು ನಿರ್ವಹಿಸುತ್ತಿದ್ದ ರೈಲು ಚೆನ್ನೈನಿಂದ ಬೆಂಗಳೂರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಹೂವಿನ ಹಾರ ಮತ್ತು ಉಡುಗೊರೆಗಳನ್ನು ನೀಡಿ ಸ್ವಾಗತಿಸಿದರು. ಈ ಕ್ಷಣವನ್ನು ಕಂಡು ಕಿಶನ್ ಲಾಲ್ ಕಣ್ಣೀರು ಹಾಕಿದ್ದಾರೆ.

Video: ವಂದೇ ಭಾರತ್ ಲೋಕೋ-ಪೈಲಟ್​​​​​ಗೆ ಬೆಂಗಳೂರಿನಲ್ಲಿ ಅದ್ಧೂರಿ ಬೀಳ್ಕೊಡುಗೆ, ಕಣ್ಣೀರಿಟ್ಟ ಕಿಶನ್ ಲಾಲ್
Follow us
ಅಕ್ಷಯ್​ ಪಲ್ಲಮಜಲು​​
|

Updated on: Apr 11, 2024 | 3:58 PM

ಬೆಂಗಳೂರು, ಏ.11: ವಂದೇ ಭಾರತ್ ಲೋಕೋ-ಪೈಲಟ್​​  (vande bharat loco pilot ) ಕಿಶನ್ ಲಾಲ್ ಅವರಿಗೆ ಅದ್ಧೂರಿಯಾಗಿ ಬೆಂಗಳೂರು ನಿಲ್ದಾಣದಲ್ಲಿ ಬೀಳ್ಕೊಡುಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಲೋಕೋ-ಪೈಲಟ್ ಕಿಶನ್ ಲಾಲ್ ಕಣ್ಣೀರು ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬೆಂಗಳೂರು ಸಿಟಿ ರೈಲು ನಿಲ್ದಾಣದಲ್ಲಿ ಅವರ ನಿವೃತ್ತಿ ಕ್ಷಣವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ . ಈ ಸಮಯದಲ್ಲಿ ಅವರ ಕುಟುಂಬ ಹಾಗೂ ಸಿಬ್ಬಂದಿಗಳು ಇದ್ದರು. ಈ ಬಗ್ಗೆ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

34 ವರ್ಷಗಳ ಕಾಲ ಲೋಕೋ ಪೈಲಟ್ ಆಗಿ ಸೇವೆ ಸಲ್ಲಿಸಿದ ಕಿಶನ್ ಲಾಲ್ ಮಾರ್ಚ್​​ನಲ್ಲಿ ನಿವೃತ್ತರಾಗಿದ್ದರು. ಕಿಶನ್ ಲಾಲ್ ಅವರು ನಿರ್ವಹಿಸುತ್ತಿದ್ದ ರೈಲು ಚೆನ್ನೈನಿಂದ ಬೆಂಗಳೂರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಹೂವಿನ ಹಾರ ಮತ್ತು ಉಡುಗೊರೆಗಳನ್ನು ನೀಡಿ ಸ್ವಾಗತಿಸಿದರು. ಈ ಕ್ಷಣವನ್ನು ಕಂಡು ಕಿಶನ್ ಲಾಲ್ ಕಣ್ಣೀರು ಹಾಕಿದ್ದಾರೆ. ತಮ್ಮ ಹೆಚ್ಚಿನ ಸಮಯವನ್ನು ರೈಲಿನಲ್ಲೇ ಕಳೆದಿರುವ ಕಿಶನ್ ಲಾಲ್​​​ಗೆ ಇದು ಸ್ಮರಣಿಯ ಕ್ಷಣ ಎಂದು ಹೇಳಲಾಗಿದೆ. ಅವರು ನೃತ್ಯ, ಸಂಗೀತ, ಸಿಬ್ಬಂದಿಗಳ ಪ್ರೀತಿ ಹಾಗೂ ಸ್ವಾಗತದ ರೀತಿಯನ್ನು ಕಂಡು ಕಣ್ಣೀರು ಹಾಕಿದ್ದಾರೆ.

View this post on Instagram

A post shared by RF PAVAN (@railfan_pavan)

ಇನ್ನು ಇನ್‌ಸ್ಟಾಗ್ರಾಮ್‌ ಫೋಸ್ಟ್​​ನಲ್ಲಿ ಶೀರ್ಷಿಕೆಯೊಂದನ್ನು ಬರೆದುಕೊಳ್ಳಲಾಗಿದೆ. “ಕಿಶನ್ ಲಾಲ್ ಸರ್ ನಿವೃತ್ತಿ ಜೀವನದ ಶುಭಾಶಯಗಳು. ಭಾರತೀಯ ರೈಲ್ವೇಯಲ್ಲಿ ನಿಮ್ಮ ಅದ್ಭುತ ಸೇವೆಗೆ ಧನ್ಯವಾದಗಳು ಸರ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ, ನೀವು ಅತ್ಯುತ್ತಮ ನಿವೃತ್ತ ಜೀವನವನ್ನು ಹೊಂದಿದ್ದರ, ನೀವು ಬೆಂಗಳೂರಿನ ಅತ್ಯುತ್ತಮ ಲೋಕೋ-ಪೈಲಟ್‌ಗಳಲ್ಲಿ ಒಬ್ಬರು ಸರ್, ನಾವು ನಿಮ್ಮನ್ನು ಈ ರೈಲು ಟ್ರ್ಯಾಕ್‌ಗಳಲ್ಲಿ ಮಿಸ್​​​ ಮಾಡಿಕೊಳ್ಳುತ್ತಿದ್ದೇವೆ . ಆಲ್ ದಿ ಬೆಸ್ಟ್ ಸರ್. ಕಿಶನ್ ಸರ್ ಕೊನೆಯ ಬಾರಿಗೆ SBC-MAS-SBC ವಂದೇ ಭಾರತ್ ಎಕ್ಸ್‌ಪ್ರೆಸ್‌ನಿಂದ 20608/20607 ನಲ್ಲಿ ಕೆಲಸ ಮಾಡಿದ್ದಾರೆ”.

ಇದನ್ನೂ ಓದಿ: ಮಗು ಹೀಗೆ ಹುಟ್ಟಲು ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸ ತಿಂದಿದ್ದೆ ಕಾರಣ ಎಂದ ತಾಯಿ 

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್‌ಗೆ ಕಾಮೆಂಟ್‌ ಕೂಡ ಮಾಡಿದ್ದಾರೆ. ಕಿಶನ್ ಲಾಲ್‌ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಒಬ್ಬ ಬಳಕೆದಾರ ಒಳ್ಳೆಯ ವಿಡಿಯೋ. ನಾನು ಅವರೊಂದಿಗೆ ಚೆನ್ನೈನಿಂದ ಬೆಂಗಳೂರಿಗೆ ಪ್ರಯಾಣಿಸಿದ ನೆನಪನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್