
ಹೊಸ ಹೊಸ ಬಗೆಯ ತಿಂಡಿಗಳನ್ನು ಸವಿಯುವುದೆಂದರೆ ಆಹಾರ ಪ್ರಿಯರಿಗೆ ಒಂದು ಥರಹದ ಥ್ರಿಲ್ ಅಂದ್ರೆ ತಪ್ಪಾಗಲಾರದು. ಫುಡ್ ಸ್ಟ್ರೀಟ್ಗಳಲ್ಲಿ ಸಿಗುವ ಒಂದಲ್ಲಾ ಒಂದು ಬಗೆಯ ಭಿನ್ನವಾದ ತಿಂಡಿಗಳನ್ನು ಸವಿಯಲೆಂದೇ ವೀಕೆಂಡ್ಗಳಲ್ಲಿ ಹೊರ ಹೋಗುವ ತಿಂಡಿ ಪ್ರಿಯರಿದ್ದಾರೆ. ನೀವು ಎಂದಾದರೂ ಫೈರ್ ಮೋಮೋ (Fire Momos) ತಿಂದಿದ್ದೀರಾ? ಇದೀಗ ಫುಲ್ ವೈರಲ್ ಆಗಿದೆ ಫೈರ್ ಮೋಮೋಸ್. ಆಹಾರ ಪ್ರಿಯರು ಥ್ರಿಲ್ ಆಗಿ ನೋಡಿದ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.
ಚಿನ್ನದ ಲೇಪನದ ಮೋಮೋಸ್ಗಳ ನಂತರ ಇದೀಗ ಫೈರ್ ಮೋಮೋ ಫುಲ್ ವೈರಲ್ ಆಗಿದೆ. ಗಾಜಿಯಾಬಾದ್ನ ಫುಡ್ ಸ್ಟ್ರೀಟ್ಗಳಲ್ಲಿ ಜನರು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಿರುವ ವಿಡಿಯೊಗಳ ಜೊತೆಗೆ ವ್ಯಾಪಾರಿಯು, ಮೋಮೋ ತಯಾರಿಸುತ್ತಿರುವ ವಿಡಿಯೊ ಆನ್ಲೈನ್ನಲ್ಲಿ ವೈರಲ್ ಆಗಿದೆ. ವ್ಯಾಪಾರಿಯು ಮೊದಲಿಗೆ, ಮೋಮೋ ಜೊತೆಗೆ ತರಕಾರಿಗಳನ್ನು ಬಂಡಿಗೆ ಹಾಕುತ್ತಾನೆ. ನಂತರ ಬೆಂಕಿ ಹೊತ್ತಿಕೊಳ್ಳುತ್ತದೆ. ಬೆಂಕಿ ಆರಿದ ಬಳಿಕ ಸಾಸ್ಗಳನ್ನು ಹಾಕಿ ಪ್ಲೇಟ್ನಲ್ಲಿ ಬಡಿಸುತ್ತಾನೆ. ಅತ್ಯಂತ ಆಕರ್ಷಕವಾಗಿ ಕಾಣುವ ಫೈರ್ ಮೋಮೋ ಭಕ್ಷ್ಯದ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೊ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿಕೊಂಡಿದೆ. ಕೆಲವರು ಅನಾರೋಗ್ಯಕರ ತಿಂಡಿ ಎಂದು ಹೇಳಿದ್ದರೆ, ಇನ್ನು ಕೆಲವರು ರುಚಿಯಾಗಿರುವ ತಿಂಡಿ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಹೊಟ್ಟೆಯಲ್ಲಿ ಬೆಂಕಿ ಎಂದು ಮತ್ತೋರ್ವರು ತಮಾಷೆ ಮಾಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಇಲ್ಲಿಯವರೆಗೆ ಸುಮಾರು 93,525 ಲೈಕ್ಸ್ಗಳು ಲಭ್ಯವಾಗಿವೆ.
ಇದನ್ನೂ ಓದಿ:
Viral Video: ವಧುವಿನಂತೆ ರೆಡಿಯಾಗಿ ಕುಳಿತಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ
Viral Video: ಮದುವೆ ಗಡಿಬಿಡಿಯಲ್ಲಿಯೂ ತನಗಿಷ್ಟದ ಮ್ಯಾಗಿ ತಿನ್ನುತ್ತಾ ಕುಳಿತ ವಧು; ವಿಡಿಯೊ ನೋಡಿ