Shocking Video: ಜೀವಂತ ದೈತ್ಯ ಹಾವಿಗೆ ಮುತ್ತಿಡುತ್ತಾ ಐ ಲವ್ ಯು ಎಂದ ಯುವತಿ!
ಇಲ್ಲೋರ್ವ ಯುವತಿ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುತ್ತು ಕೊಡುತ್ತಾ ಐ ಲವ್ ಯು ಅನ್ನುತ್ತಿದ್ದಾಳೆ. ಭಯಾನಕ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಹಾವು ಅಂದಾಕ್ಷಣ ಯಾರಿಗೆ ಭಯವಿಲ್ಲ ಹೇಳಿ? ಹಾವಿನ ಹೆಸರು ಕೇಳಿದಾಗಲೇ ಮೈ ನಡುಗುತ್ತದೆ. ಅದರಲ್ಲಿಯೂ ಹಾವು ಮೈಮೇಲೆ ಹರಿದಾಡುತ್ತಿದೆ ಎಂಬುದನ್ನು ಊಹಿಸಿಕೊಳ್ಳಲೂ ಮೈ ಜುಂ ಅನ್ನುತ್ತದೆ. ಹಾಗಿರುವಾಗ ಇಲ್ಲೋರ್ವ ಯುವತಿ ಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುತ್ತು ಕೊಡುತ್ತಾ ಐ ಲವ್ ಯು ಅನ್ನುತ್ತಿದ್ದಾಳೆ. ಭಯಾನಕ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ವಿಡಿಯೊಗಳನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ. ಹೆಚ್ಚು ಕುತೂಹಲ ಮೂಡಿಸುವ ವಿಡಿಯೊಗಳು ಮನಗೆಲ್ಲುತ್ತವೆ. ಅವುಗಳಲ್ಲಿ ಕೆಲವು ವಿಡಿಯೊಗಳು ಬೆಚ್ಚಿಬೀಳಿಸುವಂತಿರುತ್ತವೆ. ಅಂಥಹುದೇ ವಿಡಿಯೊ ಇದಾಗಿದ್ದು ಯುವತಿ ಹಾವಿಗೆ ಮುತ್ತು ಕೊಡುತ್ತಿರುವುದನ್ನು ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ.
View this post on Instagram
ಮನೆಯಲ್ಲಿ ನಾಯಿ ಮರಿಯನ್ನು ಪ್ರೀತಿಸುವಂತೆ ಹಾವನ್ನು ಹಿಡಿದು ಮುದ್ದಾಡುತ್ತಾ ಚುಂಬಿಸುತ್ತಿದ್ದಾಳೆ ಯುವತಿ. ಈ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು ನಾನು ನನ್ನ ಹಾವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಯುವತಿ ಶೀರ್ಷಿಕೆ ನೀಡುವ ಮೂಲಕ ಪೋಸ್ಟ್ ಮಾಡಿದ್ದಾಳೆ. ಕೆಲವರು ವಿಡಿಯೊವನ್ನು ಇಷ್ಟಪಟ್ಟಿದ್ದು 5,000 ಕ್ಕೂ ಹೆಚ್ಚಿನ ಲೈಕ್ಸ್ಗಳನ್ನು ಗಳಿಸಿಕೊಂಡಿದೆ.
ಇದನ್ನೂ ಓದಿ:
Shocking Video: ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆದ ಮಾರಾಟಗಾರ; ಶಾಕಿಂಗ್ ವಿಡಿಯೊ ವೈರಲ್
Shocking Video: ದೈತ್ಯ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಮುದ್ದಾಡಿದ ವ್ಯಕ್ತಿ; ವಿಡಿಯೋ ನೋಡಿ