ಕೆಲವು ನೀರಾನೆಗಳನ್ನು(ಹಿಪ್ಪೋ) ಗುರುತಿಸುವ ಸಲುವಾಗಿ ಆಫ್ರಿಕಾದ ವಿಕ್ಟೋರಿಯಾ ಮಹಾಸರೋವರದಲ್ಲಿ ಸ್ನೇಹಿತರೆಲ್ಲ ಸೇರಿ ಪ್ರವಾಸ ಕೈಗೊಂಡಿರುತ್ತಾರೆ. ಅದೇ ವೇಳೆ ದೈತ್ಯಾಕಾರದ ನೀರಾನೆ ಅವರನ್ನು ಬೆನ್ನಟ್ಟಿ ಬಂದ ಆಘಾತಕಾರಿ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರಾನೆ ಬೆನ್ನಟ್ಟಿ ಬಂದ ದೃಶ್ಯ ನಿಜಕ್ಕೂ ಭಯ ಹುಟ್ಟಿಸುವಂತಿದೆ. ವಿಡಿಯೋ ಪೋಸ್ಟ್ ಆದ ಬಳಿಕ 1ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.
ಡಿಕನ್ ಮುಚೆನಾ ತನ್ನ ಸ್ನೇಹಿತರೊಂದಿಗೆ ಆಫ್ರಿಕಾ ಕೀನ್ಯಾದ ವಿಕ್ಟೋರಿಯಾ ಸರೋವರಕ್ಕೆ ಪ್ರವಾಸಕ್ಕೆಂದು ತೆರಳಿರುತ್ತಾರೆ. ವಿವಿಧ ನೀರಾನೆಗಳನ್ನು ಗುರುತಿಸುವುದಾಗಿ ಸ್ನೇಹಿತರೆಲ್ಲರೂ ಸ್ಪೀಡ್ ಬೋಟ್ನಲ್ಲಿ ಸಾಗುತ್ತಿರುತ್ತಾರೆ. ಮಾರ್ಗ ಮಧ್ಯದಲ್ಲಿ ಕೆಲವು ಹಿಪಪಾಟಮಸ್ಗಳನ್ನು(ಹಿಪ್ಪೋ) ಹುಡುಕಿದ್ದರೂ ಕೂಡಾ ಮುಂದೆ ಭಯಂಕರ ಘಟನೆಯೊಂದು ಸಂಭವಿಸುತ್ತದೆ ಎಂಬ ಊಹೆಯೂ ಅವರಿಗಿರಲಿಲ್ಲ.
‘ಈ ದೇಶವು ಹಿಪ್ಪೋಗಳ ಬಂದರು ಎಂದು ನಮಗೆ ತಿಳಿದಿತ್ತು. ಪ್ರವಾಸ ಕೈಗೊಂಡ ಸಮಯದಲ್ಲಿ ಯಾವ ದೈತ್ಯಾಕಾರದ ಹಿಪ್ಪೋಗಳೂ ಎದುರು ಬಂದಿರಲಿಲ್ಲ. ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ನಾವು ಬಯಸಿದ್ದೆವು. ಆದರೆ ನಮ್ಮ ಜೀವ ರಕ್ಷಣೆಗಾಗಿ ನಾವು ಹತ್ತಿರಕ್ಕೆ ಹೋಗುವ ಯಾವುದೇ ಸಾಹಸ ಮಾಡಿಲ್ಲ. ನಾವು ವೇಗದ ದೋಣಿಯಲ್ಲಿದ್ದೆವು. ಅದು ನಮ್ಮ ಅದೃಷ್ಟ. ಇದಾದ ಬಳಿಕ ನಾವು ಸುರಕ್ಷಿತವಾಗಿ ಕಡಲ ತೀರಕ್ಕೆ ಬಂದು ತಲುಪಿದೆವು’ ಎಂದು ಡಿಕೆನ್ ಮುಚೆನಾ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಗಿಳಿಯ ಹಾಡಿಗೆ ಸೋಲದವರಿದ್ದಾರೆಯೇ? ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು; ವಿಡಿಯೋ ವೈರಲ್
Published On - 12:49 pm, Wed, 2 June 21