Mumbai : ದೆಹಲಿಯ ಮೆಟ್ರೋ ಮತ್ತು ಮುಂಬೈ ಲೋಕಲ್ ಟ್ರೇನ್ಗಳು ನಿತ್ಯವೂ ಸುದ್ದಿಯಲ್ಲಿರುತ್ತವೆ. ಜಗಳ, ವಾಗ್ವಾದ, ಹೊಡದಾಟವಂತೂ ಸರ್ವೇ ಸಾಮಾನ್ಯ ಜೊತೆಗೆ ಈ ರೀಲಿಗರ ಹಾವಳಿ. ಇದೀಗ ಮುಂಬೈ ಲೋಕಲ್ ಟ್ರೇನಿನಲ್ಲಿ ಯುವತಿಯೊಬ್ಬಳು ಬೆಲ್ಲಿ ಡ್ಯಾನ್ಸ್ (Belly Dance) ಮಾಡಿದ್ದು ವಿವಾದವನ್ನು ಹುಟ್ಟುಹಾಕಿದೆ. ಈ ಯುವತಿಯೇನೋ ಆಕರ್ಷಕವಾಗಿ ಡ್ಯಾನ್ಸ್ ಮಾಡಿದ್ದಾಳೆ, ಆದರೆ ಆಕೆ ಡ್ಯಾನ್ಸ್ ಮಾಡಿದ ಸ್ಥಳ ಸೂಕ್ತವಾಗಿಲ್ಲ ಎನ್ನುವುದು ಕೆಲವರ ಅಂಬೋಣವಾದರೆ, ಇದು ಅಸಭ್ಯತನದ ಪರಮಾವಧಿ ಎಂದು ಇನ್ನೂ ಕೆಲವರು. ಒಟ್ಟಿನಲ್ಲಿ ಈ ರೀಲು ಹೀಗೆ ಅತ್ತಿಂದಿತ್ತ ಇತ್ತಿಂದಿತ್ತ ಎಳೆದಾಡಿ ವೈರಲ್ ಆಗಿದೆ.
ಇದನ್ನೂ ಓದಿ : Viral Brain Teaser: ಗಣಿತದ ಈ ಒಗಟನ್ನು ಒಂದು ನಿಮಿಷದಲ್ಲಿ ಬಿಡಿಸಬಹುದೆ?
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಸ್ಯಾಂಡ್‌ಹರ್ಸ್ಟ್ ನಿಲ್ದಾಣಗಳ ನಡುವಿನ ಮಧ್ಯ ರೈಲ್ವೆಯ ಉಪನಗರ ವಿಭಾಗದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ನಿಖರವಾದ ದಿನಾಂಕ ಮತ್ತು ಸ್ಥಳವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
Entertainment
Now Belly Dancing inside Mumbai Local Train.
It seems #MumbaiLocal Trains are the most happening place..to showcase talent.
Locations seems to be @Central_Railway between Sandhurst Road & Masjid stations.@drmmumbaicr @RailMinIndia @RailMinIndia pic.twitter.com/LI1vFchnHw
— मुंबई Matters™ (@mumbaimatterz) September 19, 2023
X ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಒಟ್ಟಾರೆಯಾಗಿ ನೆಟ್ಟಿಗರು ಈ ಯುವತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಲು ವಿಫಲಳಾಗಿರುವ ಈಕೆಯನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಲೈಕ್ಸ್ಗಾಗಿ ಜನ ಏನನ್ನೂ ಮಾಡುತ್ತಾರೆ. ಈಕೆಗೆ ಕೌನ್ಸೆಲಿಂಗ್ಗೆ ಕಳಿಸಬೇಕು. ಈ ವಿಡಿಯೋ ಮಾಡಲು ಸಹಕರಿಸಿದವರು ಯಾರೇ ಇದ್ದರೂ ಅವರಿಗೂ ಶಿಕ್ಷೆಯಾಗಬೇಕು ಎಂದಿದ್ದಾರೆ.
ಇದನ್ನೂ ಓದಿ : Viral: ‘ನನ್ನದು ಭಾರತದಲ್ಲಿ ತಯಾರಿಸಿದ ಐಫೋನ್ 15’ ಹೆಮ್ಮೆಪಟ್ಟ ನಟ ಮಾಧವನ್
ರೀಲಿಗರ ಹಾವಳಿ ತಪ್ಪಿಸಲು ಪ್ರತೀ ಕಂಪಾರ್ಟ್ಮೆಂಟ್ನಲ್ಲಿ ಪೊಲೀಸರನ್ನು ನೇಮಿಸುವುದು ಅಸಾಧ್ಯ. ಹಾಗಾಗಿ ಪ್ರಯಾಣಿಕರೇ ಇವರನ್ನು ತಡೆಯಬೇಕು. ಆದರೆ ಇತರರಿಗೆ ಹಾನಿ ಮಾಡಲಾರರು ಎಂದು ಇಂಥವರನ್ನು ಬೆಂಬಲಿಸುವವರೂ ಇರುತ್ತಾರೆ. ಒಟ್ಟಾರೆಯಾಗಿ ಅಧಿಕಾರಿಗಳು ಇಂಥವರಿಗೆ ತಾಕೀತು ಮಾಡಬೇಕು ಎಂದಿದ್ಧಾರೆ ಹಲವಾರು ಮಂದಿ.
ಇದನ್ನೂ ಓದಿ : Viral: ತನ್ನ ಅಚ್ಚುಮೆಚ್ಚಿನ ‘ಜೀವಂತ ತಲೆದಿಂಬಿನೊಂದಿಗೆ’ ತಪ್ಪಿಸಿಕೊಂಡಿದ್ದ ಎರಡು ವರ್ಷದ ಹೆಣ್ಣುಮಗು
ಮುಂಬೈ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಈ ವೀಡಿಯೊ ವೈರಲ್ ಆದ ಗಮನಹರಿಸಿದ್ದಾರೆ. ರೈಲು ಪ್ರಯಾಣದ ಸಮಯದಲ್ಲಿ ಇಂತಹ ಚಟುವಟಿಕೆಗಳು ಮತ್ತು ಸಾಹಸಗಳನ್ನು ಮಾಡಕೂಡದೆಂದು ತಿಳಿಸಿದ್ಧಾರೆ. ರೈಲುಗಳು ಸಾರ್ವಜನಿಕ ಸಾರಿಗೆಯ ಸಾಧನವಾಗಿದ್ದು ಇಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ