ಇದೀಗ ಮಳೆಗಾಲ ಆರಂಭವಾಗಿಬಿಟ್ಟಿದೆ. ಈ ಋತುಮಾನದಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಮಿಂಚು ಬರುವುದು ಸಾಮಾನ್ಯ. ಇದೇ ಕಾರಣಕ್ಕಾಗಿ ಹೆಚ್ಚಿನವರು ಜೋರು ಮಳೆ ಬರುವ ಸಂದರ್ಭದಲ್ಲಿ ಮನೆಯಿಂದ ಹೊರ ಬರಲು ಭಯಪಡುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಮಾತ್ರ ಮಳೆಯಲ್ಲಿ ಒಂದು ರೀಲ್ಸ್ ಮಾಡೋಣಾ, ಚೆನ್ನಾಗಿರುತ್ತೆ ಎಂದು ಜೋರು ಮಳೆ ಬರುವಾಗ ಮನೆಯ ಟೆರೆಸ್ ಮೇಲೆ ರೀಲ್ಸ್ ವಿಡಿಯೋ ಮಾಡಲು ಹೋಗಿದ್ದು, ಅದೇ ಸಂದರ್ಭದಲ್ಲಿ ಅಲ್ಲೇ ಪಕ್ಕದ ಕಟ್ಟಡಕ್ಕೆ ಸಿಡಿಲು ಬಡಿದಿದೆ. ಯುವತಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಆಘಾತಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಬಿಹಾರದ ಸೀತಾಮರ್ಹಿ ಎಂಬಲ್ಲಿ ನಡೆದಿದ್ದು, ಭಾರೀ ಮಳೆಯ ನಡುವೆಯೇ ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ ಪಜೀತಿಗೆ ಸಿಲುಕಿದ್ದಾಳೆ. ಜೋರು ಮಳೆ ಬರುವಾಗ ಗುಡುಗು ಮಿಂಚು ಬರುತ್ತೆ ಎಂಬುದನ್ನೂ ಮರೆತು ಯುವತಿ ಮನೆಯ ಮೇಲೆ ರೀಲ್ಸ್ ಮಾಡಲು ಹೋಗಿದ್ದು, ಅದೇ ಸಂದರ್ಭದಲ್ಲಿ ಅಲ್ಲೇ ಪಕ್ಕದ ಕಟ್ಟಡಕ್ಕೆ ಸಿಡಿಲು ಬಡಿದಿದೆ. ಯುವತಿ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
@sdcworldoffl ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಬಿಹಾರದಲ ಸೀತಾಮರ್ಹಿಯಲ್ಲಿ ಬಾಲಕಿಯೊಬ್ಬಳು ರೀಲ್ಸ್ ವಿಡಿಯೋ ಮಾಡುತ್ತಿರುವಾಗ ಸಿಡಿಲು ಬಡಿದಿದ್ದು, ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
A Girl was making a reel video in Sitamarhi, Bihar when lightning struck her from the sky, The woman survived the lightning strike🤯#bihar #lightning #sdcworld #life #reels pic.twitter.com/BN2PU5oJ0C
— SDC World (@sdcworldoffl) June 26, 2024
ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ಭಾರೀ ಮಳೆಗೆ ರೀಲ್ಸ್ ವಿಡಿಯೋ ಮಾಡುತ್ತಿದ್ದಾಗ ಅಲ್ಲೇ ಪಕ್ಕದ ಕಟ್ಟಡಕ್ಕೆ ಸಿಡಲು ಬಡಿದಿದ್ದು, ಸಿಡಿಲಿನ ಬಡಿತಕ್ಕೆ ಹೆದರಿ ಯುವತಿ ರೀಲ್ಸ್ ಮಾಡುವುದನ್ನು ಮರೆತು ಕಾಲ್ಕಿತ್ತು ಓಡಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇಲ್ಲಿಗೆ ಕುಡ್ಕೊಂಡು ಬಂದಿದ್ಯೇನೋ.. ಕುಡುಕನನ್ನು ಕೋಪದಿಂದ ಎತ್ತೆಸೆದ ಕುಕ್ಕೆ ಸುಬ್ರಮಣ್ಯ ದೇಗುಲದ ಆನೆ
ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದ್ದು, ಜೋರು ಮಳೆಯಲ್ಲೂ ಈಕೆಯದ್ದು ಇದೆಂಥಾ ಹುಚ್ಚಾಟ ಎಂದು ರೀಲ್ಸ್ ವಿಡಿಯೋ ಮಾಡಿದ ಯುವತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ