ಯುವಕನೊಬ್ಬ ತನ್ನ ಪ್ರೇಯಸಿಯೊಂದಿಗೆ ಸಮಯ ಕಳೆಯಲು ಆಕೆಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಹೋಗಿ ಸಿಕ್ಕಿ ಬಿದ್ದಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗತ್ತಿದೆ. ಪ್ರೇಯಸಿಯನ್ನು ಮುದ್ದಾಡುತ್ತಿರುವಾಗಲೇ ಆಕೆಯ ಫೋಷಕರು ಮನೆಗೆ ಬಂದಿದ್ದು, ಈ ಸಮಯದಲ್ಲಿ ದಿಕ್ಕು ತೋಚದೇ ಯುವತಿ ಆತನನ್ನು ಕಬ್ಬಿಣದ ಸೂಟ್‌ಕೇಸ್ ಒಳಗೆ ಬಚ್ಚಿಟ್ಟಿದ್ದಾಳೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಒಡಿಶಾದಲ್ಲಿ ನಡೆದಿದೆ ಎಂದು ಎನ್ನಲಾಗುತ್ತಿದೆ.
ಮನೆಗೆ ಬಂದ ಪೋಷಕರಿಗೆ ಮಗಳ ಕೋಣೆಯೊಳಗೆ ಯಾರೋ ಇರುವುದು ಅನುಮಾನ ಬಂದಿದೆ. ಕೊನೆಗೆ ಯುವತಿಯಿಂದಲೇ ಸೂಟ್ ಕೇಸ್ ತೆರೆಸಿದಾಗ ಯುವಕನೊಬ್ಬಇರುವುದು ಪತ್ತೆಯಾಗಿದೆ.
ಇದನ್ನೂ ಓದಿ: ವಿಜಯದಶಮಿಯಂದು ಜನಿಸಿದ ಹೆಣ್ಣು ಮಗುವನ್ನು ದೇವಿಯಂತೆ ಅಲಂಕರಿಸಿದ ವೈದ್ಯೆ
@NCMIndiaa ಎಂಬ ಟ್ವಿಟರ್ ಖಾತೆಯಲ್ಲಿ ಅ. 18ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋ ಶೇರ್ ಮಾಡಿದ ಒಂದೇ ದಿನದಲ್ಲಿ 60 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಸಂಪೂರ್ಣವಾಗಿ ಒಡಿಯಾದಲ್ಲಿ ಮಾತನಾಡಲಾಗಿದ್ದು, ಆದ್ದರಿಂದ ಘಟನೆಯು ಒಡಿಶಾದಲ್ಲಿ ನಡೆದಿದೆ ಎಂದು ಎನ್ನಲಾಗುತ್ತಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:01 am, Sat, 19 October 24