Viral Video: ಕೇಶರಾಶಿಯಿಂದಲೇ ದೇಹ ಮುಚ್ಚಿಕೊಂಡು ಪೋಸ್ ಕೊಟ್ಟ ಯುವತಿ! ಹೊಸ ಶೈಲಿಯ ಉಡುಗೆ ಕಂಡು ಆಶ್ಚರ್ಯಗೊಂಡ ನೆಟ್ಟಿಗರು
ಯುವತಿಯ ಕೇಶರಾಶಿ ತುಂಬಾ ಉದ್ದವಾಗಿದೆ ಜತೆಗೆ ದಪ್ಪವಾಗಿಯೂ ಇದೆ. ದೇಹದಕ್ಕೆ ವಸ್ತ್ರ ತೊಟ್ಟಂತೆ ತನ್ನ ದೇಹವನ್ನು ಕೇಶರಾಶಿಯಿಂದ ವಿನ್ಯಾಸಗೊಳಿಸಿದ್ದಾಳೆ. ಜತೆಗೆ ಸ್ಟೈಲ್ ಆಗಿ ಕಾಣಿಸುವಂತೆ ಸೊಂಟಕ್ಕೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದಾಳೆ.
ಹೊಸ ಹೊಸ ಶೈಲಿಯ ಉಡುಗೆಯ ವಿನ್ಯಾಸ, ಜತೆಗೆ ಟ್ರೆಂಡ್ ಅನಿಸಿಕೊಳ್ಳುವ ಉಡುಗೆ ತೊಡುಗೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಅದಕ್ಕೆ ಸಂಬಂಧಿಸಿದಂತಹ ಫೋಟೋಗಳು ಮತ್ತು ವಿಡಿಯೋಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಅಂತಹುದೇ ಒಂದು ವಿಶೇಷ ಶೈಲಿಯ ಉಡುಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಉದ್ದವಾದ ಕಂದುಬಣ್ಣದ ತಲೆ ಕೂದಲಿನಿಂದಲೇ ಯುವತಿ ಇಡೀ ದೇಹವನ್ನು ಮುಚ್ಚಿಕೊಂಡು ಪೋಸ್ ಕೊಟ್ಟಿದ್ದಾಳೆ. ಈ ಉಡುಗೆಯನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
ವಿಡಿಯೋದಲ್ಲಿ ಗಮನಿಸುವಂತೆ ಯುವತಿ ತಲೆಗೆ ಟೋಪಿ ಮತ್ತು ಸೊಂಟಕ್ಕೆ ಬೆಲ್ಟ್ ಧರಿಸಿದ್ದಾಳೆ. ಅವಳ ತಲೆ ಕೂದಲಿನಿಂದಲೇ ಇಡೀ ದೇಹವನ್ನು ಮುಚ್ಚಿಕೊಂಡಿದ್ದಾಳೆ. ಹೊಸ ತರಹದ ಉಡುಪಿನಂತೆ ಗೋಚರವಾಗುತ್ತಿದೆ. ಕಂದು ಬಣ್ಣದ ಉಡುಗೆ ತೊಟ್ಟಂತೆ ಭಾಸವಾದರೂ ಕೇಶರಾಶಿಯಿಂದಲೇ ಇಡೀ ದೇಹವನ್ನು ಮುಚ್ಚಿಕೊಂಡಿದ್ದಾಳೆ. ಅವಳು ಪೋಸ್ ಕೊಡುತ್ತಿರುವ ದೃಶ್ಯವನ್ನು ಚಿಕ್ಕದಾಗಿ ವಿಡಿಯೋ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
View this post on Instagram
ಯುವತಿಯ ಕೇಶರಾಶಿ ತುಂಬಾ ಉದ್ದವಾಗಿದೆ ಜತೆಗೆ ದಪ್ಪವಾಗಿಯೂ ಇದೆ. ದೇಹದಕ್ಕೆ ವಸ್ತ್ರ ತೊಟ್ಟಂತೆ ತನ್ನ ದೇಹವನ್ನು ಕೇಶರಾಶಿಯಿಂದ ವಿನ್ಯಾಸಗೊಳಿಸಿದ್ದಾಳೆ. ಜತೆಗೆ ಸ್ಟೈಲ್ ಆಗಿ ಕಾಣಿಸುವಂತೆ ಸೊಂಟಕ್ಕೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದಾಳೆ.
ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. 4,000ಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಗಳೂ ಕೂಡಾ ಲಭ್ಯವಾಗಿದೆ. ಕೆಲವರು ಅವಳದ್ದು ನಿಜವಾಗಲೂ ಅಷ್ಟು ಉದ್ದದ ಕೇಶರಾಶಿಯೇ? ಎಂದು ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು ಅವಳು ಆರ್ಟಿಫಿಶಿಯಲ್ ತಲೆಕೂದಲನ್ನು ಅಳವಡಿಸಿಕೊಂಡಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ತಲೆ ಕೂದಲಿನ ಆರೈಕೆಗೆ ಇಲ್ಲಿದೆ ಮದ್ದು; ಕೇಶರಾಶಿಯ ಹೊಳಪು ಹೆಚ್ಚಿಸಲು ವೈದ್ಯರ ಸಲಹೆಗಳೇನು?
ರೌಡಿ ಬೇಬಿಯ ಹೆಲ್ತಿ ಕೇಶರಾಶಿ ಸೀಕ್ರೆಟ್ ತೆಂಗಿನಕಾಯಂತೆ!
Published On - 11:24 am, Sun, 27 June 21