ರೌಡಿ ಬೇಬಿಯ ಹೆಲ್ತಿ ಕೇಶರಾಶಿ ಸೀಕ್ರೆಟ್ ತೆಂಗಿನಕಾಯಂತೆ!
ಫಿದಾ ಬೆಡಗಿ ಸಾಯಿ ಪಲ್ಲವಿ ಸೌಂದರ್ಯಕ್ಕೆ ಮನಸೋತವರಿಲ್ಲ. ಸುಂದರವಾಗಿ ಕಾಣ್ಬೇಕು ಅಂತ ಮೇಕಪ್ ಮೊರೆ ಹೋಗುವವರ ನಡುವೆ ಈಕೆ ನ್ಯಾಚುರಲ್ ಲುಕ್ನಿಂದಲೇ ದಿಲ್ ಕದ್ದ ಚೋರಿ. ‘ಪ್ರೇಮಂ’ ಖ್ಯಾತಿಯ ಸಾಯಿ ಪಲ್ಲವಿ ತುಂಬಾನೇ ಸಿಂಪಲ್. ಸಿನಿಪ್ರಿಯರಿಗೆ ಹೆಚ್ಚು ಅಟ್ರಾಕ್ಟ್ ಆಗಿರುವುದು ಈಕೆಯ ಲಾಂಗ್ ಹೇರ್. ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ನ್ಯಾಚುರಲ್ ಲುಕ್ನಿಂದ ಗಮನ ಸೆಳೆದ ಇವರು ರಿಯಲ್ ಲೈಫ್ನಲ್ಲೂ ತುಂಬಾ ನ್ಯಾಚುರಲ್ ಆ್ಯಂಡ್ ಸಿಂಪಲ್. ಹಾಗಾಗಿ ಇವರು ತಮ್ಮ ಕೇಶರಾಶಿಗೆ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ […]
ಫಿದಾ ಬೆಡಗಿ ಸಾಯಿ ಪಲ್ಲವಿ ಸೌಂದರ್ಯಕ್ಕೆ ಮನಸೋತವರಿಲ್ಲ. ಸುಂದರವಾಗಿ ಕಾಣ್ಬೇಕು ಅಂತ ಮೇಕಪ್ ಮೊರೆ ಹೋಗುವವರ ನಡುವೆ ಈಕೆ ನ್ಯಾಚುರಲ್ ಲುಕ್ನಿಂದಲೇ ದಿಲ್ ಕದ್ದ ಚೋರಿ.
‘ಪ್ರೇಮಂ’ ಖ್ಯಾತಿಯ ಸಾಯಿ ಪಲ್ಲವಿ ತುಂಬಾನೇ ಸಿಂಪಲ್. ಸಿನಿಪ್ರಿಯರಿಗೆ ಹೆಚ್ಚು ಅಟ್ರಾಕ್ಟ್ ಆಗಿರುವುದು ಈಕೆಯ ಲಾಂಗ್ ಹೇರ್. ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ನ್ಯಾಚುರಲ್ ಲುಕ್ನಿಂದ ಗಮನ ಸೆಳೆದ ಇವರು ರಿಯಲ್ ಲೈಫ್ನಲ್ಲೂ ತುಂಬಾ ನ್ಯಾಚುರಲ್ ಆ್ಯಂಡ್ ಸಿಂಪಲ್. ಹಾಗಾಗಿ ಇವರು ತಮ್ಮ ಕೇಶರಾಶಿಗೆ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ರೀತಿಯ ಕೆಮಿಕಲ್ಸ್ಗಳನ್ನು ಪ್ರಯೋಗ ಮಾಡೋದಿಲ್ವಂತೆ.
ಸಾಯಿ ಪಲ್ಲವಿ ಅವರ ಕೇಶರಾಶಿಯ ಗುಟ್ಟು ತೆಂಗಿನಕಾಯಿ ಹಾಲಂತೆ. ಬ್ಯೂಟಿಫುಲ್ ಪಲ್ಲವಿ ತಿಂಗಳಿನಲ್ಲಿ ಎರಡು ಬಾರಿ ತಪ್ಪದೆ ತೆಂಗಿನ ಕಾಯಿ ಹಾಲನ್ನು ತಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡ್ತಾರಂತೆ. ತೆಂಗಿನಕಾಯಿ ಹಾಲಿನಲ್ಲಿ ಪ್ರೋಟೀನ್ ಮತ್ತು ಕೊಬ್ಬಿನಾಂಶ ಹೆಚ್ಚಿರುತ್ತೆ. ಇದರಲ್ಲಿರೋ ಕಬ್ಬಿಣ ಮತ್ತು ಮ್ಯಾಂಗನೀಸ್ ಅಂಶದಿಂದ ಕೂದಲ ಸಮೃದ್ಧ ಬೆಳವಣಿಗೆಗೆ ಸಹಕಾರಿಯಾಗುತ್ತಂತೆ.
ಒಂದು ವೇಳೆ ಕೂದಲು ಡ್ರೈ ಅನಿಸಿದ್ರೆ ತಾಜಾ ಅಲೊವೆರಾವನ್ನು ಕೂದಲಿಗೆ ಅಪ್ಲೈ ಮಾಡ್ತಾರಂತೆ. ಅಲೋವೆರಾ ಜೆಲ್ನಲ್ಲಿ ಉತ್ತಮ ಪೌಷ್ಟಿಕಾಂಶ ಇರುವುದರಿಂದ ಕೂದಲ ಸಮಸ್ಯೆಗಳನ್ನು ನಿವಾರಿಸುತ್ತಂತೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಪಲ್ಲವಿ ಎಗ್ ಹೇರ್ ಮಾಸ್ಕ್ ಹಚ್ಚಿಕೊಳ್ತಾರಂತೆ. ಇಷ್ಟು ಮಾತ್ರವಲ್ಲದೆ ಆಗಾಗ ತೆಂಗಿನಕಾಯಿ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುವುದರಿಂದ ಸುಂದರ ಮತ್ತು ದಪ್ಪ ಕೂದಲು ಇವರದ್ದಾಗಿದೆಯಂತೆ.
Published On - 6:06 pm, Sun, 20 October 19