Viral Video: ರೀಲ್ಸ್​ಗಾಗಿ ಧಮ್ ಹೊಡೆದ ಹುಡ್ಗಿ, ಮನೆಯಲ್ಲಿ ಬೆಲ್ಟ್ ಏಟು: ವಿಡಿಯೋ ನೋಡಿ

ವೈರಲ್​​ ಆಗಿರುವ ವಿಡಿಯೋದ ಪ್ರಾರಂಭದಲ್ಲಿ ಹುಡುಗಿ ಮಾಸ್​​ ಲುಕ್​​ನಲ್ಲಿ ರಾಜಾರೋಷವಾಗಿ ಸಿಗರೇಟ್​​ ಸೇದುತ್ತಾ, ಹೊಗೆ ಬಿಡುತ್ತಿದ್ದರೆ, ವಿಡಿಯೋದ ಅಂತ್ಯದಲ್ಲಿ ಅಪ್ಪನ ಬೆಲ್​ಟ್​​​​ ಏಟು ತಡೆಯಲಾರದೇ ಕಿರುಚಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಇಲ್ಲಿದೆ ನೋಡಿ

Viral Video: ರೀಲ್ಸ್​ಗಾಗಿ ಧಮ್ ಹೊಡೆದ ಹುಡ್ಗಿ, ಮನೆಯಲ್ಲಿ ಬೆಲ್ಟ್ ಏಟು: ವಿಡಿಯೋ ನೋಡಿ

Updated on: Jun 30, 2024 | 6:12 PM

ಪಶ್ಚಿಮ ಬಂಗಾಳ: ಸಿಗರೇಟ್​ ಸೇದುತ್ತಾ ಸ್ಟೈಲಿಶ್​​ ಆಗಿ ಹುಡುಗಿಯೊಬ್ಬಳು ರೀಲ್ಸ್​​​ ಮಾಡಿದ್ದು, ಬಳಿಕ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾಳೆ. ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆಯುತ್ತಿದ್ದಂತೆ ಖುಷಿಯಿಂದ ಕುಣಿಯುತ್ತಾ ಹೋದ ಹುಡುಗಿಗೆ ಮನೆಯಲ್ಲಿ ಬೆಲ್ಟ್ ಏಟು ಮೂಲಕ ಅಪ್ಪ ಅದ್ಧೂರಿ ಸ್ವಾಗತ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸದ್ಯ ಹುಡುಗಿಗೆ ಮನೆಯಲ್ಲಿ ಭರ್ಜರಿಯಾಗೇ ಏಟು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ವೈರಲ್​​ ಆಗಿರುವ ವಿಡಿಯೋದ ಪ್ರಾರಂಭದಲ್ಲಿ ಹುಡುಗಿ ಮಾಸ್​​ ಲುಕ್​​ನಲ್ಲಿ ಸಿಗರೇಟ್​​ ಸೇದುತ್ತಾ, ಹೊಗೆ ಬಿಡುತ್ತಾ ರಸ್ತೆಯಲ್ಲಿ ವಾಕ್​​ ಮಾಡುತ್ತಿರುವುದನ್ನು ಕಾಣಬಹುದು. ಆದರೆ ವಿಡಿಯೋದಲ್ಲಿ ಅಂತ್ಯದಲ್ಲಿ ಅಪ್ಪನ ಬೆಲ್​ಟ್​​​​ ಏಟು ತಡೆಯಲಾರದೇ ಕಿರುಚಾಡುವುದು ಸೆರೆಯಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮದುವೆಗೆ ಬಂದ ಅತಿಥಿಗಳಿಗೆ 66ಸಾವಿರ ರೂ. ನಗದು ಬಹುಮಾನ ; ಅದ್ದೂರಿ ಮದುವೆಯ ವಿಡಿಯೋ ವೈರಲ್​​​

@times_trending ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗಿದೆ. ಜೂನ್​​ 29ರಂದು ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 11ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us