Viral Video: ದೆಹಲಿ ಮೆಟ್ರೋದಲ್ಲಿ ಮತ್ತೆ ರೀಲಿಗರ ಹಾವಳಿ; ನಗಬೇಕೋ ಅಳಬೇಕೋ

Reels : ''ಮೈ ತೋ ಬೇಘರ್ ಹೂಂ'' ಹಾಡಿಗೆ ಇವರಿಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಇನ್ನುಮುಂದೆ ಮೆಟ್ರೋ ಪ್ರಯಾಣಿಕರಿಂದ ಟಿಕೆಟ್​​ನೊಂದಿಗೆ ಹೆಚ್ಚುವರಿ ಮನರಂಜನಾ ಶುಲ್ಕವನ್ನೂ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.

Viral Video: ದೆಹಲಿ ಮೆಟ್ರೋದಲ್ಲಿ ಮತ್ತೆ ರೀಲಿಗರ ಹಾವಳಿ; ನಗಬೇಕೋ ಅಳಬೇಕೋ
ದೆಹಲಿ ಮೆಟ್ರೋ ರೈಲಿನಲ್ಲಿ ಹುಡುಗಿಯರ ರೀಲ್​

Updated on: Jul 07, 2023 | 5:31 PM

Delhi Metro : ಮೆಟ್ರೋ ರೈಲಿನ ಕೋಚ್​​ಗಳಲ್ಲಿ ಸಾಮಾಜಿಕ ಜಾಲತಾಣಗಳಿಗಾಗಿ ಹಾಡು, ನೃತ್ಯದಂಥ ಮನರಂಜನಾತ್ಮಕ ವಿಡಿಯೋ ​ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ರೈಲು ಕಾರ್ಪೊರೇಷನ್ (DMRC) ಆಗಾಗ ಸಾರಿಕೊಳ್ಳುತ್ತಿರುತ್ತದೆ. ಆದರೂ ರೀಲ್​​ಗಳು ಆಗಾಗ್ಗೆ ವೈರಲ್ ಆಗುತ್ತ ನೆಟ್ಟಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿರುತ್ತವೆ. ಇದೀಗ ಮತ್ತೊಂದು ವಿಡಿಯೋದಲ್ಲಿ ಇಬ್ಬರು ಯುವತಿಯರು ಹಳೆಯ ಹಿಂದೀ ಚಿತ್ರಗೀತೆಗೆ ಹೆಜ್ಜೆ ಹಾಕಿದ್ದು, Hasna Zaroori Ha ಎಂಬ ಟ್ವಿಟರ್​ ಖಾತೆಯು ಇದನ್ನು ಹಂಚಿಕೊಂಡಿದೆ.

ಈ ಇಬ್ಬರು ಯುವತಿಯರು 1979ರಲ್ಲಿ ಬಿಡುಗಡೆಯಾದ ಸುಹಾಗ್​ ಸಿನೆಮಾದ ”ಮೈ ತೋ ಬೇಘರ್ ಹೂಂ” ಹಾಡಿಗೆ ನೃತ್ಯ ಮಾಡಿದ್ದಾರೆ. ಈ ಚಿತ್ರದಲ್ಲಿ ಶಶಿ ಕಪೂರ್ ಮತ್ತು ಪರ್ವೀನ್ ಬಾಬಿ ನಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಜುಲೈ 6 ರಂದು ಈ ವಿಡಿಯೋ ಪೋಸ್ಟ್​ ಮಾಡಲಾಗಿದೆ. ಈತನಕ ಸುಮಾರು 3 ಲಕ್ಷ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಸುಮಾರು 1,400 ಜನರು ಇಷ್ಟಪಟ್ಟಿದ್ದಾರೆ. 269 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Viral: ಬಾರ್ಬಿರೇಖಾ; ”ಇಲ್ಲಿ ನೋಡಿ ಸರ್” ಅಮಿತಾಬ್​ರನ್ನು ಟ್ಯಾಗ್​ ಮಾಡುತ್ತಿರುವ ನೆಟ್ಟಿಗರು

ನಿಷೇಧ ಹೇರಿದರೂ ಮೆಟ್ರೋ ಕೋಚ್​​​ಗಳಲ್ಲಿ ಅದು ಹೇಗೆ ಇವರೆಲ್ಲ ರೀಲ್ ಮಾಡುತ್ತಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನುಮುಂದೆ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಶಿಕ್ಷಿಸದೆ ಬಿಡಲೇಬಾರದು ಎಂದು ದೆಹಲಿ ಮೆಟ್ರೋವನ್ನು ಟ್ಯಾಗ್ ಮಾಡಿ ಟ್ವೀಟಿಸುತ್ತಿದ್ದಾರೆ. ಏನೇ ಹೇಳಿ ದೆಹಲಿ ಮೆಟ್ರೋ ರೈಲಿನಲ್ಲಿ ಸಿಗುವಷ್ಟು ಪುಕ್ಕಟೆ ಮನರಂಜನೆ ಇನ್ನೆಲ್ಲಿಯೂ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಕೆಲವರು. ಬಹುಶಃ ಇವರು ಹೊಸಬರಿರಬೇಕು ಈ ಊರಿಗೆ ಮತ್ತು ಮೆಟ್ರೋರೈಲಿಗೆ, ಅದಕ್ಕೇ ರೀಲು ಮಾಡಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ನೀವೇನಂತೀರಿ ಇದಕ್ಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:28 pm, Fri, 7 July 23