
ಗೋವಾ, ಜೂನ್ 1 : ಬೆಳ್ಳಂಬೆಳಗ್ಗೆ ಕಾವ್ ಕಾವ್ ಎಂದು ಮನೆಯ ಮುಂದೆ ಕೂಗುತ್ತಾ ಕುಳಿತಿರುವ ಕಾಗೆ (crow) ಯನ್ನು ಎಲ್ಲರೂ ನೋಡಿರುತ್ತೀರಿ. ತನಗೆ ಏನಾದರೂ ಸಿಕ್ಕರೆ ಸಾಕು, ತನ್ನ ಬಳಗವನ್ನು ಕರೆದು ಹಂಚಿ ತಿನ್ನುವ ಗುಣ ಈ ಕಾಗೆಯದ್ದು. ಇನ್ನು ನೀವೇನಾದ್ರೂ ಈ ಕಾಗೆಗಳ ಹತ್ತಿರ ಹೋದರೆ ಅವುಗಳು ಹೆದರಿಕೊಂಡು ಹಾರಿ ಹೋಗುವುದಿದೆ. ಆದರೆ ಇದೀಗ ಕಾಗೆಯೊಂದು ಬಾಲಕನೊಂದಿಗೆ ಫುಟ್ಬಾಲ್ (football) ಆಡಿದೆ. ಈ ಘಟನೆಯೂ ನಡೆದಿರುವುದು ಗೋವಾ (South Goa) ದಲ್ಲಿ ಎನ್ನಲಾಗಿದ್ದು, ಈ ಅಪರೂಪದ ವಿಡಿಯೋ ನೆಟ್ಟಿಗರ ಹೃದಯವನ್ನು ಗೆದ್ದುಕೊಂಡಿದೆ.
Chadefootball ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಅಪರೂಪದ ವಿಡಿಯೋದಲ್ಲಿ ದಕ್ಷಿಣ ಗೋವಾದಲ್ಲಿ ಕಾಗೆಯೊಂದು ಪುಟ್ಟ ಬಾಲಕನೊಂದಿಗೆ ಫುಟ್ಬಾಲ್ ಆಡುತ್ತಿರುವುದನ್ನು ಕಾಣಬಹುದು. ಇದು ಎಷ್ಟು ಸುಂದರವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಹುಡುಗನೊಬ್ಬನು ಕಾಗೆಯೊಂದಿಗೆ ಫುಟ್ಬಾಲ್ ಆಡುತ್ತಿದ್ದಾನೆ. ಹೌದು ಹುಡುಗನು ತನ್ನ ಕಾಲಿನಿಂದ ಚೆಂಡನ್ನು ಮೆಲ್ಲನೆ ಒದೆಯುತ್ತಾನೆ. ಆ ಚೆಂಡು ತನ್ನ ಹತ್ತಿರ ಬರುತ್ತಿದ್ದಂತೆ ಕಾಗೆಯೂ ಕೊಕ್ಕಿನಿಂದ ಚೆಂಡನ್ನು ಮುಂದಕ್ಕೆ ದೂಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ : ಈ ಕಣ್ಣಲ್ಲಿ ಇನ್ನು ಏನೇನ್ ನೋಡ್ಬೇಕೋ; ಕ್ಯಾಪ್ಸಿಕಂ ಬಳಸಿ ಕಪ್ ಕೇಕ್ ತಯಾರಿಸಿದ ಯುವತಿ
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ