Viral Video : ಅಜ್ಜಿಯ ವಾತ್ಸಲ್ಯ, ಅಕ್ಕರೆ ಎಂದರೆ ಸುಮ್ಮನೇನಾ? ಮಕ್ಕಳಷ್ಟೇ ಏಕೆ ಪ್ರಾಣಿಗಳೂ ಆಕೆಯ ಸಾನಿಧ್ಯವನ್ನು ಬಹಳ ಪ್ರೀತಿಸುತ್ತವೆ. ನಮ್ಮನ್ನು ಕಾಯುವ ದೊಡ್ಡ ದೈವ ಆಕೆ ಎಂಬಂಥ ಭದ್ರಭಾವ ಆಕೆಯ ಮಡಿಲಲ್ಲಿ ಸಿಗುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ಅಜ್ಜಿ ಊರಿಗೆ ಹೊರಟು ನಿಂತಿದ್ದಾರೆ. ತಮ್ಮ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಿದ್ಧಾರೆ. ಇದನ್ನು ನೋಡಿದ ಗೋಲ್ಡನ್ ರಿಟ್ರೈವರ್, ನೀ ಊರಿಗೆ ಹೋಗಬೇಡ. ನಾ ನಿನ್ನನ್ನು ಹೋಗೋದಕ್ಕೆ ಬಿಡುವುದಿಲ್ಲ ಎಂದು ಮುದ್ದಿನಿಂದ ಒತ್ತಾಯಿಸುತ್ತಿದೆ.
ಮುಫು ಎಂಬ ಈ ಮುದ್ದಾದ ನಾಯಿಗೆ ಯಾರು ಹೇಳಿದರು ಇದೆಲ್ಲವನ್ನೂ ಅರ್ಥ ಮಾಡಿಕೋ ಎಂದು? ಅಜ್ಜಿ ಬ್ಯಾಗಿಗೆ ತನ್ನ ಬಟ್ಟೆಗಳನ್ನು ತುಂಬುತ್ತಿದ್ದಂತೆ ಅವರನ್ನು ಹೋಗದಿರುವಂತೆ ತಡೆಯುವ ಪ್ರಯತ್ನ ನೋಡಿ, ಎಂಥ ಮುದ್ದಾಗಿದೆ. ಈ ವಿಡಿಯೋ ಅನ್ನು 6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಮನುಷ್ಯನ ಮನಸ್ಸನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುವ ಮತ್ತು ಸ್ಪಂದಿಸುವ ಮನೋಭಾವ ಎಲ್ಲ ಪ್ರಾಣಿಗಳಿಗಿಂತ ನಾಯಿಗಳಲ್ಲಿ ಹೆಚ್ಚು. ನೀವಾಗಿಯೇ ಮಾತನಾಡಿಸಬೇಕು ಎನ್ನುವ ಅಹಂ ಆಗಲಿ ಗತ್ತು ಆಗಲಿ ಇವುಗಳಲ್ಲಿ ಇರುವುದಿಲ್ಲ. ಅತ್ಯಂತ ವಿನಮ್ರ, ವಿಧೇಯ ಪ್ರಾಣಿ ನಾಯಿ. ಅದರಲ್ಲಿಯೂ ಗೋಲ್ಡನ್ ರಿಟ್ರೈವರ್ ನಾಯಿಗಳಂತೂ ಎಷ್ಟೇ ದೊಡ್ಡವಾದರೂ ತನ್ನನ್ನು ಮಗುವಿನಂತೆಯೇ ಅಚ್ಛಾ ಮಾಡು ಎಂದು ದುಂಬಾಲು ಬೀಳುವಂಥವು.
ಮನೆಯಲ್ಲಿರುವ ಯಾರೂ ಅದನ್ನು ಬಿಟ್ಟು ಎಲ್ಲಿಯೂ ಹೋಗಕೂಡದು. ಸದಾ ತನ್ನನ್ನೇ ಮುದ್ದು ಮಾಡಿಕೊಂಡಿರು ಎಂಬಂತೆ ವರ್ತಿಸುತ್ತವೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ