Viral Video: ‘ಪ್ರಾಮೀಸ್ ಅಮ್ಮಾ, ವಾಕಿಂಗ್ ಹೋದಾಗ ಇನ್ನು ಹೀಗೆಲ್ಲ ಮಾಡಲ್ಲ’

Trending Dog : ವಾಕಿಂಗ್ ಹೋದಾಗ ನಿಮ್ಮ ನಾಯಿ ಕೂಡ ಖಂಡಿತ ಹೀಗೆ ಮಾಡಿರತ್ತೆ! ನೋಡಿ ಈ ವಿಡಿಯೋ.

Viral Video: ‘ಪ್ರಾಮೀಸ್ ಅಮ್ಮಾ, ವಾಕಿಂಗ್ ಹೋದಾಗ ಇನ್ನು ಹೀಗೆಲ್ಲ ಮಾಡಲ್ಲ’
Edited By:

Updated on: Aug 08, 2022 | 11:40 AM

Viral : ಹೇಳಿಕೇಳಿ ಪ್ರಾಣಿ. ಅವುಗಳ ಸಾಂಗತ್ಯ ನಿಮಗೆ ಬೇಕು ಅಂತ ಸಾಕಿಕೊಂಡಿರ್ತೀರಿ. 24 ಗಂಟೆಯೂ ಮನೆಯೊಳಗೇ ಇಟ್ಟುಕೊಂಡರೆ ಅವುಗಳ ಮೂಲಸ್ವಭಾವ ಎಲ್ಲಿ ಹೋಗಬೇಕು? ಸಿಕ್ಕ ಅವಕಾಶದಲ್ಲೇ ಮೈಚಳಿಬಿಟ್ಟು ನಿಮ್ಮನ್ನು ಮುಜುಗರಕ್ಕೀಡುಮಾಡಿಬಿಡುತ್ತವೆ.  ನೀವೋ ಮನುಷ್ಯರು, ಮರ್ಯಾದೆಯನ್ನು ಕಿರೀಟವಾಗಿಸಿಕೊಂಡು ಓಡಾಡುವವರು. ಕೋಪ ಸರ್ ಅಂತ ನೆತ್ತಿಗೇರಿಬಿಡುತ್ತೆ. ನೀವು ಮನೆಗೆ ಬಂದು ಪಾಠ ಕಲಿಸ್ತೀರಿ ಅಂತ ಅವುಗಳಿಗೆ ಮೊದಲೇ ಗೊತ್ತಿರುತ್ತೆ. ಆಯ್ತಮ್ಮಾ ಇನ್ನು ಹೀಗೆ ಮಾಡಲ್ಲ ಅಂತ ಶರಣಾಗಿಬಿಡ್ತಾವೆ. ಆಗ ನಿಮ್ಮ ಮನಸ್ಸೂ ಶಾಂತ. ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಗೋಲ್ಡನ್ ರಿಟ್ರೈವರ್ ತಳಿಗೆ ಸೇರಿದ ಈ ನಾಯಿ ತನ್ನ ಅಮ್ಮನೊಂದಿಗೆ ವಾಕಿಂಗ್ ಹೋಗಿದೆ. ಅಲ್ಲಿ ಮರಳು ಕಾಣತಿದ್ದ ಹಾಗೆ ಹುಚ್ಚು ಹಿಡಿದಿದೆ. ತಂಪಾದ ಮರಳಿನಲ್ಲಿ ಆಟವಾಡೋದು ಅಂದ್ರೆ ಯಾವ ನಾಯಿಗೆ ಇಷ್ಟವಿಲ್ಲ?

ಉರುಳಾಡಿ, ಹೊರಳಾಡಿ, ಕೆದರಾಡಿ ಮನದಣಿಯೆ ಆಟವಾಡಿದೆ. ಮನೆಗೆ ಬಂದಿದ್ದೇ ಜೋಲುಮುಖ ಮಾಡಿಕೊಂಡು ತಪ್ಪೊಪ್ಪಿಗೆ ಕೇಳಿದೆ. ಈ ವಿಡಿಯೋವನ್ನು 44,000 ಜನರು ಇಷ್ಟಪಟ್ಟಿದ್ದಾರೆ. ಸಿವಿಲ್ ಎಂಜಿನಿಯರ್ ಎಂದೊಬ್ಬರು ಕಮೆಂಟ್ ಮಾಡಿದ್ದಾರೆ. ವೆರಿಗುಡ್​ ಬಾಯ್ ಎಂದು ಕೆಲವರು ಹೇಳಿದ್ದಾರೆ.

ಮತ್ತಷ್ಟು ಇಂಥ ವೈರಲ್​ ವಿಡಿಯೋ ನೋಡಲು ಕ್ಲಿಕ್ ಮಾಡಿ