Viral Video: ಏನು ಹುಡುಕಿಕೊಂಡು ಇಲ್ಲಿಗೆ ಬಂದಿತೋ ಈ ಘೇಂಡಾಮೃಗ
Rhino Viral Video : ಇದ್ದಕ್ಕಿದ್ದ ಹಾಗೆ ನಿಮ್ಮ ಬೀದಿಯಲ್ಲಿ ಘೇಂಡಾಮೃಗವೊಂದು ಬಂದರೆ ಹೇಗಿರುತ್ತದೆ? ಕಲ್ಪಿಸಿಕೊಳ್ಳಬೇಡಿ, ವಿಡಿಯೋ ನೋಡಿಬಿಡಿ.

Viral Video of Rhino: ಕಾಡು ಬಿಟ್ಟು ನಾಡಿಗೆ ಓಡಿಬಂದ ಘೇಂಡಾಮೃಗದ ವಿಡಿಯೋ ಈಗ ವೈರಲ್ ಆಗಿದೆ. ಈಗಾಗಲೇ ಸಾಕಷ್ಟು ಕಾಡುಪ್ರಾಣಿಗಳ ಅಪರೂಪದ ವಿಡಿಯೋ ಟ್ವಿಟರ್ಗೆ ಅಪ್ಲೋಡ್ ಮಾಡಿದ ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಅವರೇ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೆಲವೊಮ್ಮೆ ಕಾಡುಪ್ರಾಣಿಗಳು ವಿಹರಿಸುತ್ತ ದಾರಿತಪ್ಪಿಬಿಡುತ್ತವೆ. ತಾವಿದ್ದ ಪ್ರದೇಶಗಳಿಗೆ ಮರಳುವಾಗ ಹೀಗೆ ದಿಕ್ಕುತಪ್ಪಿ ನಾಡಿನೊಳಗೆ ಪ್ರವೇಶಿಸುತ್ತವೆ. ಅದಕ್ಕಾಗಿ ಗೊಂದಲಕ್ಕೊಳಗಾಗಬೇಕಿಲ್ಲ. ಅವುಗಳ ಪಾಡಿಗೆ ಅವುಗಳನ್ನು ಬಿಟ್ಟರೆ ದಾರಿ ಹುಡುಕಿಕೊಂಡು ಹೋಗುತ್ತಿರುತ್ತವೆ ಅಥವಾ ಅರಣ್ಯ ಇಲಾಖೆಯವರೇ ಬಂಧಿಸಿ ಮರಳಿ ಕಾಡಿಗೆ ಬಿಡುತ್ತಾರೆ.
ಈ ವಿಡಿಯೋದಲ್ಲಿ ಖಾಲೀ ರಸ್ತೆಯಲ್ಲಿ ಘೇಂಡಾ ಓಡಿಬರುತ್ತಿದ್ದುದನ್ನು ನೋಡಿ ಕಪ್ಪುನಾಯಿಯೊಂದು ಹೆದರಿ ಪಕ್ಕಕ್ಕೆ ಸರಿಯುತ್ತದೆ. ಅದು ಓಡುವ ವೇಗಕ್ಕೆ ಆಟೋನಲ್ಲಿದ್ದ ಡ್ರೈವರ್ ಗಾಬರಿಯಿಂದ ಆಚೆ ಬಂದು ತನ್ನನ್ನು ತಾ ರಕ್ಷಿಸಿಕೊಳ್ಳುವತ್ತ ಧಾವಿಸುತ್ತಾನೆ. ಯಾರಿಗೂ ಇದು ಭಯತರಿಸುವಂಥ ದೃಶ್ಯವೇ.
When the human settlement strays into a rhino habitat… Don’t confuse with Rhino straying in to a town pic.twitter.com/R6cy3TlGv1
— Susanta Nanda IFS (@susantananda3) August 5, 2022
ಈ ವಿಡಿಯೋ 74, 000 ಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. ಹಲವಾರು ಮಂದಿ ಘೇಂಡಾಮೃಗ ಸುರಕ್ಷಿತವಾಗಿ ಕಾಡು ತಲುಪಿದರೆ ಸಾಕು ಎಂದು ನೆಟ್ಟಿಗರು ಹಾರೈಸಿದ್ದಾರೆ. ಈ ಘಟನೆಯ ನಂತರ ಸ್ಥಳೀಯವಾಗಿ ಯಾವುದೇ ಅಪಾಯ ಸಂಭವಿಸಿಲ್ಲ ತಾನೆ? ಎಂದೂ ಪ್ರತಿಕ್ರಿಯೆಗಳ ಮೂಲಕ ಕೆಲವರು ವಿಚಾರಿಸಿಕೊಂಡಿದ್ದಾರೆ.
ಇಂಥ ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ