Viral Video: ಬೇಕಾ ಈ ಹೆಲಿಕಾಪ್ಟರ್ ಭೇಲ್ಪುರಿ?
Trending Video : ಇದನ್ನು ನೋಡಿದ ನೆಟ್ಟಿಗರು, ‘ಬೇಕಾ ಸ್ಟೀಲ್ ಫ್ಲೇವರ್ ಭೇಲ್ಪುರಿ?’, ‘ಇನ್ನೇನು ಬೆಂಕಿ ಹತ್ಕೊಂಡ್ರೂ ಹತ್ಕೊಬಹುದು...‘ ಎನ್ನುತ್ತಿದ್ದಾರೆ ಯಾಕೆ? ನೋಡಿ ಈ ವಿಡಿಯೋ.

Viral Video Today: ಕೆಲದಿನಗಳ ಹಿಂದೆ ಕಲ್ಲಂಗಡಿ ಮಾರುವವನೊಬ್ಬ ಲಾಲಮ್ ಲಾಲ್ ತರಬೂಜ್ ಎಂದು ಚಿತ್ರವಿಚಿತ್ರ ಮುಖ ಮಾಡಿ ಕೂಗುವ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದಿರಿ. ಈಗಿಲ್ಲಿ ಭೇಲ್ಪುರಿ ಮಾರಾಟಗಾರನೊಬ್ಬ ಭೇಲ್ಪುರಿ ತಯಾರಿಸುವ ಸೃಜನಾತ್ಮಕ ರೀತಿಗೆ, ಅವನ ಗಿರಾಕಿಗಳು ಹೆಲಿಕಾಪ್ಟರ್ ಭೇಲ್ಪುರಿ ಎಂದು ಹೆಸರಿಟ್ಟು ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೆಲಿಕಾಪ್ಟರ್ ಭೇಲ್! ಹೇಗದು? ಹೇಗೆ ಮಾಡುವುದು ಎಂದು ನಿಮ್ಮಲ್ಲಿ ಗೊಂದಲ ಉಂಟಾಗಿರಬೇಕಲ್ಲ? ಭೇಲ್ಪುರಿ ತಯಾರಿಸಲು ಹಾಕುವ ಪದಾರ್ಥಗಳಿಗೂ ಈ ಹೆಸರಿಗೂ ಸಂಬಂಧವಿಲ್ಲ. ಅವನು ಪಾತ್ರೆಯಲ್ಲಿ ಎಲ್ಲ ಪದಾರ್ಥಗಳನ್ನು ಹಾಕಿ ಗಿರಗಿರ ಎಂದು ಎಷ್ಟೋ ಹೊತ್ತಿನ ತನಕ ತಿರುಗಿಸುತ್ತಾನಲ್ಲ ಅದಕ್ಕೆ ಹೆಲಿಕಾಪ್ಟರ್ ಭೇಲ್ಪುರಿ ಎಂದು ಹೇಳುತ್ತಿದ್ದಾರೆ.
ಪಾತ್ರೆಯಲ್ಲಿ ಚುರುಮುರಿ, ಈರುಳ್ಳಿ, ಕೊತ್ತಂಬರಿ, ಚಟ್ನಿ, ಆಲೂಗಡ್ಡೆ, ಮಸಾಲಾ ಉಪ್ಪು, ಖಾರ ಹಾಕಿ ದೊಡ್ಡ ಚಮಚದಲ್ಲಿ ತಿರುಗಿಸುತ್ತಲೇ ಇರುತ್ತಾನೆ. ಆ ಶಬ್ದ, ಆ ವೇಗ ನೋಡಿದ ಯಾರಿಗೂ ಹೆಲಿಕಾಪ್ಟರ್ನ ರೆಕ್ಕೆಗಳು ಕಣ್ಮುಂದೆ ಬರದಿರುತ್ತವೆಯೇ?
View this post on Instagram
ಈ ವಿಡಿಯೋ ಈಗ 93 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. 3,370 ಲೈಕ್ಗಳನ್ನು ಹೊಂದಿದೆ. ‘ಇನ್ನೇನು ಕಿಡಿ ಹೊತ್ತೇ ಬಿಡುತ್ತದೆ’ ಎಂದು ಕ್ಯಾಪ್ಷನ್ನಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವರು, ‘ವಾಹ್ ಸ್ಟೀಲ್ ಫ್ಲೇವರ್’ ಎಂದಿದ್ದಾರೆ. ‘ಟರ್ಬೈನ್ ಹಚ್ಚಿ ಚೆಕ್ ಮಾಡಿ’ ಎಂದು ತಮಾಷೆ ಮಾಡಿದ್ದಾರೆ ಯಾರೋ ಒಬ್ಬರು. ‘ಜನರೇಟರ್ ಶುರು ಮಾಡುವಂತಿದೆ ಈ ಶಬ್ದ’ ಅಂತಲೂ ಅಂದಿದ್ದಾರೆ ಮತ್ತೊಬ್ಬರು.
ಮತ್ತಷ್ಟು ಟ್ರೆಂಡಿಂಗ್ ವಿಡಿಯೋ ನೋಡಲು ಕ್ಲಿಕ್ ಮಾಡಿ