Viral : ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾದ ಬಹುಪಾಲು ಪ್ರದೇಶಗಳು ವಾತಾವರಣ ವೈಪರೀತ್ಯಕ್ಕೆ ಒಳಗಾಗುತ್ತಿವೆ. ಅತಿಯಾದ ಮಳೆ, ಗುಡುಗು, ಸಿಡಿಲು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಆಗಸ್ಟ್ 5ರಂದು ಮೆಕ್ಕಾದಲ್ಲಿ ಮಧ್ಯರಾತ್ರಿ ದೊಡ್ಡ ಸಿಡಿಲೊಂದು ಗಡಿಯಾರ ಗೋಪುರಕ್ಕೆ ಬಡಿದು ಅದು ಆಕಾಶದಲ್ಲಿ ಮರದ ಟಿಸಿಲುಗಳು ಮೂಡಿದಂತೆ ಮೂಡಿ ಮರೆಯಾದ ರೀತಿ ನೆಟ್ಟಿಗರನ್ನು ಚಕಿತರನ್ನಾಗಿಸಿದೆ. ಈತನಕ 61 ಸಾವಿರ ವೀಕ್ಷಣೆಗೆ ಈ ವಿಡಿಯೊಓ ಒಳಪಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆ ಬೀಳುತ್ತಿದೆ. ದಶಕದಿಂದ ಇಲ್ಲಿಯ ವಾತಾವರಣ ತೇವಾಂಶದಿಂದ ಕೂಡಿದೆ ಎಂದು ಅಲ್ ಅರೇಬಿಯಾ ವರದಿ ಮಾಡಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ಹವಾಮಾನ ಕೇಂದ್ರ (NCM)ವು ಪ್ರಕಾರ 30 ವರ್ಷಗಳಲ್ಲಿ ಪ್ರಸಕ್ತ ಸಾಲಿನ ಜುಲೈ ಅತ್ಯಂತ ತೇವಾಂಶದಿಂದ ಕೂಡಿದ ತಿಂಗಳಾಗಿದೆ ಎಂದು ದಾಖಲಿಸಿದೆ. ಒಟ್ಟಾರೆಯಾಗಿ ಇಲ್ಲಿ ಇನ್ನೂ ಹೆಚ್ಚನ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
Lightning splits sky over #Mecca #SaudiArabia #مكة #مكه_الان pic.twitter.com/jZSpfPAitB
— sebastian usher (@sebusher) August 5, 2022
ಹೀಗೆ ಮಳೆ ಬೀಳುತ್ತಿದ್ದರೆ ಇನ್ನೇನು ಮಾಡುವುದು? ಹಗಲೆಲ್ಲಾ ಕೆಲಸ ಮಾಡಿ, ರಾತ್ರಿಯಲ್ಲಿ ಹೀಗೆ ಆಕಾಶದಲ್ಲಿ ಮಿಂಚಿ ಮರೆಯಾಗುವ ಬಳ್ಳಿಗಳನ್ನು ನೋಡುತ್ತ ಕುಳಿತುಕೊಳ್ಳುವುದು. ಇದನ್ನು ನೆಟ್ಟಿಗರು ಹಂಚಿಕೊಳ್ಳುವುದು… ಇದು ಎಲ್ಲಿಗೆ ಬಂದು ನಿಲ್ಲುತ್ತದೆಯೋ ಆ ಆಕಾಶರಾಯನೇ ಹೇಳಬೇಕು.