Viral post : ‘ನನ್ನ ಮದುವೆಯಲ್ಲಿ ನಿಮ್ಮ ಊಟದ ಖರ್ಚು ನಿಮ್ಮದೇ’ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ವಧು
Marriage : ಮದುವೆಯನ್ನು ಮುಂದೂಡಬೇಕೋ ಅಥವಾ ಹೀಗೆ ಮಾಡುವುದು ಸರಿಯೋ? ಎಂದು ಕೇಳಿದ ವಧುವಿಗೆ ನೆಟ್ಟಿಗರು ನೀಡಿದ ಸಲಹೆ ಇಲ್ಲಿದೆ.

Viral : ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಇಂದಿಗೂ ಚಾಲ್ತಿಯಲ್ಲಿದೆ ಎಂದರೆ ಯೋಚಿಸಿ. ಮದುವೆ ಎನ್ನುವುದು ಎಷ್ಟು ದೊಡ್ಡ ಹೊರೆ. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಇದು ಹೇಗೆಲ್ಲ ಯೋಚಿಸುವಂತೆ ಮಾಡುತ್ತಿದೆ. ವಾಸ್ತವದಲ್ಲಿ ಪರಿಹಾರ ಸಿಗದಿದ್ದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇಂಥ ಪೋಸ್ಟ್ಗಳು ಕಾಣಿಸಿಕೊಳ್ಳುವುದು. ಈಗಿಲ್ಲಿ ಒಬ್ಬ ವಧುವಿಗೆ ಇದೇ ಪರಿಸ್ಥಿತಿ ಉಂಟಾಗಿದೆ. ತನ್ನ ಮದುವೆಯ ಆಮಂತ್ರಣ ಪತ್ರಿಕೆ ಹಂಚಿದ್ದಾಳೆ. ಆದರೂ ಮದುವೆಗಾಗಿ ಹಣ ಹೊಂದಿಸುವುದು ಮುಗಿದೇ ಇಲ್ಲ. ಕೊನೆಗೆ ರೋಸಿಹೋದ ಈಕೆ ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾಳೆ. ತನ್ನ ಈ ಪರಿಸ್ಥಿತಿಗೆ ನೆಟ್ಟಿಗರಲ್ಲಿ ಸಲಹೆ ಕೋರಿದ್ದಾಳೆ. ಈ ಪೋಸ್ಟ್ ಈಗ ವೈರಲ್ ಆಗಿದೆ.
ಪೋಸ್ಟ್ ಹೀಗಿದೆ, ‘ಮದುವೆಗೆ ಕರೆದು, ತಮ್ಮ ಊಟದ ಖರ್ಚನ್ನು ತಾವೇ ಭರಿಸಬೇಕೆಂದು ಯಾರಾದರೂ ಕೇಳುತ್ತಾರೆಯೇ? ಈಗ ಎಲ್ಲವೂ ತುಟ್ಟಿಯಾಗಿ ಕುಳಿತಿದೆ. ಇಂಥ ಸಂದರ್ಭದಲ್ಲಿ ಏನು ಮಾಡುವುದು? ಅಕ್ಟೋಬರ್ಗೆ ಮದುವೆ ಮುಂದೂಡದೆ ವಿಧಿಯಿಲ್ಲ ಅಥವಾ ಮದುವೆಗೆ ಅತಿಥಿಗಳನ್ನು ಕರೆಯದೇ ಇರಬಹುದು. ಕರೆದರೂ ಉಡುಗೊರೆ ಬದಲಾಗಿ ತಮ್ಮ ಊಟದ ಖರ್ಚನ್ನು ಅವರೇ ಭರಿಸುವಂತಾಗಬೇಕು. ಈಗಾಗಲೇ ನಾನು ಅತಿಥಿಗಳಿಗೆ ಆಮಂತ್ರಣವನ್ನು ಕಳಿಸಿದ್ದೇನೆ. ಆದರೆ ಪರಿಸ್ಥಿತಿ ಹೀಗಿದೆ. ನಾನು ತುಂಬಾ ಒತ್ತಡದಲ್ಲಿದ್ದೇನೆ. ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ.’
ಅವಳ ಈ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸಿದ ನೆಟ್ಟಿಗರು, ‘ಆಕೆ ಅತಿಥಿಗಳಿಂದ ಉಡುಗೊರೆ ನಿರೀಕ್ಷಿಸದೇ ಇದ್ದರೆ, ಅತಿಥಿಗಳು ತಮ್ಮ ಊಟದ ಖರ್ಚನ್ನು ತಾವೇ ಭರಿಸುವುದು ಸೂಕ್ತ’ ಎಂದಿದ್ದಾರೆ. ಇನ್ನೊಬ್ಬರು, ‘ಮದುವೆಯ ಊಟಕ್ಕೆ ನೀವೇ ಹಣ ಪಾವತಿಸಬೇಕು ಎಂದು ನನ್ನನ್ನು ವೈಯಕ್ತಿಕವಾಗಿ ಕೇಳಲ್ಪಟ್ಟಿದ್ದರೆ ನಾನು ಖುಷಿಯಿಂದ ಪಾಲ್ಗೊಳ್ಳುತ್ತಿದ್ದೆ. ಏಕೆಂದರೆ ಕೆಲ ಕುಟುಂಬಗಳು ಪರಸ್ಪರ ಖುಷಿಯಿಂದ ಕಳೆಯಲು ಒಂದು ಅವಕಾಶದಂತೆ ಈ ಮದುವೆಗಳು. ಹಾಗಾಗಿ ಈ ನಿಲುವು ವಾಸ್ತವದಲ್ಲಿ ತಿಳಿವಳಿಕೆಯಿಂದ ಕೂಡಿದೆ’ ಎಂದಿದ್ದಾರೆ.
‘ಮದುವೆಯೂಟಕ್ಕೆ ಸೂಕ್ತಬೆಲೆ ನಿಗದಿ ಮಾಡಿದಲ್ಲಿ ಮತ್ತು ಉಡುಗೊರೆಗಳನ್ನು ನಿರೀಕ್ಷಿಸದಿದ್ದಲ್ಲಿ ನಾನಿದನ್ನು ಒಪ್ಪುತ್ತೇನೆ.’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ನನ್ನ ತಂದೆ ತಮ್ಮ ಮದುವೆಯಲ್ಲಿ ಹೀಗೆಯೇ ಮಾಡಿದ್ದರು. ಉಡುಗೊರೆಗಳು ಬೇಡ. ಆದರೆ ಊಟದ ಖರ್ಚನ್ನು ಪಾವತಿಸಿ.’ ಎಂದಿದ್ದಾರೆ ಇನ್ನೂ ಒಬ್ಬರು.
ನೆಟ್ಟಿಗರೆಲ್ಲರೂ ಈ ಹುಡುಗಿಯ ಅಭಿಪ್ರಾಯವನ್ನು ಬೆಂಬಲಿಸಿದ್ಧಾರೆ ಎಂದರೆ ವಾಸ್ತವವನ್ನು ಯೋಚಿಸಬೇಕಾದ್ದೇ.
ಇನ್ನಷ್ಟು ಇಂಥ ಸುದ್ದಿ ಓದಲು ಕ್ಲಿಕ್ ಮಾಡಿ
Published On - 3:44 pm, Sun, 7 August 22